ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯ್ನಾಡಿಂದ ದೂರವಿದ್ದೂ ಮತ ಚಲಾಯಿಸಿದವರಿಗೆ ಹ್ಯಾಟ್ಸಾಫ್!

By ರಜನಿ ಭಟ್ ಕಲ್ಮಡ್ಕ, ದುಬೈ
|
Google Oneindia Kannada News

ತಾಯ್ನಾಡಿನಿಂದ ಬಲು ದೂರವಿದ್ದು ಅದಕ್ಕಾಗಿಯೇ ಖರ್ಚು ಮಾಡಿ, ಭಾರತಕ್ಕೆ ಹೋಗಿ ತಮ್ಮ ಮತದ ಹಕ್ಕನ್ನು ಚಲಾಯಿಸಿದವರಿಗೆ ಹಾಟ್ಸ್ ಆಫ್ ಹೇಳಬೇಕು. ತಮ್ಮದೆ ಬೇನೆ ಬೇಗುದಿ ಕೆಲಸದೊತ್ತಡ, ಹಲವು ಕೌಟುಂಬಿಕ ಸಮಸ್ಯೆಗಳು ಇದ್ದರೂ ತಮ್ಮ ಹಕ್ಕನ್ನು ಇವರು ಮರೆತಿಲ್ಲ. ಅಂಥವರನ್ನು ಒಮ್ಮೆ ಮಾತನಾಡಿಸಿ ಬರೋಣ ಬನ್ನಿ..

ಎದ್ದೇಳು ಕರ್ನಾಟಕ
"ಎದ್ದೇಳು ಕರ್ನಾಟಕ! ನಾನು ಹಾಸಿಗೆ ಹಿಡಿದ ನನ್ನ ದೊಡ್ಡಪ್ಪನನ್ನು ಮನವೊಲಿಸಿ ವೋಟ್ ಮಾಡಲು ಕರೆದುಕೊಂಡು ಹೋಗಿದ್ದೇನೆ! ಹಾಗಿದ್ದರೆ ನೀವು? ಎವ್ ರಿ ವೋಟ್ ಕೌಂಟ್ಸ್ " ಇದು ಕೃಷ್ಣ ಭಟ್ ಇವರ ಫೇಸ್ಬುಕ್ ನಲ್ಲಿ ಕಂಡುಬಂದ ಕ್ಯಾಪ್ಶನ್..

ಎತ್ತಣ ಜೆಡಿಎಸ್ - ಎತ್ತಣ ಕಾಂಗ್ರೆಸ್, ಎತ್ತಣಿಂದೆತ್ತ ಸಂಬಂಧವಯ್ಯ? ಎತ್ತಣ ಜೆಡಿಎಸ್ - ಎತ್ತಣ ಕಾಂಗ್ರೆಸ್, ಎತ್ತಣಿಂದೆತ್ತ ಸಂಬಂಧವಯ್ಯ?

ಇವರು ಮೂಲತಃ ಗೋಕರ್ಣದವರು. ದುಬೈಯಲ್ಲಿ ಉದ್ಯೋಗಿಯಾಗಿದ್ದ ಇವರು ಇತ್ತೀಚಿಗೆ ಮುಂಬೈಯಲ್ಲಿ ನೆಲೆಸಿದ್ದಾರೆ. ತಮ್ಮ ಹತ್ತಿರದ ಬಂಧುಗಳ ಮದುವೆಗೆ ಬಂದವರು ಮತದಾನ ಮುಗಿದಮೇಲೆ ಹೋಗುವುದೆಂದು ತೀರ್ಮಾನಿಸಿದರು. ಇವರ ದೊಡ್ಡಪ್ಪ 76 ವಯಸ್ಸಿನ ಜಿಕೆ ಭಟ್ ಹೊಸ್ಮನೆ. ಇವರು ಅರ್ಬನ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಗೋಕರ್ಣ ಶಾಖೆಯಲ್ಲಿ ನಿವೃತ್ತಿ ಹೊಂದಿದವರು.

