ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿ ಕಯ್ಯಾರ ನೂರು : ದುಬೈನಲ್ಲಿ ಕವಿಗೋಷ್ಠಿ

By Prasad
|
Google Oneindia Kannada News

Kayyara Kinyanna Rai 100 : Dubai to celebrate
ದುಬೈ, ಮಾ. 17 : ಧ್ವನಿ ಪ್ರತಿಷ್ಠಾನವು ಕವಿ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ನೂರು ತುಂಬುತ್ತಿರುವ ಸಂಭ್ರಮದ ಅಂಗವಾಗಿ ದುಬೈಯಲ್ಲಿ "ಕವಿ ಕಯ್ಯಾರ 100" ಎಂಬ ಕವಿಗೋಷ್ಠಿಯನ್ನು ಆಯೊಜಿಸಿತ್ತು. ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಧ್ವನಿ ಪ್ರತಿಷ್ಠಾನದ ಅಧ್ಯಕ್ಷ, ಕವಿ, ರಂಗ ನಿರ್ದೇಶಕ ಪ್ರಕಾಶ್ ರಾವ್ ಪಯ್ಯಾರ್ ಅವರು ನಾಡು ನುಡಿಯ ಬಗ್ಗೆ ಅಭಿಮಾನವಿಲ್ಲದವನ ಎದೆ ಸುಡುಗಾಡು ಎಂಬ ಕವಿ ವಾಣಿಯನ್ನು ನೆನೆದರು.

ಕಾಸರಗೋಡಿನ ಕನ್ನಡಿಗರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಆಶಯವನ್ನು ಹೊಂದಿದ್ದು, ಹಲವು ದಶಕಗಳಿಂದ ಹೋರಾಟ ನಡೆಸಿದರೂ ಕರ್ನಾಟಕದ ಜನತೆಯ ಅಸಹಕಾರದಿಂದ ಮತ್ತು ನಮ್ಮ ರಾಜ್ಯದ ರಾಜಕಾರಣಿಗಳ ಇಚ್ಛಾ ಶಕ್ತಿಯ ಕೊರತೆಯಿಂದ ಗಡಿ ವಿವಾದ ಮುಗಿದುಹೋದ ಅಧ್ಯಾಯವೆ ಆದಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾಸರಗೋಡಿನಲ್ಲಿ ಸತತವಾಗಿ ಚಳವಳಿಯ ಮುಂಚೂಣಿಯಲಿದ್ದು ಹೋರಾಟ ನಡೆಸುತ್ತಾ ಬಂದ ಹಿರಿಯ ಚೇತನ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಜೂನ್ 8, 2014ರಂದು ನೂರು ವರ್ಷ ತುಂಬುತ್ತಿರುವಾಗ ಅವರಿಗೆ ಗೌರವ ಸಲ್ಲಿಸುವುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ವಿದೇಶಿ ನೆಲದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಂದಿನ ಯೋಜನೆಯನ್ನು ವಿವರಿಸಿದರು.

ಗೋಷ್ಠಿಯಲ್ಲಿ ಕವಿಗಳಾದ ಇರ್ಶಾದ್ ಮೂಡುಬಿದ್ರಿ, ಇರಣ್ಣ ಮೂಲಿಮನಿ, ಗೋಪಿನಾಥ್ ರಾವ್, ಮಧುಸೂದನ್, ಅರ್ಶದ್ ಹುಸೇನ್ ಮತ್ತು ಪ್ರಕಾಶ್ ರಾವ್ ಪಯ್ಯಾರ್ ತಮ್ಮ ಕವನ ವಾಚಿಸಿದರು. ಗಣೇಶ್ ರೈ ಅವರು ಕಯ್ಯಾರರ ಜೀವನ ಮತ್ತು ಕಾವ್ಯದ ಬಗ್ಗೆ ವಿವರಣೆ ನೀಡಿದರು.

ಇದೆ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಧ್ವನಿ ಪ್ರತಿಷ್ಠಾನದ ಸದಸ್ಯರಾಗಿ, ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿ ತಾಯಿನಾಡಿಗೆ ಮರಳುತ್ತಿರುವ ಮಧುಸೂದನ ಹಾಗೂ ಜಯಶ್ರೀ ಮಧುಸೂದನ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಚಿಲ್ಲಿ ವಿಲ್ಲಿ ಫ಼ೂಡ್ ಪ್ರೊಡಕ್ಟ್ ಸಂಸ್ಥೆಯ ಆಡಳಿತ ನಿರ್ದೇಶಕ ಸತೀಶ್ ವೆಂಕಟರಮಣ, ರಿಲೈಬಲ್ ಫ್ಯಾಬ್ರಿಕೆಟರ್ಸ್ ಎಲ್.ಎಲ್.ಸಿ.ನ ಆಡಳಿತ ನಿರ್ದೇಶಕ ಜೇಮ್ಸ್ ಮೆಂಡೊನ್ಸಾ, ರೇಡಿಯೊ ಸ್ಪಯ್ಸ್ ನ ಆಡಳಿತ ನಿರ್ದೇಶಕ ಹರ್ಮನ್ ಲೂಯಿಸ್ ಅವರು ಮುಖ್ಯ ಆತಿಥಿಗಳಾಗಿ ಉಪಸ್ಥಿತರಿದ್ದರು. ಯು.ಎ.ಇ.ಯ ಎಲ್ಲಾ ಕನ್ನಡ ಪರ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸೋನಿಯಾ ಗೌತಮ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ಜಯಂತ್ ಶೆಟ್ಟಿಯವರ ವಂದನೆಯೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮದ ನಿರ್ವಹಣೆಯ ಹೊಣೆಯನ್ನು ಸುದರ್ಶನ ಹೆಗ್ದೆ ಅವರು ವಹಿಸಿದ್ದರು. ಪದ್ಮರಾಜ್ ಎಕ್ಕಾರ್, ಸಂಪತ್ ಶೆಟ್ಟಿ, ಸಂತೋಷ್ ಪೂಜಾರಿ, ಗಣೇಶ್ ಕುಲಾಲ್ ಮುಂತಾದವರು ಸಹಕರಿಸಿದ್ದರು.

English summary
A function was organized in Dubai by Kannadigas to celebrate birth centenary of Kannada poet Kayyara Kinyanna Rai. A report by Prakash Payyar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X