• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೂಲ ಅಮೆರಿಕಾ ಜನಾಂಗದ ಭಾಷೆಯಲ್ಲಿ ಕನ್ನಡದ ಪ್ರಭಾವ

By ಚಂದ್ರು ಅಲಿಯಾಸ್ ರವಿ
|

ಬೆಂಗಳೂರಿನಂಥ ನಗರಗಳಲ್ಲಿ ಕನ್ನಡದ ಕೆಲ ಪದಗಳು ಕಿವಿಗೆ ಬಿದ್ದರೆ ಅಚ್ಚರಿ ಬೀಳುವಂಥ ಜಮಾನಾದಲ್ಲಿ ನಾವಿದ್ದೇವೆ. ಇದು ಉತ್ಪ್ರೇಕ್ಷೆ ಅನ್ನಿಸಿದರು ಆ ಮಟ್ಟಿಗೆ ಕನ್ನಡ ಭಾಷೆ ಅಳಿವಿನ ಅಂಚಿಗೆ ಜಾರುತ್ತಿದೆ. ಪರಿಸ್ಥಿತಿ ಹೀಗಿರುವಾಗ ದೂರದ ದಕ್ಷಿಣ ಅಮೆರಿಕಾದ ಮೂಲ ಜನಾಂಗದವರು ಆಡುವ ಭಾಷೆಯಲ್ಲಿ ಹಲವಾರು ಕನ್ನಡ ಪದಗಳು ಇರುವುದನ್ನು ಕೇಳಿದರೆ ಅಚ್ಚರಿಯಾಗದೆ ಇದ್ದೀತೆ? ಕಾಲಾಂತರದಲ್ಲಿ ಆ ಜನಾಂಗವೇ ಅಳಿವಿನಂಚಿನಲ್ಲಿ ಇದ್ದರೂ ಅಳಿದುಳಿದವರು ಮೂಲ ಭಾಷೆಯನ್ನು ಉಳಿಸಿಕೊಂಡಿದ್ದಾರೆ. ಈ ಕುರಿತು ಅಮೆರಿಕದಲ್ಲಿ ನೆಲೆಸಿರುವ ರವಿ ಅವರು ಬರೆದಿರುವ ಲೇಖನ ಇಲ್ಲಿದೆ - ಸಂಪಾದಕ.

ಕ್ರಿಸ್ತ ಪೂರ್ವ 2600-1900 ಇಂಡಸ್ ವ್ಯಾಲಿ ನಾಗರಿಕತೆಯ ಉತ್ತುಂಗದ ಕಾಲ. ಮೂಲ ಜನಾಂಗಗಳಾದ ದಾಸರು, ದಸ್ಯರು ಮತ್ತು ಸಿಮ್ಯುಸರೆಂಬ (Dasyus, Dasas and Simyus) ಮೂಲ ಜನಾಂಗ ಅಲ್ಲಿ ವಾಸವಾಗಿತ್ತು. ಅಲ್ಲಿಯ ಮೂಲ ಜನರು ಪ್ರಕೃತಿ ಆರಾಧಕರಾಗಿದ್ದರು. ಆಗ ಅಲ್ಲಿಗೆ ಬಂದ ಆರ್ಯ ಜನಾಂಗಕ್ಕೂ ಹಾಗು ಅಲ್ಲಿ ನೆಲೆಸಿದ್ದ ಮೂಲ ಜನಾಂಗಕ್ಕೂ ಮುಖಾಮುಖಿಯಾಯಿತು. ಆ ಮುಖಾಮುಖಿಯ ಹೋರಾಟದ ಬಗ್ಗೆ ಋಗ್ ವೇದದಲ್ಲಿ ಉಲ್ಲೇಖವಿದೆ.

ಆಗ ಅಲ್ಲಿ ಇದ್ದದ್ದು ಎರಡೇ ಪದಗಳ ವರ್ಗೀಕರಣ. "ಸುರ (vedic) ಹಾಗು ಅಸುರ (Non -vedic)" ಎಂದಿತ್ತು. ಆ ಮುಖಾಮುಖಿಯ ಕಾಲದಲ್ಲಿ ಸಂಸ್ಕೃತ ಹಾಗು ದ್ರಾವಿಡ ಭಾಷೆಗಳ ಪದ ಬಳಕೆಯ ಕೊಡುಕೊಳ್ಳುವಿಕೆ ಆಯಿತು. ಆ ಮುಖಾಮುಖಿಯ ಹೋರಾಟದ ನಂತರ ಇಂಡಸ್ ವ್ಯಾಲಿ ನಾಗರಿಕತೆ ಹವಾಮಾನ ವೈಪರೀತ್ಯದಿಂದಲೋ ಆಥವಾ ಇನ್ನಾವುದೋ ಕಾರಣಕ್ಕೋ ತಮ್ಮ ಮೂಲ ಸ್ಥಾನವನ್ನು ಬಿಟ್ಟು ಕೆಲವರು ಭಾರತದ ದಕ್ಷಿಣದ ಕರಾವಳಿ ತೀರಕ್ಕೆ ಹಾಗು ಉತ್ತರಕ್ಕೆ ಪಾಲಾಯನ ಮಾಡಿದರು.

Kannada words in Maya language in South America

ಅದರಲ್ಲಿ ಒಂದು ಗುಂಪು ಈಜಿಪ್ಟ್ ಮುಖಾಂತರ ದಾಟಿಕೊಂಡು ದಕ್ಷಿಣ ಅಮೆರಿಕಾದ ಕಡಲ ತೀರಕ್ಕೆ ವಲಸೆ ಹೋಗಿ ಅಲ್ಲಿಯೇ ತಮ್ಮ ನೆಲೆಯನ್ನು, ಅಲ್ಲಿನ ಬುಡಕಟ್ಟು ಜನಾಂಗದ ಜೊತೆ ಸೇರಿ ಕಟ್ಟಿಕೊಂಡರು. ಆ ಗುಂಪೇ ದ್ರಾವಿಡ ಕರ್ನಾಟ ಬಾಷೆಯನ್ನು ಉಪಯೋಗಿಸುತ್ತಿದ್ದ ಮೂಲ ಇಂಡಸ್ ಜನಾಂಗ. ಆ ಗುಂಪೇ ಕಿಚ್ಚೆ ಮಾಯಾ ಗುಂಪು. ಅಲ್ಲಿನ ಮೂಲ ನಿವಾಸಿಗಳೊಂದಿಗೆ ಬೆರೆತು ತಮ್ಮದೇ ಸಂಸ್ಕೃತಿಯನ್ನು ಬೆಳೆಸಿದರು.

ಇವರು ಮೂಲತಃ ಪ್ರಕೃತಿ ಹಾಗು ನಾಗಾರಾಧಕರು ಮತ್ತು ಜ್ಯೋತಿಷ್ಯದಲ್ಲಿ ಒಳ್ಳೆ ಜ್ಞಾನವನ್ನು ಹೊಂದಿದ್ದರು. ಮಾಯಾ ಜನಾಂಗದ ಮೊದಲನೆಯ ವಂಶವನ್ನು (Dynasty) ಸ್ಥಾಪಿಸಿದವನೇ "Kan Balam" ಎಂಬುವವನು. [K'inich Kan Bʻalam I -September 20, 524 - February 3, 583.] ಇವರಿಗೆ ಸ್ವಂತ ಲಿಪಿ ಇಲ್ಲದಿದ್ದರೂ ಮಾಯಾ ರೇಖಾ ಚಿತ್ರದಿಂದ (ಮಾಯಾ Glyphs) ತಮ್ಮ ಇರುವಿಕೆಯನ್ನು ದಾಖಲಿಸಿದರು.

