ಹಂ. ಕ. ರಾಮಪ್ರಿಯನ್‌, ಕ್ಲಾರ್ಕ್ಸ್‌ವಿಲ್‌, ಮೇರಿಲೆಂಡ್‌


Tulip ಮರಕ್ಕೆ ಪ್ರಶ್ನೆ
ಇದು ನಮ್ಮ ಮನೆಯ ಹಿತ್ತಲಲ್ಲಿರುವ ಅನೇಕ Tulipಮರಗಳಲ್ಲೊಂದು ಮರದೊಡನೆ ನಡೆಸಿರುವ ಸಂಭಾಷಣೆ. ಈ ಮರಗಳಿಗೆ yellow poplarಎಂದೂ ಹೆಸರುಂಟು. ಉತ್ತರ ಅಮೆರಿಕದ ಈಶಾನ್ಯಭಾಗದಲ್ಲಿ ಇಂತಹ ಮರಗಳು ಹೇರಳವಾಗಿ ಬೆಳೆಯುತ್ತವೆ. ಅವು ಸುಮಾರು 70 ಅಡಿ ಎತ್ತರ ಇರುತ್ತವೆ. ಹಳದಿ ಬಣ್ಣದ ಗಂಟೆಯಾಕಾರದ ಹೂಗಳನ್ನು ಬಿಡುತ್ತವೆ, ಮತ್ತು ಸುಮಾರು ಜೂನ್‌ ತಿಂಗಳ ಮೊದಲೆಯ ವಾರದಲ್ಲಿ (ನಮ್ಮೂರಿನಲ್ಲಿ) ಹೂವುಗಳು ಒಣಗಿ ಗಾಳಿ ಬೀಸಿದಾಗ ದಳಗಳು ಚೆದುರಿ ಬೀಳುತ್ತವೆ. ಈ ಕವನದ ಬಗ್ಗೆ ನನ್ನ ಮನಸ್ಸು ಓಡುವುದಕ್ಕೆ ಸುಮಾರು ನಾಲ್ಕು ದಿನಗಳ ಮುಂಚೆ ಮಳೆಯು ಬಂದಿದ್ದು ಸುತ್ತಮುತ್ತಲೂ ನೀರು ಪೂರ್ತಿ ಒಣಗಿಹೋಗಿತ್ತು. ಆದರೂ Tulipಮರಗಳ ಹೂಗಳಲ್ಲಿ ನೀರು ಶೇಖರಿಸಿಕೊಂಡಿದ್ದಿರಬಹುದು. ಮೆಲ್ಲನೆ ಗಾಳಿಬಂದಾಗ ಆ ನೀರು ಮಳೆಯಂತೆ ದೊಡ್ಡ ದೊಡ್ಡ ಹನಿಗಳಾಗಿ ಬಿದ್ದಿತ್ತು. ಆಗ ಈ ಕವನಕ್ಕೆ ಸ್ಫೂರ್ತಿ ಬಂದು ಅದನ್ನು Englishನಲ್ಲಿ ಬರೆದೆ. ನಂತರ ಅದನ್ನು ಕನ್ನಡಕ್ಕೆ ಭಾವಾನುವಾದ ಮಾಡಿದೆ. ಈ ಕೆಳಗೆ ಮೊದಲು ಕನ್ನಡದ ಕವನ, ನಂತರ Englishನದು.
H.K.Ramapriyan
  • ಹಂ. ಕ. ರಾಮಪ್ರಿಯನ್‌, ಕ್ಲಾರ್ಕ್ಸ್‌ವಿಲ್‌, ಮೇರಿಲೆಂಡ್‌
    [email protected]
ಈ ವಸಂತದ ಮಧ್ಯದಿನದಲಿ ರವಿಯು ರಾರಾಜಿಸುತಿರೆ
ಭೂಮಿದೇವಿಯು ಹಚ್ಚ ಹಸುರಿನ ಸೀರೆಯಲಿ ಬೆಳಗುತ್ತಿರೆ
ಮನೆಯ ಹಿತ್ತಲ ತೋಟದಲಿ ನಾ ನಿತ್ಯಕಾರ್ಯದಿ ಮುಳುಗಿರೆ
ಎರಡು ಮೂರೋ ನಾಲ್ಕೊ ಹನಿಗಳ ಮಳೆಯನೊಮ್ಮೆಲೆ ಕಂಡೆನು ।।1।।

ನೀಲಿಬಾನಲಿ ಹುಡುಕಿನೋಡಿಯು ಮೋಡವೊಂದನು ಕಾಣದೆ
ಅಲ್ಲಿ ಯಾವ ವಿಮಾನಗಳನೂ ಹಕ್ಕಿಗಳನೂ ನೋಡದೆ
ಕಾಗೆ-ನರಿಗಳ ಮದುವೆ-ಸಡಗರದೋಲಗವ ನಾ ಕೇಳದೆ
ಮತ್ತೆ ಪಟಪಟ ಮಳೆಯು ಸುರಿಯಲು ಅಚ್ಚರಿಯ ನಾ ಪಟ್ಟೆನು ।।2।।

