ಎಲೆ, ಎಲೆ!
| ಎಲೆ, ಎಲೆ! | |||
![]() |
ಎಲೆ, ಎಲೆ! ನಿನ್ನಯ ಹಿನ್ನೆಲೆಯನು ನಾ ಕೇಳಲುಬೇಕದ ಹೇಳುವೆಯ? । ಭಾವುಕಕವಿಗಳ ಭಾವಕೆ ಕಾರಣ ನೀನಾಗುವ ಪರಿ ತೋರುವೆಯ? ।। ವಸಂತಬರುತಿರೆ ಬರಡು ಮರಗಳೊಳು ಜೀವವ ತೋರುವ ಚಿಗುರಿನೆಲೆ । ಭುವಿಯಿಂ ನೀರನು ರವಿಯಿಂ ಬೆಳಕನು ಹೀರುತ ಹಿರಿದಾಗಿರುವ ಎಲೆ । ಕಾಯ್ಗಳು ಬಿಡುತಿರೆ ಮುಚ್ಚುತಲವುಗಳ ‘ಎಲೆ ಮರೆಕಾಯ್’ ಆಗಿಸುವ ಎಲೆ । ಹೇಮಂತಋತುವು ಬರುತಿರೆ ಮೆಲ್ಲನೆ ಹಸಿರಬಣ್ಣವನು ತೊರೆಯುವೆಲೆ । ಗಾಳಿ ಬೀಸುತಿರೆ ಮರವನು ಬಿಡುತಲಿ ತೇಲುತ ಭೂಮಿಯ ಸೇರುವೆಲೆ । ಹುಲ್ಲನು ಕೊಲ್ಲುವೆಯೆನ್ನುವ ಭಯದಿಂ ಜನಗಳೂದುತಲಿ ತೂರುವೆಲೆ । ಶಿಶಿರಋತುವಿನಲಿ ಮಳೆಯಿಂ ಹಿಮದಿಂ ತೊಯ್ಯುತ ಕೊಳೆಯುತ ಹೋಗುವೆಲೆ । 1. ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ। ಅಂದರೆ: ಎಲೆಹೂಹಣ್ಗಳಂ ನೀರಂ ಭಕ್ತಿಯಿಂ ಕೊಡುವಂತಹ । 2. ಹಣ್ಣೆಲೆ ಉದುರಿದಾಗ ಚಿಗುರೆಲೆ ಕಿಲಕಿಲ ಎಂದಿತು - ಗಾದೆ | ||














Click it and Unblock the Notifications