ಕಾವೇರಿಯ ಯುಗಾದಿಗೆ ಅಸಾದುಲ್ಲಾ ಬೇಗ್ ಶಾಯರಿ

ವರುಷಕೊಂದು ಹೊಸ ಜನುಮ ಕೊಡುವ ಈ ಹಬ್ಬದ ಆಚರಣೆಯ ಸಂದರ್ಭದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದಿದ್ದರೆ ಹೇಗೆ? ಹೀಗಾಗಿ 'ಅಕ್ಕ' ಸಂಸ್ಥೆಯ ಸಹಯೋಗದಿಂದ ಏಪ್ರಿಲ್ 19, ಶನಿವಾರ ನಡೆಯುತ್ತಿರುವ ಈ ಸಂಭ್ರಮದಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನಿದು ಸ್ನೇಹ ಸಂಬಂಧ? ಎಲ್ಲಿಯದು ಈ ಅನುಬಂಧ? ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕದ ಹಾಸ್ಯ ಕಲಾವಿದ ಅಸಾದುಲ್ಲಾ ಬೇಗ್ ಅವರಿಂದ ವಿನೂತನ 'ಹಾಸ್ಯ ಶಾಯಿರಿ'ಯನ್ನು ಆಯೋಜಿಸಲಾಗಿದೆ. ವಾಹ್ ವಾಹ್ ಅನ್ನುವಂತಹ ಅವರ ಶಾಯರಿಯ ಒಂದು ಝಲಕ್ ಹೀಗಿದೆ ನೋಡಿರಿ.
ಕತ್ತಲ ಅನುಭವಕೆ
ಕಣ್ಣು ಮುಚ್ಚಿದರೆ ಸಾಕು
ಕತ್ತಲಾಗಬೇಕೆಂದಿಲ್ಲ;
ಬೆತ್ತಲ ಅನುಭವಕೆ
ಮಾನ ಹೋದರೂ ಸಾಕು
ಬಟ್ಟೆ ಕಳಚಬೇಕೆಂದಿಲ್ಲ...
ಇದರ ಜೊತೆಗೆ, 'ಅರ್ಪಣೆ' ಎಂಬ ಸಂಗೀತ ನಾಟಕ, ಕನ್ನಡಾಭಿಮಾನಿಗಳನ್ನು ನೃತ್ಯ ಲೋಕಕ್ಕೆ ಕರೆದೊಯ್ಯುವ ಎಂಟು ಅಮೋಘ ನೃತ್ಯಗಳಿರುವ 'ಅಷ್ಟ ನೃತ್ಯಗಳು', 'ಕನ್ನಡ ಕಲಿಯೋಣ' ಮಕ್ಕಳಿಂದ ಕಿರು ನಾಟಕ ಮತ್ತು ನೃತ್ಯಗಳನ್ನು ಕೂಡ ಆಯೋಜಿಸಲಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳ : Langley high school, 6520, Georgetown Pike, McLean, VA 22101.
ದಿನಾಂಕ, ಸಮಯ : ಏಪ್ರಿಲ್ 19, ಶನಿವಾರ, ಸಂಜೆ 4 ಗಂಟೆಗೆ
ಹೆಚ್ಚಿನ ವಿವರ ಬೇಕಿದ್ದರೆ ಸಂದರ್ಶಿಸಿ www.kaverionline.org












Click it and Unblock the Notifications