ನಾಲ್ಕು ಮಂದಿಗೆ ಬೇಕೆನಿಸುವಂತೆ ಬಾಳಿದ ಆತ
ನಾಲ್ಕು ಕಾಲಿನ Stretcherನಲ್ಲಿ ಆಸ್ಪತ್ರೆಗೆ ಹೋಗುವಾಗ
ನಾಲ್ಕು ಜನ ಹೊತ್ತೊಯ್ಯುವ ಕಾಲ ಬಂತೆನೋ ಎಂದು ಹೆದರಿ
ನಾಲ್ಕೇ ದಿನಗಳಲ್ಲಿ ನಾಕದ ಹಾದಿ ಹಿಡಿದ
*
ಶಿಕ್ಷೆ
ಬೆಣ್ಣೆ ಕದ್ದ ಗೋಪಿಕೆಯರ ಸೀರೆ ಕದ್ದ
ಎ0ಬ ಆರೋಪಗಳಿಗೆ ಕೊಟ್ಟಳು
ಯಶೋಧೆ ಒರಳುಕಲ್ಲಿಗೆ ಕಟ್ಟಿದ ಶಿಕ್ಷೆ
ದಾಯಾದಿಗಳ ಆಸ್ತಿ ಕದ್ದ,
ದ್ರೌಪದಿಯ ಮಾನ ಕದ್ದ
ಎಂಬ ಆರೋಪಗಳಿಗೂ ಇತ್ತನು
ಧೃತರಾಷ್ಟ್ರ, ಸುಯೋಧನನಿಗೆ ರಕ್ಷೆ