• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೋಡುವಾ... ಹರೆಯದ ಜೋಡಿಯ ಪ್ರೇಮಲೋಕವಾ!

By ನಾಗರಾಜ ಎಂ., ಕನೆಕ್ಟಿಕಟ್
|

ಸೆಪ್ಟೆಂಬರ್ ಕಳೆದು ಅಕ್ಟೋಬರ್ ಬಂತೆಂದರೆ ಸಾಕು! ಹೂವಿನ ಸ್ವರ್ಗವೇ ಬಂದಿಳಿದಂತಿರುತ್ತದೆ ಅಮೇರಿಕಾದ ನ್ಯೂ ಇಂಗ್ಲೆಂಡ್ ಪ್ರಾಂತ್ಯದಲ್ಲಿ. ಎತ್ತ ನೋಡಿದರೂ ಬಣ್ಣ ಬಣ್ಣದ ಗಿಡಮರಗಳು, ಹೂವಿನ ರಾಶಿಯನ್ನೇ ಹೊದ್ದಿರುವಂತೆ ಕಾಣುವ ಬೆಟ್ಟ ಪರ್ವತಗಳು, ಸಣ್ಣ ಸಣ್ಣ ಫಾರ್ಮ್ ಮನೆಗಳು, ಅಂಕು ಡೊಂಕಾದ ಸುಂದರವಾದ ರಸ್ತೆಗಳು.

ಬೇಸಿಗೆ ಮುಗಿದು ಇನ್ನೇನು ಚಳಿರಾಯ ನಾ ಬರಲೇ ಎಂದು ಇಣುಕಿ ನೋಡುತ್ತಿರುವ ಸಮಯದಲ್ಲಿ ಬರುವ ಈ ಫಾಲ್ (Autumn) ಸೀಸನ್ ನೋಡುವುದೇ ಒಂದು ಸೊಬಗು! ವಾತಾವರಣ, ಹವಾಮಾನದಲ್ಲಿನ ಬದಲಾವಣೆ, ಹೆಚ್ಚಾಗುವ ರಾತ್ರಿ ವೇಳೆ, ಚಳಿಗಾಳಿ, ಮಳೆ, ಕಡಿಮೆಯಾಗುವ ಸೂರ್ಯನ ಪ್ರಖರತೆ ಇವೆಲ್ಲ ಕಾರಣಗಳಿಂದ ಎಲೆಗಳಲ್ಲಿ ಕ್ರೋಮೊಫ್ಹಿಲ್ ಉತ್ಪಾದನೆ ಕಡಿಮೆಯಾಗಿ, ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಹೊರಗಡೆ ಹೋಗದೆ ಎಲ್ಲ ಗಿಡಮರಗಳಲ್ಲಿನ ಎಲೆಗಳು ತಮ್ಮ ಹಸಿರು ಬಣ್ಣದಿಂದ ಕೆಂಪು, ಹಳದಿ, ಕಂದು, ಪಿಂಕ್ ಕಲರ್ ಗೆ ತಿರುಗಿ ಜೋರಾಗಿ ಬೀಸುವ ತಂಗಾಳಿಗೆ ಎಲ್ಲಾ ಎಲೆಗಳು ಬಿದ್ದು ಹೋಗಿ ಕಾಣುವ ದೃಶ್ಯ ಮನೋಹರವಾದದ್ದು!

ವಿಶ್ವದೆಲ್ಲೆಡೆಯಿಂದ ಸಾವಿರಾರು ಜನರನ್ನು ಆಕರ್ಷಿಸುವ ಈ ಮನೋಹರವಾದ ಫಾಲ್ ಸೀಸನ್ ನೋಡಲು ಕೆಲವರು ರಜಾ ದಿನಗಳನ್ನು ಕಳೆಯಲು ಬಂದರೆ, ಕೆಲವರು ಸುಂದರತೆಯನ್ನು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಹಿಡಿಯುತ್ತಾರೆ. ಮತ್ತೆ ಕೆಲವರು ಹೈಕಿಂಗ್ ಅಂತಾ ಬರುತ್ತಾರೆ. ಈ ಸಂದರ್ಭದಲ್ಲಿ ಒಂದು ಹರೆಯದ ಜೋಡಿ ಬಂದರೆ... ಅವರಿಗೆ ಇದು ಒಂದು ಸುಂದರ ಪ್ರೇಮಲೋಕದಂತೆ ಕಂಡು ಬಂದರೆ ಆಶ್ಚರ್ಯವೇನಿಲ್ಲ!

