ಏಳು ಹನಿಯು ಸೇರಿ... ಹಾಸ್ಯ ಹಳ್ಳ ಹರಿಯಿತು...

ಮದುವೆ

ಮುಂಚೆ
ಅವ
ಪುಂಗವ.
ನಂತರ
ಅವಳು ಪುಂಗಿ,
ಅವ
ಹಲ್ಲು ಕಿತ್ತಿದ ಹಾವ ?

***

ಪ್ರಾಸ

ಕ್ರೆಡಿಟ್‌ ಕಾರ್ಡಿನ
ಹುಡುಗಿ
ತುಂಬಾ ಹರಿತ.
ಅದಕ್ಕೂ ಪ್ರಾಸ
ಅವಳ ಹೆಸರು,
‘ ಸರಿ-ತಾ’ !!

***

ಹೆಚ್ಚು-ಕಮ್ಮಿ :

ಬದುಕಲು ಜೀವಿಗೆ
ಬೇಕೇ ಬೇಕು
ಬಿ. ಪಿ.
ಹೆಚ್ಚಾದರೂ
ಕಮ್ಮಿಯಾದರೂ
ಕಾಲನ ಕಹಳೆ
ಯಮನ ಪೀಪಿ...

***

ಊರು

ಆ ಮರಾಠಿ
ಹುಡುಗಿಯ ಊರು
ಪೂನಾ.
ಕನ್ನಡ ಕಲಿತು
ಈಗ ಹೇಳುವಳು
ಕರ್ನಾಟಕದ
ಪೂ-ನಾ !!

***

ದಾನ

ಇದು ಇರುವುದೇ
ಹೀಗೆ
ಇಂಟೆನ್ಸಿವ್‌ ಕೇರ್‌ ಯುನಿಟ್‌.
ಇಲ್ಲಿ ನಮಗೆ
ಸಿಗುವುದು
ಜೀವನ
ಇಡಿಯಾಗಿ
ಒಂದೊಂದೇ ಮಿನಿಟ್‌.

***

ಯಾಕೆ ?

ಊರಿನಲ್ಲೇ ಸುಂದರಿ
ನನ್ನ
ಮನೆಯಾಕೆ.
ಅವಳ
ಹೃದಯದಲ್ಲೇ
ಇದ್ದುಬಿಡುವೆ,
ನನಗೆ
ಮನೆ-ಯಾಕೆ ?

***

ನಲ್ಲ

ಮಾತುಮಾತಿಗೂ ನಿನ್ನ
ಹೊಗಳಲು
ನಾನೇನೂ
ಕಾಳಿದಾಸನಲ್ಲ !!
ಗಂಡ ಗುಡುಗಿದ.
ಹೆಂಡತಿ
ಕಾಳಿಯಾದಳು,
‘ದಾಸ’ನಾದ ಈ
ನಲ್ಲ... !!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+