Hats off to NRIs who came to Karnataka for voting

2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತದಾನ ನಡೆದು, ರಿಸಲ್ಟ್ ಗಾಗಿ ಕಾದಿದ್ದವರಿಗೆ ಆಘಾತ ಕಾದಿತ್ತು. ಪಾರ್ಶ್ವವಾಯುವಿಗೆ ಒಳಪಟ್ಟು ಶರೀರದ ನಿಯಂತ್ರಣ ಕಳೆದುಕೊ೦ಡು ಹಾಸಿಗೆ ಹಿಡಿದರು. ಮೋದಿಯವರ ಅಪ್ಪಟ ಅಭಿಮಾನಿ ಆಗಿರುವ ಇವರು, ಕೇ೦ದ್ರದಲ್ಲಿ ಇವರ ಸರಕಾರ ಬರುವುದನ್ನು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಕ್ರಮೇಣ ಆರೈಕೆಯಿಂದಾಗಿ ಚೇತರಿಸಿಕೊಂಡು ಮಾತನಾಡಲು ಆರಂಭಿಸಿದಾಗ ಅವರ ಮೊದಲ ಪ್ರಶ್ನೆ"ಮೋದಿ ಸರಕಾರ ಬಂತಾ?" ಎಂದಾಗಿತ್ತು.

ಅಭಿಮತ : ಲಿಂಗಾಯತ ಪ್ರತ್ಯೇಕ ಧರ್ಮ ಬೇಕಿತ್ತಾ? ಅಭಿಮತ : ಲಿಂಗಾಯತ ಪ್ರತ್ಯೇಕ ಧರ್ಮ ಬೇಕಿತ್ತಾ?

ಕರ್ನಾಟಕದಲ್ಲಿ ಮತದಾನ ಹತ್ತಿರ ಬರುತ್ತಿದ್ದಂತೆ ಕೃಷ್ಣ ಭಟ್ಟರು ತಮ್ಮ ದೊಡ್ಡಪ್ಪನಿಗೆ ವೋಟು ಮಾಡುವ ಬಗ್ಗೆ ಪ್ರಸ್ತಾಪ ಮಾಡಿದರು. ಜಿ.ಕೆ ಭಟ್ಟರ ವೋಟ್ ಮಾಡಬೇಕೆನ್ನುವ ಅದಮ್ಯ ಉತ್ಸಾಹ ಮನೆಯವರನ್ನು ದಂಗು ಬಡಿಸಿತ್ತು. ಹಾಸಿಗೆ ಹಿಡಿದವರನ್ನು ಅದರಲ್ಲೂ ಒಂದು ಹೆಜ್ಜೆ ನಡೆಯಲು ಅಸಾಧ್ಯವಿರುವವರು, ಶರೀರದ ಬಲಭಾಗದ ಹತೋಟಿ ಕಳಕೊ೦ಡವರನ್ನು ಕರೆದುಕೊಡು ಹೋಗುವುದಾದರೂ ಹೇಗೆ?

ಆಗ ಕಾರ್ಯಪ್ರವೃತರಾದವರು ಕೃಷ್ಣ ಭಟ್ ಹಾಗು ಜಿಕೆ ಭಟ್ಟರ ಮಗ ಕಿರಣ್ ಹೊಸ್ಮನೆ. ಮನೆಯವರ ಮನವೊಲಿಸಿ ಜಿಕೆ ಭಟ್ಟರನ್ನು ಬೆಡ್ ನಿ೦ದ ಕೆಳಗೆ ಚೇರ್ ಮೇಲೆ ಕುಳ್ಳಿರಿಸಿ, ವೀಲ್ ಚೇರ್ ನಲ್ಲಿ ರಿಕ್ಷಾ ಮೂಲಕ ಮತಗಟ್ಟೆಗೆ ಬರುತ್ತಾರೆ. ಯಾವುದೇ ಸೌಲಭ್ಯವಿರದ ಮತಗಟ್ಟೆಗೆ ಜಿಕ್ ಭಟ್ಟರನ್ನು ಕೈಯಲ್ಲಿ ಎತ್ತಿಕೊ೦ಡು ಹೋಗಿ ತಮ್ಮ ಇಷ್ಟವಾದ ಪಕ್ಷಕ್ಕೆ ವೋಟ್ ಹಾಕಿಸಿದಾಗ, ಅವರ ಮುಖದಲ್ಲಿ ಕ೦ಡ ಸಾರ್ಥಕ ಭಾವನೆಗೆ ಕೃಷ್ಣ ಭಟ್ ಹಾಗು ಕಿರಣ್ ಹೊಸ್ಮನೆ ಮುಖದಲ್ಲಿಯೂ ಪ್ರತಿಫಲಿಸುತ್ತಿತ್ತು.

