ಡಾಲರ್ ಎದುರು ರೂಪಾಯಿ ಕುಸಿತ: ವಿದೇಶಿ ವ್ಯಾಸಂಗ ದುಬಾರಿ, ಟಾಪ್-ಅಪ್ ಸಾಲದ ಮೊರೆ ಹೋದ ವಿದ್ಯಾರ್ಥಿಗಳು

ಕಳೆದ ಒಂದು ವರ್ಷದಿಂದ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ತೀವ್ರವಾಗಿ ಕುಸಿಯುತ್ತಿರುವುದು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಾಗೂ ಮುಂದಿನ ದಿನಗಳಲ್ಲಿ ವಿದೇಶಕ್ಕೆ ತೆರಳಲು ಬಯಸುವ ಭಾರತೀಯ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ರೂಪಾಯಿ ಮೌಲ್ಯದ ಕುಸಿತದಿಂದಾಗಿ ವಿದೇಶದಲ್ಲಿನ ಶಿಕ್ಷಣ ವೆಚ್ಚ ಮತ್ತು ಜೀವನ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿವೆ.

ಇದರಿಂದಾಗಿ ಈ ಹಿಂದೆ ಬ್ಯಾಂಕ್‌ಗಳಿಂದ ಮಂಜೂರಾಗಿದ್ದ ಶೈಕ್ಷಣಿಕ ಸಾಲದ ಮೊತ್ತವು ಪ್ರಸ್ತುತ ಖರ್ಚುಗಳನ್ನು ನಿಭಾಯಿಸಲು ಸಾಕಾಗುತ್ತಿಲ್ಲ. ಪರಿಣಾಮವಾಗಿ, ವಿದ್ಯಾರ್ಥಿಗಳು ಹೆಚ್ಚುವರಿ ಆರ್ಥಿಕ ನೆರವಿಗಾಗಿ ಬ್ಯಾಂಕ್‌ಗಳಿಂದ ಟಾಪ್-ಅಪ್ ಶೈಕ್ಷಣಿಕ ಸಾಲಗಳನ್ನು ತಗೆದುಕೊಳ್ಳುತ್ತಿದ್ದಾರೆ.

Plunging Rupee

ಟಾಪ್-ಅಪ್ ಸಾಲಗಳಿಗೆ ಹೆಚ್ಚಿದ ಬೇಡಿಕೆ

ವಿಶೇಷವಾಗಿ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಟಾಪ್-ಅಪ್ ಶೈಕ್ಷಣಿಕ ಸಾಲಗಳಿಗೆ ಬೇಡಿಕೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ದುರ್ಬಲಗೊಳ್ಳುತ್ತಿರುವ ರೂಪಾಯಿಯಿಂದ ಉಂಟಾಗಿರುವ ಆರ್ಥಿಕ ಅಂತರವನ್ನು ಸರಿದೂಗಿಸಲು ಅನೇಕ ವಿದ್ಯಾರ್ಥಿಗಳು 1 ಲಕ್ಷ ರೂ.ಗಳಿಂದ ಹಿಡಿದು 6 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಸಾಲವನ್ನು ಕೋರುತ್ತಿದ್ದಾರೆ.

ಭಾರತದಲ್ಲಿ ಶೈಕ್ಷಣಿಕ ಸಾಲಗಳನ್ನು ರೂಪಾಯಿಗಳಲ್ಲಿ ಮಂಜೂರು ಮಾಡಲಾಗುತ್ತದೆ. ಆದರೆ ವಿದೇಶದಲ್ಲಿ ಟ್ಯೂಷನ್ ಫೀಸ್ ಮತ್ತು ಇತರ ವೆಚ್ಚಗಳನ್ನು ಡಾಲರ್, ಪೌಂಡ್ ಅಥವಾ ಯುರೋಗಳಂತಹ ವಿದೇಶಿ ಕರೆನ್ಸಿಗಳಲ್ಲಿ ಪಾವತಿಸಬೇಕಾಗುತ್ತದೆ. ಹೀಗಾಗಿ ರೂಪಾಯಿ ಮೌಲ್ಯ ದುರ್ಬಲಗೊಂಡಂತೆ, ಅದೇ ವೆಚ್ಚಗಳನ್ನು ಭರಿಸಲು ಮೂಲ ಅಂದಾಜಿಗಿಂತ ಹೆಚ್ಚಿನ ರೂಪಾಯಿಗಳನ್ನು ಪಾವತಿಸುವುದು ಈಗ ಅನಿವಾರ್ಯವಾಗಿದೆ.

ಭಾರಿ ಆರ್ಥಿಕ ಹೊರೆ

ಕೆಲವು ಸಮಯದ ಹಿಂದೆ ಪ್ರತಿ ಡಾಲರ್‌ಗೆ ಸುಮಾರು 83-85 ರೂ.ಗಳಷ್ಟಿದ್ದ ರೂಪಾಯಿ ಮೌಲ್ಯ, ಇದೀಗ 95-96 ರೂ.ಗಳಿಗೆ ಕುಸಿದಿದೆ. ಇದು ವಿದೇಶಿ ಶಿಕ್ಷಣದ ವೆಚ್ಚವನ್ನು ಹೆಚ್ಚಿಸಿದೆ. ಅಂದಾಜಿನ ಪ್ರಕಾರ, ಅಮೆರಿಕದಲ್ಲಿ ನಾಲ್ಕು ವರ್ಷಗಳ ಪದವಿ ವ್ಯಾಸಂಗಕ್ಕಾಗಿ ಮೂಲತಃ ಅಂದಾಜಿಸಿದ್ದಕ್ಕಿಂತ ಇದೀಗ 30 ರಿಂದ 35 ಲಕ್ಷ ರೂ.ಗಳಷ್ಟು ಹೆಚ್ಚುವರಿ ವೆಚ್ಚ ತಗುಲುತ್ತಿದೆ. ಪಾರ್ಟ್-ಟೈಮ್ ಉದ್ಯೋಗಗಳು ಅಥವಾ ಕುಟುಂಬದ ಬೆಂಬಲವನ್ನು ನೆಚ್ಚಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ಈ ಬೆಲೆ ಏರಿಕೆ ತೀವ್ರ ಆರ್ಥಿಕ ಒತ್ತಡ ಹೇರಿದೆ. ಅನೇಕರು ಈಗ ಮಂಜೂರಾಗಿರುವ ಸಂಪೂರ್ಣ ಸಾಲದ ಮೊತ್ತವನ್ನು ಹಿಂಪಡೆಯುತ್ತಿದ್ದಾರೆ.

ಬ್ಯಾಂಕ್‌ಗಳಲ್ಲಿ ಸಾಲದ ಪ್ರಕ್ರಿಯೆ ವಿಳಂಬ

ವಿದ್ಯಾರ್ಥಿಗಳಿಗೆ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹೇಳುವಂತೆ, ಮಂಜೂರಾಗಿರುವ ಸಾಲವನ್ನು ಹೆಚ್ಚಿಸುವಂತೆ ಕೋರಿ ಬರುವ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಟಾಪ್-ಅಪ್ ಸಾಲಗಳನ್ನು ನೀಡಲು ಬ್ಯಾಂಕ್‌ಗಳು ಹೊಸ ದಾಖಲೆಗಳು ಮತ್ತು ಕೆಲವು ಸಂದರ್ಭಗಳಲ್ಲಿ ಹೆಚ್ಚುವರಿ ಭದ್ರತೆಯನ್ನು ಕೇಳುತ್ತಿವೆ. ಇದರಿಂದಾಗಿ ಸಾಲ ಮಂಜೂರಾತಿ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗುತ್ತಿದೆ.

ಆರ್‌ಬಿಐ ದತ್ತಾಂಶಗಳ ಪ್ರಕಾರ, ಕೇವಲ 2026ರ ಮಾರ್ಚ್ ತಿಂಗಳೊಂದರಲ್ಲೇ ಭಾರತೀಯರು ವಿದೇಶಿ ಶಿಕ್ಷಣಕ್ಕಾಗಿ ಸುಮಾರು 450 ಮಿಲಿಯನ್ ಡಾಲರ್‌ಗಳನ್ನು ರವಾನೆ ಮಾಡಿದ್ದಾರೆ. ಭಾರತದ ಬ್ಯಾಂಕ್‌ಗಳು ವಾರ್ಷಿಕವಾಗಿ 20,000 ದಿಂದ 25,000 ಕೋಟಿ ರೂ.ಗಳಷ್ಟು ಶೈಕ್ಷಣಿಕ ಸಾಲವನ್ನು ವಿತರಿಸುತ್ತವೆ.

ವಿದ್ಯಾರ್ಥಿಗಳ ಒಲವಿನಲ್ಲಿ ಬದಲಾವಣೆ

ಈ ಆರ್ಥಿಕ ಸವಾಲುಗಳು ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗದ ಆದ್ಯತೆಗಳನ್ನೂ ಬದಲಾಯಿಸುತ್ತಿವೆ. ಅಮೆರಿಕ ಇನ್ನೂ ಪ್ರಮುಖ ಆಯ್ಕೆಯಾಗಿದ್ದರೂ, ಜರ್ಮನಿ, ಇಟಲಿ, ಹಂಗೇರಿ, ಸ್ಲೋವಾಕಿಯಾ ಮತ್ತು ಬಲ್ಗೇರಿಯಾದಂತಹ ದೇಶಗಳಿಗೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲಿ ಶಿಕ್ಷಣ ಮತ್ತು ಜೀವನ ವೆಚ್ಚ ಸಲ್ಪ ಅಗ್ಗವಾಗಿದೆ ಹಾಗೂ ವಿದ್ಯಾರ್ಥಿವೇತನದ ಅವಕಾಶಗಳೂ ಲಭ್ಯವಿವೆ. ಇದರ ಜೊತೆಗೆ, ಭಾರತದಲ್ಲಿಯೇ ನೀಡಲಾಗುತ್ತಿರುವ ವಿದೇಶಿ ವಿಶ್ವವಿದ್ಯಾಲಯಗಳ ಕೋರ್ಸ್‌ಗಳ ಮೇಲಿನ ಆಸಕ್ತಿಯೂ ಹೆಚ್ಚುತ್ತಿದೆ. ಇಲ್ಲಿ ಶುಲ್ಕವನ್ನು ರೂಪಾಯಿಗಳಲ್ಲಿ ಪಾವತಿಸಬಹುದಾಗಿದ್ದು, ವಿದೇಶಕ್ಕೆ ಹೋಗುವುದಕ್ಕಿಂತ ಶೇ. 40-50ರಷ್ಟು ವೆಚ್ಚ ಉಳಿತಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+