ಗಾಯಕ ರಾಜೇಶ್ ಕೃಷ್ಣನ್ ಅವರೆದಿರು ಹಾಡುವ ಯೋಗ

Posted By:
Subscribe to Oneindia Kannada

ಕನ್ನಡ ಚಿತ್ರರಂಗದಲ್ಲಿ 25 ವಸಂತಗಳನ್ನು ಕಳೆದಿರುವ ಮಧುರ ಕಂಠದ ಗಾಯಕ, ಸ್ಫುರದ್ರುಪಿ ನಟ ರಾಜೇಶ್ ಕೃಷ್ಣನ್ ಅವರನ್ನು ಭೇಟಿಯಾಗಲು, ಅವರೆದಿರುವ ಹಾಡಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಲು ಸುವರ್ಣ ಅವಕಾಶವೊಂದು ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ ಸಂಘಟನೆಯ ಕನ್ನಡಿಗರಿಗೆ ದೊರೆಯಲಿದೆ.

ಹೌದು, ಫೆಬ್ರವರಿ 28ರಂದು ಭಾನುವಾರ ಫುಟ್ ಹಿಲ್ ಕಾಲೇಜಿನ ಸ್ಮಿತ್‌ವಿಕ್ ಥಿಯೇಟರಲ್ಲಿ ನಡೆಯಲಿರುವ 'ಸ್ನೇಹ ಸುಗ್ಗಿ' ಕಾರ್ಯಕ್ರಮಕ್ಕೆ, ಅಮೆರಿಕಾ ಅಮೆರಿಕಾ ಚಿತ್ರದಲ್ಲಿ 'ನೂರು ಜನ್ಮಕು ನೂರಾರು ಜನ್ಮಕೂ' ಹಾಡು ಹಾಡಿ ಅಮೆರಿಕನ್ನಡಿಗರನ್ನು ಸೆಳೆದಿದ್ದ ರಾಜೇಶ್ ಕೃಷ್ಣನ್ ಅವರು ಬರಲಿದ್ದಾರೆ.

ಪ್ರತಿಭಾವಂತ ಹಾಡುಗಾರ ಅಥವಾ ಹಾಡುಗಾರ್ತಿಯರು ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದರೆ, ರಾಜೇಶ್ ಕೃಷ್ಣನ್ ಅವರೆದಿರುವ ಹಾಡುವ ಆಸೆ ಇಟ್ಟುಕೊಂಡಿದ್ದರೆ ಕೂಡಲೆ ತ್ವರೆ ಮಾಡಬೇಕು. 'ಸಪ್ತಸ್ವರ' ಸಂಗೀತ ಕಾರ್ಯಕ್ರಮದಲ್ಲಿ ಹಾಡುವ ಅವಕಾಶ ಹಾಡುಗಾರರಿಗೆ ಸಿಗಲಿದೆ. ಅದಕ್ಕೆ ಮಾಡಬೇಕಾಗಿರುವುದು ಇಷ್ಟೆ. [ಬಹಿರಂಗಗೊಂಡ ರಾಜೇಶ್ ಕೃಷ್ಣನ್ ಕೆಲವು ಸತ್ಯಗಳು]

KKNC singing talent show : Opportunity to sing before Rajesh Krishnan

ನಿಮ್ಮ ಧ್ವನಿ ಸುರಳಿಯನ್ನು (ಆಡಿಯೋ) ಅಥವಾ ಆಡಿಯೋ ಜೊತೆ ವಿಡಿಯೋ ನಮಗೆ ಕಳಿಸಿ. ಆಡಿಯೋ ಅಥವಾ ವಿಡಿಯೋ 1 ನಿಮಿಷ ಇರತಕ್ಕದ್ದು. ಕನ್ನಡ ಚಿತ್ರ ಹಿನ್ನೆಲೆ ಗಾಯಕರಾದ "ಶಷಾಂಕ್ ಶೇಷಗಿರಿ" ಅವರ ತೀರ್ಪಿನ ಪ್ರಕಾರ ಕೊನೆಯ ಕೆಲವು ಸ್ಪರ್ಧಿಗಳು ರಾಜೇಶ್ ಕೃಷ್ಣನ್ ಅವರೆದುರು ಹಾಡುವರು. ಇವರಲ್ಲಿ ವಿಜೇತರನ್ನು ಸ್ವತಃ ರಾಜೇಶ್ ಕೃಷ್ಣನ್ ಆಯ್ಕೆ ಮಾಡಲಿದ್ದಾರೆ.

ಎಲ್ಲ ವಯಸ್ಸಿನ ಹಾಡುಗಾರರಿಗೆ ಅವಕಾಶ ಸಿಗಲಿದೆ. 8-12(ಸಬ್-ಜ್ಯೂನಿಯರ್), 13-15(ಜ್ಯೂನಿಯರ್) ಮತ್ತು 15 ವಯಸ್ಸಿಗಿಂತ ಮೇಲ್ಪಟ್ಟ ಹಾಡುಗಾರರು ಭಾಹವಹಿಸಬಹುದು. ಇದರೊಂದಿಗೆ 'ಸಪ್ತಸ್ವರ'ದ ಸಂಜೆ ರುಚಿಯಾದ ಊಟ ಹಾಗು ರಾಜೇಶ್ ಕೃಷ್ಣನ್ ಅವರೊಂದಿಗೆ ಫೋಟೋ ಕೂಡ ತೆಗೆಸಿಕೊಳ್ಳುವ ಸುಯೋಗ.

ಇನ್ನೇಕೆ ತಡ, ಪ್ರವೇಶ ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ 23, 2016. ಈ ಕಾರ್ಯಕ್ರಮಕ್ಕೆ ಕೆಕೆಎನ್ ಸಿ ಸದಸ್ಯರಿಗೆ ಪ್ರವೇಶ ಉಚಿತವಾಗಿರುತ್ತದೆ. ಇದರ ಜೊತೆಗೆ ತೊಗಲು ಬೊಂಬೆಯಾಟ, ಜಾನಪದ ನೃತ್ಯ, ಕೊರವಂಜಿ ನೃತ್ಯ, ಪಂಚತಂತ್ರ ನಾಟಕ, ದಂಡ ಪಿಂಡಗಳು ನಾಟಕ, ಭಾವ ಧಾರೆ ಮುಂತಾದ ಕಾರ್ಯಕ್ರಮಗಳೂ ಆಯೋಜಿತವಾಗಿವೆ. ನೋಂದಣಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Koota Northern California in USA (America) has invited talented and given opportunity for budding singers to sing before talented singer and actor Rajesh Krishnan on 28th February. Saptaswara, singing competition will be held on 27th Feb.
Please Wait while comments are loading...