ಕುಗ್ಗದ ಆತ್ಮವಿಶ್ವಾಸದಿಂದಲೇ ಇದೆಲ್ಲ ಸಾಧ್ಯವಾಯಿತು ಎಂದು ದೊಡ್ಡಪ್ಪನ ಬಗ್ಗೆ ಹೆಮ್ಮೆ ಪಡುವ ಕೃಷ್ಣಭಟ್ಟರು "ಕನಿಷ್ಠ ಸೌಲಭ್ಯವೂ ಇರದ ಬೂತ್ ಗಳಲ್ಲಿ ಅಸೌಖ್ಯವಾಗಿರುವವರು, ಅಂಗವಿಕಲರು... ಇಂಥವರಿಗೆ ಏನಾದರು ಹೋಗಿ ಬರಲು ಸೌಲಭ್ಯ ಅಥವಾ ವ್ಯವಸ್ಥೆ ಇದ್ದರೆ ಒಳ್ಳೆಯದು. ಮತದಾನ ಪ್ರತಿಯೊಬ್ಬರ ಹಕ್ಕು ಅದನ್ನು ಪ್ರತಿಯೊಬ್ಬರೂ ಚಲಾಯಿಸಬೇಕು" ಎ೦ಬ ಅನುಭವದ ಮಾತುಗಳನ್ನು ಆಡುತ್ತಾರೆ.

Hats off to NRIs who came to Karnataka for voting

ಫ್ಯಾಮಿಲಿ ಗೆಟ್ ಟುಗೆದರ್

ಹರೀಶ್ ಕೇವಳ ಮಾಲ್ಡಿವ್ಸ್ ನಲ್ಲಿ ಯೋಗ ಗುರುಗಳಾಗಿದ್ದಾರೆ. ಮೂಲತಃ ಮಗಳೂರಿನವರಾದ ಇವರು, ಈ ಮತದಾನಕ್ಕೆ ನಾಲ್ಕು ತಿಂಗಳ ಮೊದಲೇ ಪ್ಲಾನ್ ಮಾಡಿದ್ದರು. ಅದೇ ದಿನಾಂಕಕ್ಕೆ ಸರಿಯಾಗಿ ತಮ್ಮ ರಜಾವನ್ನು ಪಡೆದು ಮಂಗಳೂರಿಗೆ ಆಗಮಿಸಿದ್ದರು. ಕೂಡು ಕುಟುಂಬವಾಗಿರುವ ಇವರ ಅಣ್ಣ ತಮ್ಮ೦ದಿರು ಕೆಲಸದ ನಿಮಿತ್ತ ದೂರದೂರವಿದ್ದಾರೆ.

ಎಲೆಕ್ಷನ್ ಎಂಬುದು ಇವರಿಗೆ ಒಂದು ಹಬ್ಬವಿದ್ದಂತೆ. ಆ ದಿನದಂದು ವರ್ಷಾವಧಿ ಪೂಜೆ ಮಾಡಿ, ಸಂಜೆಯ ವೇಳೆಗೆ ಮನೆಯವರೆಲ್ಲರೂ ಸೇರಿ ಮತಗಟ್ಟೆಗೆ ಹೋಗಿ ಮತದಾನ ಮಾಡಿ ಫೋಟೋ ಕ್ಲಿಕ್ಕಿಸಿದಾಗ, ಕೊಟ್ಟ ಕ್ಯಾಪ್ಶನ್ "ವೋಟು ನೆಪದಲ್ಲಿ ಬಾಡೂಟವೂ ಫ್ಯಾಮಿಲಿ ಫೋಟೋವೂ!"

"ಇದುವರೆಗೆ ಫ್ಯಾಮಿಲಿ ಫೋಟೋ ತೆಗೆದಾಗಲೆಲ್ಲ ಯಾರಾದ್ರೂ ಒಬ್ರಾದ್ರೂ ಮಿಸ್ ಆಗ್ತಿದ್ದೆವು. ಇಂದು ಸಂಪೂರ್ಣ ಕುಟುಂಬದವರೆಲ್ಲರೂ ಇದ್ದೇವೆ" ಎಂದು ಹೇಳುವ ಕೇವಳ, ಅಪ್ಪ ಅಮ್ಮನಿಗೆ ಮತಯಂತ್ರದ ಬಗ್ಗೆ ಉಪಯುಕ್ತ ಮಾಹಿತಿ ಕೊಟ್ಟದ್ದನ್ನು ಸ್ಮರಿಸುತ್ತಾರೆ.