ಇವರು ಶತ್ರುಗಳನ್ನು ಹಿಡಿದು ನರಬಲಿ ಕೊಡುತ್ತಿದ್ದರು. ಅವರು ಕೊಡುತ್ತಿದ್ದ ನರಬಲಿಗೂ ಕರ್ನಾಟಕದಲ್ಲಿ (7ನೇ ಶತಮಾನ -ಸಿಡಿತಲೆ) ದಾಖಲಾಗಿದ್ದ ನರಬಲಿಗೂ ಸಾಮ್ಯವಿತ್ತು. ತಮ್ಮ ಮಾಯಾ ಬಲದಿಂದ ದೊಡ್ಡ ಪಿರಮಿಡ್ ಗಳನ್ನೂ ಕಟ್ಟಿದರು. 7ನೇ ಶತಮಾನದ ಆಸುಪಾಸಿನಲ್ಲೇ ಅಲ್ಲಿಯ ಶತ್ರುಗಳ ಅಂತಃಕಲಹದಿಂದ ಮಾಯಾ ವಂಶವು ಅಳಿಯಿತು. ನಂತರದಲ್ಲಿ ಅಲ್ಲಿಯ ಮೂಲ ಜನರು ತಮ್ಮ ಪೂರ್ವಿಕರ (ಮಾಯಾ ಜನಾಂಗದ) ಜ್ಞಾನ ಭಂಡಾರವನ್ನು ಅತಿ ಜತನದಿಂದ ಕಾಪಾಡಿಕೊಂಡು ಬಂದಿದ್ದರು.

ಯಾವಾಗ ಸ್ಪೇನ್ ದೇಶದಿಂದ ಅಮೆರಿಕಾದ ಕರಾವಳಿ ತೀರಕ್ಕೆ ನಾವೆಯಲ್ಲಿ ಬಂದು ಕೊಲಂಬಸ್ ವಕ್ಕರಿಸಿದನೋ ಅಲ್ಲಿಗೆ ಅಮೆರಿಕಾದ ಮೂಲ ನಿವಾಸಿಗಳ ಕಗ್ಗೊಲೆ ಆರಂಭವಾಯಿತು. ಈಗ ಅಳಿದುಳಿದಿರುವ ಮಾಯಾ ಜನಾಂಗದವರೆಲ್ಲರು ಸ್ಪ್ಯಾನಿಷ್ ಆಕ್ರಮಣಕಾರರಿಂದಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.

Allen J. Christenson ಎಂಬ ಪ್ರೊಫೆಸರ್ Brigham Young ಯೂನಿವರ್ಸಿಟಿಯಿಂದ K'ICHE' - ENGLISH ಡಿಕ್ಷನರಿ (ಕಿಚ್ಚೇ -ಮಾಯಾ)ಯನ್ನು 17 ವರುಷದಿಂದ ದಕ್ಷಿಣ ಅಮೆರಿಕಾದದಲ್ಲಿ ಅಲೆದಾಡಿ ಕಷ್ಟಪಟ್ಟು ಈ ಡಿಕ್ಷನರಿಯನ್ನು ಹೊರತಂದಿದ್ದಾನೆ. ತುಂಬಾ ಖುಷಿಯ ವಿಷಯವೆಂದರೆ 'ಕಿಚ್ಚೆ- ಮಾಯಾ' ಭಾಷೆಯಲ್ಲಿ ಹೇರಳವಾದ ಅಪ್ಪಟ ಕನ್ನಡ ಹಾಗು ಕೆಲವು ಸಂಸ್ಕೃತ ಶಬ್ದಗಳು ಇವೆ.

ಉದಾ: kichhe, kichhu, chuchhu, karnata (ಕರ್ನಾಟಕ?), ku (ಕೂತ್ಕೋ), ಕಚ್ಚು (chew), ಕಹಿ (bitter) ಅಜ್ಜ (ajaw) ತಾತ, (ಗ್ರಾಂಡ್ ಫಾದರ್), are wa' (dem) this ಇಸ್, ಅರೆ! (pro) he, she, him, her, it ati't (n) grandmother (ಅಜ್ಜಿ?), ಮುಚ್ಚು (silent) ಕಂಪನ, ಕರ್ಮ (ಸಂಸ್ಕೃತ?), ಅಜೀ (ಅಜೀರ್ಣ-indigestion).

ನಹುಷ ರಾಜನ ಮೂಲದವರೆ AZTECS ಜನಾಂಗರು?

