ಇಂದಿನಿಂದ ಬುಧಾದಿತ್ಯ ರಾಜಯೋಗ :ಈ 5 ರಾಶಿಯವರಿಗೆ ಪದೋನ್ನತಿ ಭಾಗ್ಯ, ಮನೆ ನಿರ್ಮಾಣ ಯೋಗ
ಜ್ಯೋತಿಷ್ಯ ದೃಷ್ಟಿಕೋನದಿಂದ ನೋಡುವುದಾದರೆ ಮೇ 15 ಅಂದರೆ ಇಂದು ಬಹಳ ವಿಶೇಷವಾದ ದಿನ. ಇಂದು, ಎರಡು ಗ್ರಹಗಳಾದ ಸೂರ್ಯ ಮತ್ತು ಬುಧ, ವೃಷಭ ರಾಶಿಯಲ್ಲಿ ಏಕಕಾಲದಲ್ಲಿ ಸಂಚಾರ ನಡೆಸುತ್ತಿದೆ. ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ನೀಡುವ ವೃಷಭ ರಾಶಿಯಲ್ಲಿ ಸೂರ್ಯ ಮತ್ತು ಬುಧನ ಸಂಚಾರವು ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತಿದೆ. ಒಂದೇ ದಿನ ಎರಡೂ ಗ್ರಹಗಳು ಒಂದೇ ರಾಶಿಗೆ ಸಂಕ್ರಮಣ ಮಾಡುವುದು ಬಹಳ ಅಪರೂಪ.
15 ದಿನಗಳವರೆಗೆ ಬಂಪರ್ ಪ್ರಯೋಜನಗಳು:
ಮೇ 14 ರ ಮಧ್ಯರಾತ್ರಿ ಅಂದರೆ ಮೇ 15 ರ ದಿನದ ಆರಂಭವಾದ 12:34 ಕ್ಕೆ ಬುಧ ಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಿದೆ. ಇದಾದ ಕೆಲವು ಗಂಟೆಗಳ ನಂತರ, ಅಂದರೆ ಬೆಳಿಗ್ಗೆ 6:28 ಕ್ಕೆ ಸೂರ್ಯನು ಕೂಡಾ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಸೂರ್ಯ-ಬುಧ ಸಂಯೋಗವನ್ನು ಸೃಷ್ಟಿಸುತ್ತದೆ. ಈ ಸಂಯೋಗವು ಮೇ 29 ರವರೆಗೆ ಸಕ್ರಿಯವಾಗಿರುತ್ತದೆ. ಈ 15 ದಿನಗಳಲ್ಲಿ, ಐದು ರಾಶಿಯವರು ವಿಶೇಷ ಪ್ರಯೋಜನವನ್ನು ಪಡೆಯಲಿದ್ದಾರೆ.

ಬುಧಾದಿತ್ಯ ಯೋಗದಿಂದ ಅದೃಷ್ಟ ಕಂಡುಕೊಳ್ಳುವ ರಾಶಿಗಳು:
ವೃಷಭ ರಾಶಿ: ಸೂರ್ಯ ಮತ್ತು ಬುಧ ಗ್ರಹಗಳ ಸಂಚಾರದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ವೃದ್ಧಿಯಾಗುವುದು. ಹೊಸ ಮನೆ, ಆಸ್ತಿ ಅಥವಾ ವಾಹನವನ್ನು ಖರೀದಿಸುವ ಯೋಗವಿದೆ. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುವ ಸಾಧ್ಯತೆಯಿದೆ. ವೃತ್ತಿಜೀವನದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆರೋಗ್ಯ ಸಮಸ್ಯೆಗಳು ಬಗೆಹರಿಯುತ್ತವೆ. ಮಾನಸಿಕ ಒತ್ತಡ ಕಡಿಮೆಯಾಗುವುದು.
ಪರಿಹಾರ: ಸೂರ್ಯನಿಗೆ ಕುಂಕುಮ ಮತ್ತು ಅಕ್ಕಿ ಬೆರೆಸಿದ ನೀರನ್ನು ಅರ್ಪಿಸಿ.
ಮಿಥುನ ರಾಶಿ: ಸೂರ್ಯ ಮತ್ತು ಬುಧ ಗ್ರಹಗಳ ಸಂಚಾರವು ಮಿಥುನ ರಾಶಿಯವರ ಬಾಕಿ ಹಣ ಮತ್ತೆ ಕೈ ಸೇರುವಂತೆ ಮಾಡುತ್ತದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸ ಕೈಗೂಡುವುದು. ಕುಟುಂಬದಲ್ಲಿ ಪ್ರೀತಿ ಮತ್ತು ಸಂತೋಷದ ವಾತಾವರಣವಿರುತ್ತದೆ. ಇದು ವೃತ್ತಿ ಮತ್ತು ವ್ಯವಹಾರಕ್ಕೂ ಒಳ್ಳೆಯ ಸಮಯ.
ಪರಿಹಾರ: ಸೂರ್ಯ ಮಂತ್ರಗಳನ್ನು ಪಠಿಸಿ.
ತುಲಾ ರಾಶಿ: ತುಲಾ ರಾಶಿಯ ಅಧಿಪತಿ ಶುಕ್ರ. ಹಾಗಾಗಿ ಈ ರಾಶಿಯವರಿಗೆ ಸೂರ್ಯ ಮತ್ತು ಬುಧ ಗ್ರಹದ ಸಂಚಾರವು ಹೆಚ್ಚಿನ ಲಾಭವನ್ನು ನೀಡುತ್ತದೆ. ವೃತ್ತಿಜೀವನದಲ್ಲಿ ಗಮನಾರ್ಹ ಯಶಸ್ಸು ಸಿಗುವ ಸಾಧ್ಯತೆ ಇದೆ. ಉದ್ಯಮಿಗಳು ಈ ಹೊತ್ತಿನಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರುವುದು. ಮದುವೆ ನಿಶ್ಚಯವಾಗುವ ಸಾಧ್ಯತೆ ಕೂಡಾ ಹೆಚ್ಚಿದೆ. ಜೀವನದಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗುವುದು.
ಪರಿಹಾರ: ಸೂರ್ಯನಿಗೆ ನೀರನ್ನು ಅರ್ಪಿಸಿ .
ಧನು ರಾಶಿ: ಧನು ರಾಶಿಯವರಿಗೆ ಸೂರ್ಯ ಮತ್ತು ಬುಧ ಗ್ರಹದ ಸಂಚಾರವು ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳನ್ನು ತರುತ್ತದೆ. ನೀವು ಇಲ್ಲಿಯವರೆಗೆ ಕಾಯುತ್ತಿದ್ದ ಪ್ರಗತಿ, ಯಶಸ್ಸು ಈ ಅವಧಿಯಲ್ಲಿ ಪ್ರಾಪ್ತಿಯಾಗುವುದು. ಹೊಸ ಉದ್ಯಮವನ್ನು ಪ್ರಾರಂಭಿಸಲು ಇದು ಒಳ್ಳೆಯ ಸಮಯ. ಸ್ನೇಹಿತರು ಮತ್ತು ಸಂಬಂಧಿಕರಿಂದ ನಿಮಗೆ ಬೆಂಬಲ ಸಿಗುತ್ತದೆ.
ಪರಿಹಾರ: ಪ್ರತಿದಿನ ಬೆಳಿಗ್ಗೆ ಸ್ನಾನದ ನಂತರ ನಿಮ್ಮ ಹಣೆಗೆ ಕೆಂಪು ಚಂದನದ ತಿಲಕವನ್ನು ಹಚ್ಚಿಕೊಳ್ಳಿ.
ಮೀನ ರಾಶಿ: ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಬಾಕಿ ಇರುವ ಕೆಲಸಗಳನ್ನು ವೇಗವಾಗಿ ಪೂರ್ಣಗೊಳ್ಳುವುದು. ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ. ನೀವು ಬಯಸಿದ ಅಥವಾ ನಿಮ್ಮ ಮನಸ್ಸಿನ ಇಚ್ಛೆಯ ವೃತ್ತಿ ಒಲಿದು ಬರುವುದು. ಸಂಪತ್ತು ಮತ್ತು ಆಸ್ತಿಯಿಂದ ಲಾಭ ಪಡೆಯಬಹುದು. ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಯೋಗವಿದೆ. ನಿಮ್ಮ ಕುಟುಂಬದ ಹಿರಿಯರ ಆರೋಗ್ಯ ಸುಧಾರಿಸುತ್ತದೆ.
ಪರಿಹಾರ: ಪ್ರತಿದಿನ ಬೆಳಿಗ್ಗೆ ಸೂರ್ಯ ದೇವರ ಮಂತ್ರವನ್ನು ಪಠಿಸುತ್ತಾ ಸೂರ್ಯನಿಗೆ ನೀರನ್ನು ಅರ್ಪಿಸಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications