ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಯಾಮಿಯಲ್ಲಿ ನಂದಿ ಕನ್ನಡ ಕೂಟದ ಸುಗ್ಗಿ ಸಂಭ್ರಮ

By ಪ್ರೀತಂ ಆರೂರು ಮುಂಡಾಡಿ
|
Google Oneindia Kannada News

ಪ್ರತಿ ವರ್ಷದಂತೆ ನಂದಿ ಕನ್ನಡ ಕೂಟ ಆಫ್ ಸೌತ್ ಫ್ಲೋರಿಡಾ ಜನವರಿ 20ನೇ ತಾರೀಖಿನಂದು ಮಿಯಾಮಿಯ ಟ್ರೀ ಟಾಪ್ ಪಾರ್ಕ್ನಲ್ಲಿ ಸುಗ್ಗಿಯ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಸುಮಾರು 200 ಸದಸ್ಯರು ಅತ್ಯಂತ ಸಂತೋಷದಿಂದ ಕುಟುಂಬ ಸಮೇತರಾಗಿ ಪರಸ್ಪರ ಎಳ್ಳು ಬೆಲ್ಲ ಹಂಚಿ, ಬಗೆ ಬಗೆಯಾದ ಆಟಗಳನ್ನು ಆಡಿ, ನಕ್ಕು ನಲಿದು, ಸದಸ್ಯರೇ ತಯಾರಿಸಿದ ಪುಷ್ಕಳ ಭೋಜನವನ್ನು ಸವಿದರು.

ಕಾರ್ಯಕ್ರಮ ಕುಟುಂಬಗಳ ಸದಸ್ಯರ ಪರಿಚಯದೊಂದಿಗೆ ಆರಂಭವಾಗಿತು. ನೃತ್ಯ, ಕನ್ನಡ ಹಾಡುಗಳ ಗಾಯನ, ಅಂತ್ಯಾಕ್ಷರಿ ಮತ್ತು ಮುತ್ತಿತರ ಆಟಗಳನ್ನು ಒಳಗೊಂಡು ಕನ್ನಡಿಗರನ್ನು ಮನರಂಜಿಸಿತು.

 Sankranti celebrated by Nandi Kannada Koota in Miami, USA

ಸಂಘದ ಮಹಿಳಾ ಸದಸ್ಯರೇ ತಾವೇ ಖುದ್ದಾಗಿ ಅತ್ಯಂತ ಪ್ರೀತಿಯಿಂದ ತಯಾರಿಸಿದ ಮದ್ದೂರು ವಡೆ, ಉತ್ತರ ಕರ್ನಾಟಕದ ಎಣ್ಣಿಗಾಯಿ, ಸಿಹಿ/ಖಾರ ಹುಗ್ಗಿ, ಜೋಳದ ಬುಟ್ಟಾ, ಖಾರ ಮಂಡಕ್ಕಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

 Sankranti celebrated by Nandi Kannada Koota in Miami, USA

ನಂದಿ ಕನ್ನಡಕೂಟದ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ಕನ್ನಡ ಸಂಘವು ವರ್ಷದಿಂದ ವರ್ಷಕ್ಕೆ ವೃದ್ಧಿ ಗೊಳ್ಳುತ್ತಲಿದ್ದು, ಸರ್ವ ಸಂಘದ ಸದಸ್ಯರಿಂದ ಅನೂಚಾನವಾಗಿ ಸಂಕ್ರಾಂತಿ ಕಾರ್ಯಕ್ರಮವು ಮತ್ತೆ ಮತ್ತೆ ವಿನೂತನವಾಗಿ ಪ್ರತಿ ವರ್ಷವೂ ಎಲ್ಲರ ಸಹಕಾರದಿಂದ ನಡೆಯುತ್ತಿದೆ ಎಂದು ಹರ್ಷಚಿತ್ತರಾಗಿ ತಿಳಿಸಿದರು.

 Sankranti celebrated by Nandi Kannada Koota in Miami, USA

ಉಪಾಧ್ಯಕ್ಷರಾದ ನಾಗರಾಜ ನಾಗತಿಹಳ್ಳಿ, ಖಜಾಂಚಿಯಾದ ಅರ್ಚನಾ ತುಳಸಿ, ಮಿಯಾಮಿ ಡೆಯ್ಡ್ ಪ್ರಾಂತ್ಯದ ಸಂಚಾಲಕರಾದ ಪ್ರೀತಿ ರವೀಂದ್ರ, ವೆಸ್ಟ್ ಪಾಮ್ ಬೀಚಿನ ಸಂಚಾಲಕರಾದ ರವೀಂದ್ರ ಶ್ರೀನಿವಾಸ ಮತ್ತು ಬೋವರ್ಡ್ ಪ್ರಾಂತ್ಯದ ಸಂಚಾಲಕರಾದ ದರ್ಶನ ಜೋಡಟ್ಟಿಯವರು ಉಪಸ್ಥಿತರಿದ್ದರು.

 Sankranti celebrated by Nandi Kannada Koota in Miami, USA

ಸಂಘದ ಕಾರ್ಯದರ್ಶಿಯಾದ ಶಾಲಿನಿ ಉಮೇಶ್ ತುಂಬು ಹೃದಯದ ವಂದನಾರ್ಪಣೆ ಸಲ್ಲಿಸಿದರು. ಈ ಎಲ್ಲ ಕಾರ್ಯಕ್ರಮಗಳ ನೆನಪನ್ನು ಕಾರ್ತಿಕ್ ಮಾಧವನ್ ತಮ್ಮ ಛಾಯಾ ಚಿತ್ರಗಳಲ್ಲಿ ಸೆರೆಹಿಡಿದರು.

English summary
Nandi Kannada Koota of South Florida, USA celebrated Makara Sankranti on January 20 in a grand fashion. More than 200 members of the association enjoyed thoroughly by participating in several cultural activities and distributing Ellu Bella.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X