ಅಜ್ಟೆಕ್ ಜನಾಂಗ - ಮೆಕ್ಸಿಕೋ. ಇವರ ಮೂಲ ಜನಾಂಗವನ್ನು ನಹುಅ (nahua) ಎಂದು ಕರೆಯುತ್ತಾರೆ. ಕೆಲವು ಚರಿತ್ರಕಾರರು nahua ಜನಾಂಗದ ಮೂಲ ಜನರು ನಹುಷ ರಾಜನ ಮೂಲದವರು ಎಂದು ದಾಖಲಿಸಿದ್ದಾರಾದರೂ ಇದಕ್ಕೆ ಯಾವ ತರಹದ ಪುರಾವೆ ಇಲ್ಲ. ಇವರ ಆಚರಣೆಗಳು ನಮ್ಮ ದೇಶದ ನಾಗಾ ಜನಾಂಗಕ್ಕೆ ಹೋಲಿಕೆ ಇದೆ. ಮಹಾಭಾರತದಲ್ಲಿ ನಹುಷನ ಬಗ್ಗೆ ಹಲವಾರು ಕತೆಗಳಿವೆ. ಒಂದು ಪ್ರಸಂಗದಲ್ಲಿ ನಹುಶನು ಕಾಳಸರ್ಪದ ರೂಪವ ತಾಳಿ ಧರ್ಮರಾಯನಿಗೆ ಧರ್ಮದ ಬಗ್ಗೆ ಪ್ರಶ್ನೆಯನ್ನು ಕೇಳುತ್ತಾನೆ. ಇದೆ nahua ಜನಾಂಗವನ್ನು ಅಸ್ತಿಕ ಮುನಿಯು ಭಾರತದ ಇನ್ನೊಂದು ದಿಕ್ಕಿಗೆ (ಅಮೆರಿಕಾದ ತೀರಕ್ಕೆ) ಕರೆತಂದನೆಂದು ಹೇಳುತ್ತಾರೆ. ಹಾಗಿ ಇವರಿಗೆ asitika -Azeteca ಹೆಸರು ಬಂತೆಂದು ಹೇಳುತ್ತಾರೆ.

Aztec ಜನಾಂಗಕ್ಕೆ ಮೂಲ ಪ್ರೇರಣೆ ಗರುಡ (Huitzilopochtli). ಈ ಜನಾಂಗ 14ನೇ ಶತಮಾನದಲ್ಲಿ ತಮ್ಮದೇ ಆದ ಒಂದು ಹೊಸ ನೆಲೆಯನ್ನು ಹುಡುಕುತ್ತಿದ್ದಾಗ ಒಂದು ಕಡೆ ಕ್ಯಾಕ್ಟಸ್ ಗಿಡದಲ್ಲಿ ಗರುಡ ಹಾವನ್ನು ಬಾಯಲ್ಲಿ ಕಚ್ಚಿಕೊಂಡು ಕೂತಿರುತ್ತದೆ. ಅದನ್ನು ನೋಡಿ ಇವರಿಗೆ ಅಲ್ಲೇ ಹೊಸ ಸಾಮ್ರಾಜ್ಯವನ್ನು ಕಟ್ಟುವ ಪ್ರೇರಣೆಯಾಗುತ್ತದೆ (ಈಗಿರುವ ಮೆಕ್ಸಿಕೋ ಬಾಗದಲ್ಲಿ). ಇವರು ಕೂಡ ತಮ್ಮ ಸೂರ್ಯ ದೇವರನ್ನು ಒಲಿಸಿಕೊಳ್ಳುವುದಕ್ಕೆ ನರಬಲಿಯನ್ನು ಕೊಡುತ್ತಿದ್ದರು.

Hernando Cortes ಎಂಬ ಸ್ಪ್ಯಾನಿಷ್ ಸೇನಾನಿಯು ಸ್ಪೇನ್ ರಾಣಿ ಇಸಾಬೆಲ್ಲಾಳ ಆಜ್ಞೆಯ ಮೇರೆಗೆ ನೂರಾರು ಸೈನಿಕರೊಂದಿಗೆ 15ನೇ ಶತಮಾನದಲ್ಲಿ ಮೆಕ್ಸಿಕೋ ತೀರಕ್ಕೆ ಬಂದಿಳಿದು ಸಂಪೂರ್ಣ ಅಜ್ಟೆಕ್ ಜನಾಂಗವನ್ನು ನಾಶ ಮಾಡಿ ಎಲ್ಲರನ್ನೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದನು. ಇವರ ಮೂಲ ಭಾಷೆ nahutl. ಮೆಕ್ಸಿಕೋ ಸಂಪೂರ್ಣ ಸ್ಪ್ಯಾನಿಷ್ ಬಾಷೆಯ ಪ್ರಭಾವವಿರುವುದರಿಂದ ಇವರ ಮೂಲ ಬಾಷೆಯು ಅಳಿವಿನ ಅಂಚಿನಲ್ಲಿದೆ.

Nahutl ಬಾಷೆಯಲ್ಲಿರುವ ಕನ್ನಡ ಹಾಗು ಸಂಸ್ಕೃತ ಪದಗಳು. patolli (ನಮ್ಮ ಪಗಡೆ ಆಟ), ಕ್ಯಾಕ್ಟಸ್ ಗಿಡ -ನೋಪಳ್ಲಿ (ಪಾಪಾಸ್ ಕಳ್ಳಿ), ನಂದೇ. ನೀ (you), coyte (ಕೋಟೆ), kallina (ಕಲ್ಲಿನ ಮನೆ), petla (ಪೆಟ್ಟಿಗೆ), ಅಂಬು, ಮಣಿ, ಮಾಯಾ, Quetzalcoatl (ಕಾಳ ಸರ್ಪ).

ಇಂಕಾ ನಾಗರಿಕತೆ

ಇಂಕಾ ನಾಗರಿಕತೆ 14ನೇ ಶತಮಾನದಲ್ಲಿ ಶುರುವಾಯಿತು. ಈಗಿರುವ ಪೆರು, ಚಿಲಿ, ಬೊಲಿವಿಯ, Argentaina, Equadorನಲ್ಲಿ ಈ ಜನರು ಹರಡಿದ್ದಾರೆ. ಇವರು ಮಾತನಾಡುವ ಬಾಷೆ quechua (KICHWA). ಇವರು ಕೂಡ ನಮ್ಮ ಹಿಂದೂ ನಾಗರಿಕತೆಯಂತೆ ಪ್ರಕೃತಿ ಸೂರ್ಯ ದೇವನ ಆರಾದಕರು. 15ನೇ ಶತಮಾನದಲ್ಲಿ ಸ್ಪ್ಯಾನಿಷ್ ಆಕ್ರಮಣಕಾರರ ಹೊಡೆತಕ್ಕೆ ಸಿಲುಕಿ ಇಲ್ಲಿಯ ಮೂಲ ಜನರ ಸಂಸ್ಕೃತಿ ಹಾಗು ಬಾಷೆ ಅಳಿವಿನ ಅಂಚಿನಲ್ಲಿದೆ. ಇವರು ಕಟ್ಟಿದ ಪ್ರಪಂಚದಲ್ಲೇ ಅತಿ ಹೆಚ್ಚು ಪ್ರವಾಸಿಗಳನ್ನು ಸೆಳೆಯುವ ಸ್ಮಾರಕವೆ "ಮಚ್ಚು-ಪಿಚ್ಚು. (ಗೂಗಲ್ Macchu -pichhu ). ಈಗ ಈ ಜನರೆಲ್ಲರೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಾರೆ. [ಪೆರುನಲ್ಲಿರುವ ಮಾಚುಪಿಚು ಪ್ರವಾಸದ ಅನುಭವ]

ಕನ್ನಡಿಗರಿಗೆ ಅತಿ ಖುಷಿಯಾಗುವ ವಿಷಯವೆಂದರೆ ಇವರ ಮೂಲ kichwa ಬಾಷೆ ಕನ್ನಡ ಭಾಷೆಗೆ ಅತಿ ಹತ್ತಿರವಿರುವುದು. ಬೇಜಾರಿನ ವಿಷಯವೆಂದರೆ ನಮಗೆ kichwa -SPANISH dictionary ಸಿಗುತ್ತದೆ. ಆದರೆ English-kichwa ಹುಡುಕಿದೆ ಸಿಗಲಿಲ್ಲ. ಇವರ ಪ್ರಕಾರ KAN - ಅನ್ನುವ ಪದ ಹಾವು ಎಂದು ಅರ್ಥ. ಅಂದರೆ ನಾಗಾರಾಧಕರು ಅಂತ ಅರ್ಥ. (ನಾವು ನಾಗರ ಪಂಚಮಿಯನ್ನು ಆಚರಿಸುವುದಿಲ್ಲವೇ?) KAN -NADA -ಕನ್ನಡಿಗರು ನಾಗ ಪೂಜೆಯನ್ನು ಆಚರಿಸುವ ನಾಡಲ್ಲವೆ!?

