ಐರಿಶ್ ಕನ್ನಡಿಗರ ಸಂಗೀತ ಸಂಜೆ 'ಇಂಚರ'
ಬೆಂಗಳೂರಿನಿಂದ ಬಂದಿದ್ದ ಆ ಇಬ್ಬರು ಸಂಗೀತಗಾರರು ಒಂದಾದಮೇಲೊಂದಂತೆ ಕನ್ನಡ ಮತ್ತು ಹಿಂದಿ ಚಿತ್ರರಂಗದ ಅದ್ಭುತ ಗೀತೆಗಳನ್ನು ಹಾಡುತ್ತಿದ್ದರೆ, ಐರಿಶ್ ಕನ್ನಡಿಗರಲ್ಲಿ ಉತ್ಸಾಹದ ಬುಗ್ಗೆ ಉಕ್ಕಿ ಹರಿದಿತ್ತು. ಪ್ರತಿಯೊಂದು ಹಾಡಿಗೂ ಲಯಬದ್ಧವಾಗಿ ಕುಣಿಯುತ್ತಿದ್ದರು, ಜೊತೆಯಾಗಿ ಹಾಡುತ್ತಿದ್ದರು.
ಮೇ ತಿಂಗಳಲ್ಲಿ ಐರಿಶ್ ಕನ್ನಡಿಗರ ಸಂಘ ಆಯೋಜಿಸಿದ್ದ 'ಇಂಚರ' ಸಂಗೀತ ಕಾರ್ಯಕ್ರಮ ಕನ್ನಡಿಗರಲ್ಲಿ ನವೋತ್ಸಾಹ ತುಂಬಿತು. ರಿಪಬ್ಲಿಕ್ ಆಫ್ ಐರ್ಲೆಂಡ್‌ನ ಡಬ್ಲಿನ್ ನಲ್ಲಿರುವ ವಾಕಿನ್ಸ್‌ಟೌನ್ ಸ್ಪೋರ್ಟ್ಸ್ ಮತ್ತು ಅಥ್ಲೆಟಿಕ್ ಅಸೋಸಿಯೇಷನ್ ನ ಮೋರನ್ ಕಮ್ಯೂನಿಟಿ ಹಾಲ್‌ನಲ್ಲಿ 'ಇಂಚರ' ಯಶಸ್ಸಿನ ಹಾಡು ಹಾಡಿತು.

ಬೆಂಗಳೂರಿನಿಂದ ಬಂದಿದ್ದ ಸಂಗೀತಗಾರರಾದ ಸಂಗೀತಾ ರಾಜೀವ್ ಮತ್ತು ಸಾಗರ್ ಗುರುರಾಜ್ ಅವರು ಕೇಳುಗರನ್ನು ಮೋಡಿ ಮಾಡಿದರು. ಮಾಧುರ್ಯ ತುಂಬಿದ ಹೊಸ ಮತ್ತು ಹಳೆ ಹಾಡುಗಳು ಕೇಳುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದವು, ದೈನಂದಿನ ಜೀವನವನ್ನು ಮರೆಸಿ ಹೊಸ ಲೋಕಕ್ಕೆ ಕೊಂಡೊಯ್ದವು.
ಡಬ್ಲಿನ್ ಮತ್ತು ಸುತ್ತಲಿನ ನಗರಗಳಿಂದ 100ಕ್ಕೂ ಹೆಚ್ಚು ಕನ್ನಡ ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದವು. ಹಿರಿಯರು, ಮಧ್ಯ ವಯಸ್ಕರು, ಮಕ್ಕಳು ಸಖತ್ ಎಂಜಾಯ್ ಮಾಡಿದರು. ಕರ್ನಾಟಕದ ಸಂಸ್ಕೃತಿಯನ್ನು ಉಳಿಸುವ ಮತ್ತು ಯುವಜನತೆಯಲ್ಲಿ ಬಿತ್ತುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ ಐರಿಶ್ ಕನ್ನಡಿಗರ ಸಂಘ ಪ್ರತಿವರ್ಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದೆ.

ಸಂಗೀತಾ ರಾಜೀವ್ ಮತ್ತು ಸಾಗರ್ ಗುರುರಾಜ್ ಅವರು ಡಬ್ಲಿನ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವ ಮುನ್ನ ಲಂಡನ್ ಮತ್ತು ಮ್ಯಾಂಚೆಸ್ಟರ್ ನಲ್ಲಿಯೂ ಸಂಗೀತ ಸುಧೆ ಹರಿಸಿದ್ದರು. ಅಂದ ಹಾಗೆ, ಈ ವರ್ಷದ ಸೂಪರ್ ಹಿಟ್ ಸಿನೆಮಾ ಎನಿಸಿರುವ, ಶ್ರೀಮುರುಳಿ ಅಭಿನಯಿಸಿರುವ 'ಉಗ್ರಂ' ಚಲನಚಿತ್ರ ಜೂನ್ 8ರಂದು ಡಬ್ಲಿನ್ ನಲ್ಲಿ ಪ್ರದರ್ಶಿಸಲಾಯಿತು.

-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications