ಸಿಂಗಪುರದ 'ಸಿಂಚನ'ದಿಂದ ಕಥೆ ಮತ್ತು ಕವನ ಸ್ಪರ್ಧೆ

Posted By:
Subscribe to Oneindia Kannada

ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಪತ್ರಿಕೆ 'ಸಿಂಚನ' ಪ್ರತಿ ತಿಂಗಳು ಸಿಂಗನ್ನಡಿಗರ ಮತ್ತು ವಿಶ್ವಕನ್ನಡಿಗರ ಒಡನಾಟದಲ್ಲಿ ಹಲವು ವೈವಿಧ್ಯಮಯ ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡು ಬರುತ್ತಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಆಯೋಜಿಸಿದ್ದ 'ಸಿಂಚನ ಸಾಹಿತ್ಯ ಸ್ಪರ್ಧೆ'ಗೆ ಸಿಕ್ಕ ಉತ್ಸಾಹಭರಿತ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡು ಕನ್ನಡ ಸಂಘ (ಸಿಂಗಪುರ)ವು ಈ ಬಾರಿ "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ" ಪ್ರಯುಕ್ತ ಸಾಹಿತ್ಯ ಸ್ಪರ್ಧೆಯನ್ನು ಏರ್ಪಡಿಸಿದೆ.

ಈ ವರ್ಷದ ಸ್ಪರ್ಧೆಯಲ್ಲಿ ಸಣ್ಣಕಥೆ ಮತ್ತು ಕವನವನ್ನು ಒಳಗೊಂಡ ಎರಡು ವರ್ಗಗಳಿಗೆ ನಿಮ್ಮ ಬರಹಗಳನ್ನು ಕಳುಹಿಸಬಹುದು. ವರ್ಗಗಳ ವಿವರಗಳನ್ನು ಕೆಳಗೆ ನೀಡಲಾಗಿದೆ. [ಅ.29, 30ರಂದು ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ]

Kannada Short story and poetry competition from Sinchana

ಗಮನಿಸಿ : ಹೊರದೇಶದಲ್ಲಿ ನೆಲಸಿರುವ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಲು ಈ ವರ್ಷ ಪ್ರತಿವರ್ಗದಲ್ಲೂ ಅತ್ಯುತ್ತಮ ಅನಿವಾಸಿ ಬರಹಗಾರರಿಗೆ ಪ್ರತ್ಯೇಕ ಬಹುಮಾನವಿದೆ! ಇನ್ನೇಕೆ ತಡ? ನಿಮ್ಮ ಬರಹಗಳನ್ನು ಆದಷ್ಟು ಬೇಗ ನಮಗೆ ಕಳುಹಿಸುತ್ತೀರಾ ತಾನೆ?

ವರ್ಗ 1 - ಸಣ್ಣಕಥೆ (ಮಿತಿ - 4 ಪುಟಗಳು)
ವರ್ಗ 2 - ಕವನ (ಮಿತಿ - 1 ಪುಟ)

ಬರಹಗಾರರ ಗಮನಕ್ಕೆ:

1. ಸ್ಪರ್ಧೆಗೆ ಕಳಿಸುವ ಕಥೆ ಮತ್ತು ಕವನಗಳು ಸ್ವಂತದ್ದಾಗಿರಬೇಕು ಮತ್ತು ಬೇರೆಲ್ಲೂ (ಅಂತರ್ಜಾಲ ಮತ್ತು ಮುದ್ರಿತ ಮಾಧ್ಯಮ) ಈ ಮೊದಲು ಪ್ರಕಟವಾಗಿರಬಾರದು.

2. ಕಥೆ ಮತ್ತು ಕವನಗಳು 'ಬರಹ' ಅಥವ 'ನುಡಿ' ತಂತ್ರಾಂಶದಲ್ಲಿರಬೇಕು. ಕೈ ಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. [ಕನ್ನಡ ಸಣ್ಣಕಥೆಗಳ ಗುಚ್ಛ]

3. ಬಹುಮಾನಿತ ಕೃತಿಗಳನ್ನು "ಸಿಂಚನ' ಸಂಚಿಕೆಗಳಲ್ಲಿ ಪ್ರಕಟಿಸಲಾಗುವುದು. 'ಸಿಂಚನ' ಸಂಪಾದಕ ಸಮಿತಿಯ ತೀರ್ಮಾನವೇ ಅಂತಿಮ. ಬರಹಗಳನ್ನು ಪರಿಷ್ಕರಿಸಿ ಪ್ರಕಟಿಸುವ ಹಕ್ಕು 'ಸಿಂಚನ' ಸಂಪಾದಕ ಸಮಿತಿಗೆ ಸೇರಿದ್ದು.

4. ಎರಡೂ ವರ್ಗಗಳಿಗೂ ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ 5, 2016. ನಂತರ ಬಂದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಬಹುಮಾನ ವಿಜೇತರಿಗೆ ನವೆಂಬರ್ ತಿಂಗಳಲ್ಲಿ ಮಿಂಚಂಚೆ ಮೂಲಕ ತಿಳಿಸಲಾಗುವುದು.

5. ಬರಹಗಾರರು ತಮ್ಮ ಕೃತಿಯ ಜೊತೆಗೆ ತಮ್ಮ ಸಂಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ವಯಸ್ಸು, ಭಾವಚಿತ್ರ ಮತ್ತು EMAIL idಯನ್ನು ತಪ್ಪದೇ ಕಳುಹಿಸಬೇಕು. ಈ ವಿವರಗಳಿಲ್ಲದ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

6. ಪ್ರತಿ ವರ್ಗಕ್ಕೆ ಒಬ್ಬರು ಒಂದಕ್ಕಿಂತ ಹೆಚ್ಚು ಲೇಖನ ಕಳುಹಿಸುವಂತಿಲ್ಲ.

7. ನಿಮ್ಮ ಬರಹಗಳನ್ನು sinchanaspardhe@singara.org ಗೆ ಮಿಂಚಂಚೆ ಮೂಲಕ ಕಳುಹಿಸಿ.

8. ವಿಶ್ವಕನ್ನಡಿಗರೆಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಯಾವುದೇ ವಯೋಮಿತಿಯ ನಿಬಂಧನೆಯಿಲ್ಲ.

ಸಿಂಚನ ಸಾಹಿತ್ಯ ಸ್ಪರ್ಧೆ ಸಮಿತಿ
ಕನ್ನಡ ಸಂಘ ಸಿಂಗಪುರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada Sangha Singapore has organized Kannada short story and poetry competition as part of Singapore Kannada Samskruti Sammelana 2016. Kannadigas from all over the world can send their creative write ups before October 5, 2016.
Please Wait while comments are loading...