ಇವತ್ತು youtubeನಲ್ಲಿ ಹಾಗು ನಮ್ಮ ಕಿಚ್ಚ ಸುದೀಪ್ ಚಿತ್ರಗಳ ಹಾಡುಗಳಿಗೆ ಲಕ್ಷ ಹಿಟ್ಸ್ ಗಳು ಬರುತ್ತಿರುವುದೇ ದಕ್ಷಿಣ ಅಮೇರಿಕಾ ದೇಶಗಳಿಂದ. kichwa ಬಾಷೆಯಲ್ಲಿ ಬರುವ ಕನ್ನಡ ಪದಗಳು. "ಅಲ್ಲಿ, ಇಲ್ಲಿ, ಹಂಪಿ ವಾಸಿ, ಅಲ್ಲಿಂತ, ಸರಿ (ಅರಿ), ಇಲ್ಲ, ಅಲ್ಲೂ, ಸಿಮೆ, ಕುಮಾರಿ, ವಾಸಿ etc etc.

ಗುರಾಣಿ ಭಾಷೆಯಲ್ಲೂ ಕನ್ನಡದ ಪದಗಳು

ಗುರಾಣಿ ಬಾಷೆ ಬ್ರೆಜಿಲ್ ದೇಶದ ಮೂಲ ಜನಾಂಗದ ಬಾಷೆ. ಗುರಾಣಿ ಬಾಷೆಯು ದಕ್ಷಿಣ ಅಮೆರಿಕಾದ ಬಹುತೇಕ ಬಾಷೆಗೆ ಕೊಡುಗೆ ನೀಡಿದೆ ಅಂತ ಹೇಳುತ್ತಾರೆ. ಪೋರ್ಚುಗೀಸರು ಬ್ರೆಜಿಲ್ ದೇಶವನ್ನು 15ನೇ ಶತಮಾನದಲ್ಲಿ ಆಕ್ರಮಿಸಿಕೊಂಡಾಗ ಇಲ್ಲಿನ ಮೂಲ ಇಂಡಿಯಾ ಜನರನ್ನು ಮೂಲೆ ಗುಂಪು ಮಾಡಲಾಯಿತು. ಗುರಾಣಿ ಬಾಷೆಯು ಕೂಡ ಬ್ರೆಜಿಲ್ ನಲ್ಲಿ ಅಳಿವಿನ ಅಂಚಿನಲ್ಲಿದೆ. ಆದರೆ ಪರಾಗ್ವೇ ದೇಶದಲ್ಲಿ ಈ ಬಾಷೆ ಅಫೀಷಿಯಲ್ ಬಾಷೆಯಾಗಿದೆ. ಗುರಾಣಿ ಬಾಷೆಯಲ್ಲಿ ಕನ್ನಡಿಗರು ಬಳಸುವ "ರೀ" ಪದವನ್ನು ಇವರು ಉಪಯೋಗಿಸುತ್ತಾರೆ.

ಇನ್ನೊಂದು ಗುರಾಣಿ ವಾಕ್ಯವು ಅಚ್ಚ ಕನ್ನಡ ವಾಕ್ಯವೇ ಆಗಿದೆ. ಉದಾ : Nde rejoguara'e peteĩ ta'angambyry pyahu, "so then you bought a new television after all" (ಅಂದೇ ಪೆಟ್ಟಿಗೆಯನ್ನು ತಗಂಬಂದೆ") ಕನ್ನಡ ಪದಗಳು: ಆಗುತೈತೆ, ಹೋಗುತೈತೆ, ಹಾಕು, ನಂದೇ, ನಂದು, ಕುರಿ, ಹಾಕುರಿ (ಹಾಕ್ರಿ), ರೇ, etc. ಓದುಗರು ಈ ವಿಷಯದ ಬಗ್ಗೆ ಗೂಗಲ್ ಮಾಡಿ ನೋಡಬಹುದು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The most spoken Mayan language, is K'iche' with 2.3 million speakers and the largest indigenous population in Guatemala. Yucatec Maya is the most widely spoken Mayan language in Mexico. Interesting thing is these languages have many Kannada words. Are these tribal originally from Karnataka? Find out.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more