"86% ಮತದಾನ ನಡೆದಿರುವ ನಮ್ಮ ಮತಗಟ್ಟೆಯಲ್ಲಿ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯು ಮತವೆನ್ನುವ ಪವಿತ್ರವಾದ ಹಕ್ಕನ್ನು ಚಲಾಯಿಸಿದ್ದಾರೆ. ಕೂಲಿ ಕಾರ್ಮಿಕನಿಂದ ಹಿಡಿದು ಕೃಷಿ ಮಾಡುವವರು ಕೆಲಸಗಳನ್ನೆಲ್ಲ ಮುಗಿಸಿ ಸಂಜೆಯೊಳಗೆ ಬಂದು ಮತದಾನ ಮಾಡಿ ಹೋಗಿದ್ದಾರೆ. ಆಗ ತಾನೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ವ್ಯಕ್ತಿಯು ಮತದಾನ ಮಾಡಿದನ್ನು ಕಂಡು, ಬೆಂಗಳೂರಿನಂತಹ ಮಹಾನಗರದ ಶೇಕಡಾವಾರು ಹೋಲಿಸಿದರೆ ಅವರು ನಮ್ಮ ಹಳ್ಳಿಯನ್ನು ನೋಡಿ ಕಲಿಯಲು ಬಹಳಷ್ಟಿವೆ" ಎಂದು ಏಳು ವರುಷದ ನಂತರ ವೋಟ್ ಮಾಡಿದ ನಂತರ ತಮ್ಮ ಅನಿಸಿಕೆ ಹಂಚಿಕೊಂಡರು.

Hats off to NRIs who came to Karnataka for voting

ರಜತ ಮಹೋತ್ಸವ

"ನನ್ನ ಮತದಾನಕ್ಕೆ ರಜತ ಮಹೋತ್ಸವ" ಎಂದು ದುಬೈ ನೆಲೆಗೊಂಡಿರುವ ಮೂಲತಃ ಶಿರಸಿಯವರಾಗಿದ್ದೂ ಬೆಂಗಳೂರಿಗರಾಗಿರುವ ವಿಜಯ ಮಂಜುನಾಥ್ ಯಾಜಿ ಅವರು 25 ವರುಷಗಳ ತರುವಾಯ ವೋಟ್ ಮಾಡಿದ್ದಾರೆ. ವೋಟರ್ ಲಿಸ್ಟ್ನಲ್ಲಿ ಹೆಸರಿದ್ದದ್ದು ವಿಜಯನಗರದಲ್ಲಿ ಹಾಗು ನಿವಾಸ ಡಾಲರ್ಸ್ ಕಾಲೋನಿಯಲ್ಲಿ. ಹೋಗಲು ಯಾವುದೇ ವಾಹನ ಸಿಗದೇ ಪರದಾಟುತ್ತಿದ್ದಾಗ ಒಂದು ಒಳ್ಳೆಯ ರಿಕ್ಷಾ ಡ್ರೈವರ್ ಸಿಕ್ಕ. ವೋಟ್ ಮಾಡಿ ಹೊರ ಬರುವ 10 ನಿಮಿಷ ಏನೂ ತಕರಾರು ಮಾಡದೆ ನನ್ನನ್ನು ತಿರುಗಿ ಮನೆ ತಲಪಿಸಿದ್ದ. ಅದೂ ಬೆಂಗಳೂರೆಂಬ ಮಹಾನಗರದಲ್ಲಿ ಒಂದು ಪೈಸೆ ಹೆಚ್ಚು ಚಾರ್ಜ್ ಮಾಡದೆ!

ಸಣ್ಣ ರಜೆಯಲ್ಲಿ ಬೆಂಗಳೂರಿಗೆ ತೆರಳಿದ್ದ ಯಾಜಿಯವರು, ಮತದಾನಕ್ಕಾಗಿ ತಮ್ಮ ತಿರುಗಿ ಪ್ರಯಾಣವನ್ನು ಮು೦ದೂಡಿದ್ದರು. ಶಾಸಕರಾಗಿ ಬರುವ ಎಲ್ರೂ ಉತ್ತಮ ಜನಪರ ಕೆಲಸ ಮಾಡುವಂತಾಗಲಿ ಎ೦ದು ಆಶಿಸಿದರು.