ಇಂಥದೇ ಒಂದು ಸುಂದರವಾದ ಸನ್ನಿವೇಶವನ್ನು ಕಲ್ಪಿಸಿಕೊಂಡು, ಯುವ ಪ್ರೇಮಿಗಳು ಹಾಡುತ್ತ, ಪ್ರಕೃತಿಯ ಸೊಬಗ ಸವಿಯುತ್ತ ನಲಿದಾಡುವ ಹಾಡನ್ನು ಬರೆದವರು ಕನೆಕ್ಟಿಕಟ್‌ನ ನಾಗರಾಜ ಮಹೇಶ್ವರಪ್ಪ ಅವರು. ಅವರೇ ಮನಸೆಳೆಯುವ ಚಿತ್ರೀಕರಣವನ್ನು ಮಾಡಿದ್ದು, ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಮನಸ್ಸಿಗೆ ಮುದ ನೀಡುವ ಹಾಡು, ಅಭಿನಯ ಮತ್ತು ಪ್ರಕೃತಿಯ ಸೌಂದರ್ಯ ವಿಡಿಯೋದಲ್ಲಿ ಅನಾವರಣವಾಗಿದೆ.

ಬನ್ನಿ ನೋಡುವಾ... ಈ ಹರೆಯದ ಜೋಡಿಯ ಪ್ರೇಮಲೋಕವಾ...!

ಈ ಸುಂದರ ರೋಮ್ಯಾಂಟಿಕ್ ಹಾಡಲ್ಲಿ ನಟಿಸಿರುವರು ಕನೆಕ್ಟಿಕಟ್ ನ ಸಾಯಿರಾಮ್ ಸಿಂಹಾದ್ರಿ, ಬೆಂಗಾಲಿ ಬ್ಯೂಟಿ Miss India CT ರೋನಿತ ಚೌಧುರಿ.

* ಮ್ಯೂಸಿಕ್ ಕಂಪೋಸರ್ : ಸೂರ್ಯ ಪ್ರಕಾಶ್

* ಹಿನ್ನೆಲೆ ಗಾಯನ : ಚೇತನ್ ನಾಯಕ್ (ರೇಡಿಯೋಸಿಟಿ 91.1 ಸೂಪರ್ ಸಿಂಗರ್ ವಿನ್ನರ್)

* ಕೀಬೋರ್ಡ್ : ಶ್ರೀಜಿತ್ ಮೆನನ್

* ಗಿಟಾರ್ : ಬಾಲಶಂಕರ್

* Rhythm, Song Mixed & Mastered : ನಿತಿಶ್

* ಹಾಡು ರಚನೆ, ಛಾಯಾಗ್ರಹಣ ಮತ್ತು ನಿರ್ದೇಶನ : ನಾಗರಾಜ . ಎಂ

ಕನೆಕ್ಟಿಕಟ್ ನಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಯಾವಾಗಲೂ ಪ್ರೋತ್ಸಾಹಿಸುವ ದೀಪಾ ಪಾಠಕ್ ಮತ್ತು ಅಮಿತ್ ಪಾಠಕ್ ಅವರಿಗೆ ವಿಶೇಷ ಧನ್ಯವಾದಗಳು.

ಈ ಹಾಡು ಅರ್ಪಣೆ... ಎಲ್ಲಾ ಪ್ರೀತಿಯ ಹೃದಯಗಳಿಗೆ! ಈ ಹೊಸ ವರುಷದಲ್ಲಿ ಎಲ್ಲೆಡೆ ಪ್ರೀತಿಯ "ತಂಗಾಳಿ" ಬೀಸಲಿ....

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tangaali (cool breeze) : Romantic Kannada video song from Sihi Inchara productions by Nagaraja Maheswarappa, Connecticut, USA. Who does not fall in love with nature?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more