ಹಿತ್ತಲಲ್ಲಿಯ ಜಗಲಿಕಲ್ಲಿನ ಮೇಲೆ ಹನಿಗಳು ಬೀಳುತ
ಒಂದು ಅಂಗುಲ ವೃತ್ತಗಳನವು ರಚಿಸುತಿದ್ದುದ ನೋಡುತ
ಸ್ವಲ್ಪ ಅಂಟಾಗಿರುವ ನೀರದು ಎಂದು ಮುಟ್ಟುತಲರಿಯುತ
ಹಿರಿಯ tulipಮರದಿ ಹುಟ್ಟಿಹ ಮಳೆಯದೆಂಬುದ ಕಲಿತೆನು ।।3।।

ಎನ್ನ ಮಾತನು ಕೇಳು ಮರವೇ! ಪ್ರಶ್ನೆಯಾಂದೆನಗಿರುವುದು
ನಿನಗೆ ಜನ್ಮವನಿತ್ತ ಮಣ್ಣಲಿ ಸಾರವಿರುವುದು ಸಾಲದೇ?
ಅದನು ಹೀರಲು ನೆರವನೀಡಲು ಕಾಲದಲಿ ಮಳೆ ಬಾರದೇ?
ಇಂತು ನೀನೇಕಳುತಲಿರುವೆಯಾ ಕಣ್ಣ ನೀರನು ಸುರಿಸುತ? ।।4।।

ಇಲ್ಲಿ ಮನೆಯನು ಕಟ್ಟಲೋಸುಗ ದೊಡ್ಡ ಯಂತ್ರವು ಬಂದುದಂ
ಭುವಿಯನಗೆಯುತ ನಿನ್ನ ನೆಂಟರ ಕರುಣೆಯಿಲ್ಲದೆ ಕೊಂದುದಂ, ನೀ
ವರುಷವರುಷವು ನೆಂಟರೊಂದಿಗೆ ಹೂಗಳಂದವ ತಂದುದಂ
ಮನದಿ ನೆನೆಯುತ ದುಗುಡ ತಾಳದೆ ಚೆಲ್ಲುವೆಯ ಕಣ್ಣೀರನು? ।।5।।

ಅಕ್ಕಪಕ್ಕದ ಮರಗಳಲಿ ಬಲುದಟ್ಟದೆಲೆಗಳು ಬಿಟ್ಟಿರಲ್‌
ಚಿಕ್ಕ ಗಿಡಗಳು ಚೊಕ್ಕಹೂಗಳ ಲೆಕ್ಕವಿಲ್ಲದೆ ಕೊಟ್ಟಿರಲ್‌
ರೆಕ್ಕೆಪುಕ್ಕವ ಬಿಚ್ಚಿಹಾರುತ ಹಕ್ಕಿ ಚಿಲಿಪಿಲಿಗುಟ್ಟಿರಲ್‌
ನೀನು ಸುರಿಸುತಲಿರುವ ನೀರ್‌ ಆನಂದಬಾಷ್ಪವೆ ಎಂಬೆಯಾ? ।।6।।

ನಿನ್ನ ನೀರ್‌ ಆನಂದಬಾಷ್ಪವು ಶೋಕಬಾಷ್ಪವು ಅಲ್ಲದೆ
ಕೋಪತಾಪದಿ ಸೇಡು ತಂದಿಹ ಬೆವರು ಇರಬಹುದಲ್ಲವೇ?
ಜಗಲಿಕಲ್ಲಿನ ಮೇಲೆ ಬಿದ್ದಿಹ ನಿನ್ನ ಮಳೆಹನಿ ನೀರಿಗೆ
ನಿನ್ನ ಹೂಗಳ ದಳಗಳುದುರುತ ಅಂಟಲದು ಸೇಡಲ್ಲವೇ? ।।7।।

***

Tulip Tree

It was a clear day, sunny and bright;
Not a cloud in the sky, not even white;
Out in the yard, I was doing a chore
When big drops of water began to pour.

I looked up and saw the sky was clear,
No airplane above, not even near,
No flying flocks, nary a bird,
So I said to myself, this rain is absurd.

And then it came, another big drop,
Many then followed, going plop plop.
They fell and made inch-wide blotches,
Covering my deck and front and back porches.

And, then, Oh! Tulip Tree, suddenly I knew,
The source of this strange rain was really you.
For, the blotches of water had sticky stuff,
Cleaning them up was a little tough.

But, Oh! Tulip Tree, the question is why.
What makes you shed tears? What makes you cry?
You have good soil, nutrition galore,
Timely rains aplenty, you dont need more.

As we built this house, Oh! Tulip Tree!
For our little family of three,
We had to kill your kith and kin,
Is that what makes you sad within?

Are all those drops of water you shed,
Tears of immense joy, instead?
After all, it is the middle of spring,
With flowers in bloom and birds chirping.

Perhaps the drops of water that fall,
In fact, are not even tears at all.
May be youre angry, and you just fret,
And shed a lot of vengeful sweat.

For, I note that when the wind blows,
A shower of your petals follows.
To the drops from you, they then stick,
That is indeed your vengeful trick.


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+