Hats off to NRIs who came to Karnataka for voting

ಸ್ವಯಂ ಖರ್ಚು ಮಾಡಿ ಬಂದರೂ ವೋಟ್ ಮಾಡಲಾಗದ ಪರಿಸ್ಥಿತಿ

ದುಬೈನಲ್ಲಿ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ, ದಾವಣಗೆರೆ ಮೂಲದ ಅರುಣ ಮುತ್ತುಗದೂರು ಹಾಗು ಅವರ ಪತ್ನಿ ಸುಮಾ ತಮ್ಮ ಸ್ವಂತ ಖರ್ಚಿನಲ್ಲಿ ಮತದಾನಕ್ಕಾಗಿಯೇ ಊರಿಗೆ ಆಗಮಿಸಿದ್ದರು. ಮತ ಹಾಕಲು ಹೋದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಮತದಾನದ ಗುರುತಿನ ಚೀಟಿ ಕೈಯಲ್ಲಿರದ ಕಾರಣ, ಆಧಾರ್ ಕಾರ್ಡ್ ಅಡ್ರೆಸ್ ಪ್ರೂಫ್ ನೊಂದಿಗೆ ಮತಗಟ್ಟೆಗೆ ಬಂದಿದ್ದವರಿಗೆ ಚುನಾವಣೆ ಡ್ಯೂಟಿಯಲ್ಲಿದ್ದವರು ಇವರ ಅಹವಾಲಿಗೆ ಮನ್ನಣೆ ನೀಡಲಿಲ್ಲ. ಪ್ರತಿ ಬಾರಿಯೂ ಊರಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದ ಮುತ್ತುಗದೂರು ಹಾಗು ಕುಟುಂಬದವರು ಕಳೆದ ಚುನಾವಣೆಗೆ ಕೆಲಸದೊತ್ತಡದಿಂದ ಬರಲಾಗಲಿಲ್ಲ. ಈ ಬಾರಿ ಬಂದರೂ ಮತದಾನದಿಂದ ವಂಚಿತರಾದರು.

"ಒಂದು ವೇಳೆ ಆಧಾರ್ ಕಾರ್ಡ್ ನೋಡಿ ಮತ ಹಾಕಲು ಅನುವು ಮಾಡುತ್ತಿದ್ದರೆ ಸಾವಿರ ಮೈಲು ದೂರದಿಂದ ಹಾರಿ ಬಂದದ್ದು ಸಾರ್ಥಕವಾಗುತ್ತಿತ್ತು" ಎಂಬ ಕೊರಗು ಅವರಲ್ಲಿತ್ತು. "ಎನ್ಆರ್ಐಗಳಿಗೆ ವೋಟ್ ಮಾಡುವ ಬಗ್ಗೆ ಸರ್ಕಾರ ಚಿಂತಿಸುತ್ತೇವೆಂದು ಹೇಳಿ ವರ್ಷಗಳಾದವು. ಆದರೆ ಅದರ ಫಲಿತಾಂಶ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಎಷ್ಟೋ ದೂರವಿರುವ ಭಾರತೀಯರಿಗೆ ಇದರಿಂದ ಮಹದುಪಕಾರವಾಗುತ್ತದೆ, ತಮ್ಮ ಹಕ್ಕನ್ನು ಚಲಾಯಿಸಿದಂತಾಗುತ್ತದೆ. ಸಂವಿಧಾನದ ಅಂಗವಾಗಿರುವ ವೋಟನ್ನು ಗೌರವಿಸಿದಂತಾಗುತ್ತದೆ" ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.

ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು, ಚುನಾವಣಾ ವರಿಷ್ಠರು ಯೋಚಿಸುವಂತಾಗಲಿ ಎಂಬ ಜಿಜ್ಞಾಸೆ ದೂರದಲ್ಲಿರುವ ಎನ್ ಆರ್ ಐಗಳದು. ಅದು ಮಾತ್ರವಲ್ಲ ಎಲ್ಲ ರೀತಿಯ ದಾಖಲೆಗಳನ್ನು ಆಧಾರ್ ಕಾರ್ಡಿನೊಂದಿಗೆ ವಿಲೀನ ಗೊಳಿಸಲಾಗಿದೆ. ಆದರೆ ವೋಟಿಂಗೆ ಮಾತ್ರ ಆಧಾರ್ ಕಾರ್ಡ್ ಉಪಯೋಗ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ. ಇದನ್ನುಆದಷ್ಟು ಬೇಗ ಸಹ ಪರಿಗಣಿಸಲಿ ಎಂಬುದು ಎಲ್ಲ ಕಡೆಯಿಂದ ಕೇಳಿ ಬರುತ್ತಿರುವ ಕೂಗು.

English summary
Hats off to all the NRIs and non-resident Karnataka people who came to Karnataka for voting in assembly elections. Rajani Bhat Billarkodi has compiled reactions of some of those people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X