• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಡುಗಳ ಮೂಲಕ ಮೋದಿ ಪರ ಅನಿವಾಸಿ ಕನ್ನಡಿಗರಿಂದ ವಿಶಿಷ್ಟ ಪ್ರಚಾರ

By ಕುಮಾರ್ ಶ್ರೀಧರ್, ನ್ಯೂಜೆರ್ಸಿ, ಅಮೆರಿಕ
|

ಪ್ರಪಂಚದಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಗುತ್ತಿರುವ ಬೆಂಬಲ ನಿಜಕ್ಕೂ ಬೇರೆ ಯಾವ ನಾಯಕನಿಗೂ ಸಿಕ್ಕಿರುವ ಮಾಹಿತಿ ಇಲ್ಲ. ಲೋಕಸಭೆ ಚುನಾವಣೆಗೂ ಮುನ್ನ ಅನಿವಾಸಿ ಭಾರತೀಯರು ಮೋದಿಯವರನ್ನು ಬೆಂಬಲಿಸಿ ವಿಶಿಷ್ಟ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಒಂದು ಪಕ್ಷ ತನ್ನದೇ ಹಣವನ್ನು ಖರ್ಚು ಮಾಡಿ ತಮ್ಮ ತಮ್ಮ ನಾಯಕರ ಪ್ರಚಾರ ಮಾಡುವುದು ಎಲ್ಲೆಲ್ಲೂ ನಡೆಯುವ ಪ್ರಕ್ರಿಯೆ. ಆದರೆ ಇಲ್ಲಿ ಮೋದಿಯವರ ವಿಚಾರದಲ್ಲಿ ಮಾಡಲಾಗುತ್ತಿರುವ ಭಾರೀ ಪ್ರಚಾರಕ್ಕಾಗಿ ಸ್ವಯಂ ಸೇವಕರು ಯಾವುದೇ ಹಣ ಪಡೆಯದೇ ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

ಸಿಂಗಪುರದಲ್ಲಿ ಕೆಂಪೇಗೌಡರ ಕನ್ನಡೋತ್ಸವದಲ್ಲಿ 'ಅಂಬಿ ನಮನ'

ಇತ್ತೀಚೆಗೆ ಯೂರೋಪ್ ದೇಶದ ನೂರಾರು ಸ್ವಯಂ ಸೇವಕರು ತಮ್ಮ ತಮ್ಮ ಕೆಲಸಗಳಿಂದ ರಜಾ ಪಡೆದು, ನರೇಂದ್ರ ಮೋದಿಯವರ ಪರ ಪ್ರಚಾರ ಮಾಡಲು, ತಮ್ಮ ಸ್ವಂತ ಖರ್ಚಿನಲ್ಲಿ ಭಾರತಕ್ಕೆ ತಾತ್ಕಾಲಿಕವಾಗಿ ಹೋಗುತ್ತಿರುವುದರ ಬಗ್ಗೆ ಈಗಾಗಲೇ ಹಲವಾರು ಪತ್ರಿಕೆಗಳಲ್ಲಿ ಓದಿದ್ದೇವೆ.

ಬೆಂಗಳೂರಿನಲ್ಲಿ ಇದೆ ರೀತಿಯ ಸ್ವಯಂಸೇವಕರ ಒಂದು ದೊಡ್ಡ ತಂಡ ಚಕ್ರವರ್ತಿ ಸೂಲಿಬೆಲೆಯವರ ನಾಯಕತ್ವದಲ್ಲಿ 'ಟೀಮ್ ಮೋದಿ' ಎಂಬ ಹೆಸರಿನಲ್ಲಿ ಕರ್ನಾಟಕದ ಹಳ್ಳಿ ಹಳ್ಳಿಗಳಿಗೂ ಹೋಗಿ, ಮೋದಿಯವರ ಬಗ್ಗೆ, ಅವರಿಗೆ ಆಗದಿರುವ ಕೆಲವರು ಮಾಡುತ್ತಿರುವ ಸುಳ್ಳು ಪ್ರಚಾರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಜೊತೆಗೆ, ಮೋದಿಯವರಿಂದ ನಿಜಕ್ಕೂ ಭಾರತಕ್ಕೆ ಆಗಿರುವ ಉಪಯೋಗಗಳೇನು, ಅವರನ್ನು ಪ್ರಪಂಚದಾದ್ಯಂತ ಇತರೆ ರಾಷ್ಟ್ರಗಳು ಹೇಗೆ ಕೊಂಡಾಡುತ್ತಿವೆ ಎನ್ನುವುದನ್ನು ರಥ ಯಾತ್ರೆ ಮಾಡುವ ಮೂಲಕ ಪ್ರಚುರಪಡಿಸುತ್ತಿದ್ದಾರೆ. ಹಲವಾರು ಯುವಕರು ತಾತ್ಕಾಲಿಕವಾಗಿ ತಮ್ಮ ತಮ್ಮ ಕೆಲಸಗಳಿಂದ ಬಿಡುವು ಪಡೆದುಕೊಂಡು ಬಂದಿರುವ ನಿದರ್ಶನಗಳು ಕೂಡ ಹಲವಾರಿವೆ.

ಬ್ರಿಟನ್ನಿನಲ್ಲಿ ಕನ್ನಡದ ಕಂಪು ಹಬ್ಬುತ್ತಿರುವ ಹರೀಶ್ ರಾಮಯ್ಯ

'ಟೀಮ್ ಮೋದಿ' ಯಾವುದೇ ಪಕ್ಷದ ಜೊತೆಗೆ ಕೈಗೂಡಿಸಿಲ್ಲ. ಯಾವುದೇ ರಾಜಕೀಯ ನಾಯಕರ ಸಹಾಯ ಪಡೆಯುತ್ತಿಲ್ಲ. ಇದರ ಧ್ಯೇಯ ಬರಿ ಮೋದಿಯಂತಹ ನಿಸ್ವಾರ್ಥ ಹಾಗು ಪ್ರಚಂಡ ನಾಯಕನನ್ನು ದೇಶಕ್ಕೆ ಮತ್ತೆ ಒದಗಿಸಿಕೊಡುವುದು ಮಾತ್ರವಾಗಿದೆ.

ಇದಕ್ಕೆ ಅಮೆರಿಕಾಕದ ಭಾರತೀಯರೇನು ಕಮ್ಮಿ ಇಲ್ಲ. "ಟೀಮ್ ಇಂಡಿಯಾ USA" ಎಂಬ ಒಂದು ವಾಟ್ಸಪ್ ಗ್ರೂಪ್ ಮಾಡಿಕೊಂಡು "ಅಶ್ವಿನಿ ಬೆಂಗಳೂರು" ಎನ್ನುವ ಕ್ಯಾಲಿಫೋರ್ನಿಯಾ ಮಹಿಳೆಯ ನಾಯಕತ್ವದಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇತ್ತೀಚಿಗೆ ಇವರು ಮಾಡುತ್ತಿರುವ ಒಂದು ಕಾರ್ಯ ಎಂದರೆ ಅಮೆರಿಕಾದಲ್ಲೇ ಕುಳಿತು ಹಳ್ಳಿಗಳಲ್ಲಿರುವ ಮುಖ್ಯಸ್ಥರಿಗೆ ಕರೆ ಮಾಡಿ ಅವರಿಗೆ ದೇಶದ ನಿಜ ಪರಿಸ್ಥಿತಿಯ ಬಗ್ಗೆ ತಿಳುವಳಿಕೆ ನೀಡುವುದು.

ಹಲವಾರು ಹವ್ಯಾಸೀ ಕಲಾವಿದರು ಮೋದಿಯವರ ಬಗ್ಗೆ ಕವಿತೆಗಳನ್ನು ಬರೆಯುವುದು, ಹಾಡುಗಳನ್ನು ಹಾಡುವುದು ಮಾಡಿ ತಮ್ಮದೇ ರೀತಿಯಲ್ಲಿ ಮೋದಿಯವರ ಪರ ಅತ್ಯಂತ ಪ್ರಭಾವಶಾಲಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಮತ್ತೊಮ್ಮೆ ಮೋದಿ ಎಂಬ ಕಹಳೆಯನ್ನು ಮೊಳಗಿಸುತ್ತಿದ್ದಾರೆ.

'ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಸಿಕೆ ಗುಂಡಣ್ಣ ಆಯ್ಕೆ

ಈ ಪ್ರಯತ್ನದಲ್ಲಿ ಇತ್ತೀಚಿಗೆ ತುಂಬಾ ಗಮನ ಸೆಳೆದಿರುವುದು, ಮೂಡಲ್ ಕುಣಿಗಲ್ ಕೆರೆ ಹಾಡನ್ನು ಹಾಡಿ ಹೆಸರು ಮಾಡಿದ ರಾಮ್ ಪ್ರಸಾದ್ ಅವರು ಹಳೆಯ ಕನ್ನಡ ಚಲನ ಚಿತ್ರಗೀತೆಗಳ ಆಧರಿಸಿ ತಾವೇ ಬರೆದು ಹಾಡಿರುವ ಮೋದಿಯವರ ಗೀತೆಗಳು ವೈರಲ್ ಆಗಿ ಪ್ರಪಂಚದಾದ್ಯಂತ ಕನ್ನಡಿಗರನ್ನು ತಲಪುತ್ತಿವೆ. ಕನ್ನಡದ ಪಸಿದ್ದ ಗೀತೆಗಳಾದ "ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ", "ಅಲ್ಲಾಡ್ಸು ಅಲ್ಲಾಡ್ಸು", ಮುಂತಾದ ಗೀತೆಗಳ ಧಾಟಿಯನ್ನು ಆಧರಿಸಿರುವ ಹಾಡುಗಳು ಜನರ ಫೇವರಿಟ್ ಆಗಿವೆ.

ಇದರ ಲಿಂಕ್ ಇಲ್ಲಿದೆ, ಇಚ್ಛೆ ಇದ್ದವರು ಕೇಳಬಹುದು

English summary
NRI Kannadigas promoting Narendra Modi in a unique way by creating songs using old tracks of Kannada movies. This has created lot of interesting in the internet and the songs have gone viral on social media. Kannada Singer Ram Prasad too joined his hands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X