ದಸರಾ ದರ್ಬಾರು
ಸವಿತಾ ರವಿಶಂಕರ್, ಕೇರಿ-ಉತ್ತರ ಕೆರೋಲಿನ
ಹದಿನೈದಿಪ್ಪತ್ತ್ ಮೆಟ್ಟಲ ಕಟ್ಟಿ
ರೇಶಿಮೆ ಜರಿ ಬಿಳಿ ಚಾದರವಿಟ್ಟಿ
ಪೆಟ್ಟಿಗಿ ಒಳಗಣ ಗೊಂಬೆಗಳಿಳಿಸಿ
ಓರಣದಲಿ ಬಲು ಒಪ್ಪಾಗ್ ಕೂಡ್ಸಿ
ರಾಮ ಕೃಷ್ಣರ ಕಥೆಗಳ ಬಿಡಿಸಿ
ಜಂಬೂ ಸವಾರಿ ವೈಭವ ಕರೆಸಿ
ಗೆಳೆಯರ ಬಳಗವ ಕರೆದಾದರಿಸಿ
ಪಾಯಸದಡುಗೆಯ ಬಡಿಸುಪಚರಿಸಿ
ಪದ ಕೋಲಾಟವ ಹಾಡಿಸಿ ನಲಿಸಿ
ಬೆಳಗು ದೀಪಗಳ ಝಗಝಗಮಗಿಸಿ
ಚಾಮುಂಡೇಶ್ವರಿ ಮನದಲಿ ನೆನೆಸಿ
ಭಕ್ತಿ ಭಾವದಲಿ ಹರುಷದೆ ನಮಿಸಿ
ಬಸವಿ ಬಸವರ ದಸರಾ ದರ್ಬಾರು
ನವರಾತ್ರಿಯ ಕಳೆ ಖುಷಿ ಬಲು ಜೋರು
ಪೂರಕ ಓದಿಗೆ
ನಮ್ಮ ಕೇರಿ ಮನೆಯ ದಸರಾ ಗೊಂಬೆ ಹಬ್ಬ
ರಾಮಾಯಣ ಕಥೆ ಸಾರುವ ಬೊಂಬೆ ಪ್ರದರ್ಶನ












Click it and Unblock the Notifications