ಅಮೇರಿಕನ್ನಡಿಗರಿಗೆ ನಾಟಕದ ಮೇಷ್ಟ್ರಾದ ನಾಗಾಭರಣ
ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನ ನೀಡಿರುವ ನಿರ್ದೇಶಕ ಟಿ.ಎಸ್.ನಾಗಾಭರಣ ಈಗ ಅಮೇರಿಕದಲ್ಲಿ ಪ್ರಪ್ರಥಮ ಬಾರಿಗೆ ನಾಟಕಗಳನ್ನ ನಿರ್ದೇಶಿಸಲು ಸಜ್ಜಾಗಿದ್ದಾರೆ.
ಮೇ 29 ರಿಂದ 31 ರವರೆಗೂ ನಡೆಯಲಿರುವ ಬಹುಭಾಷಾ ನಾಟಕೋತ್ಸವಕ್ಕೆ ಟಿ.ಎಸ್.ನಾಗಾಭರಣ ನಿರ್ದೇಶನದ ಹೊಣೆ ಹೊತ್ತಿದ್ದರೆ ಸಂಗೀತ ಮತ್ತು ಉಡುಗೆ-ತೊಡುಗೆಯ ಜವಾಬ್ದಾರಿ ಅವರ ಪತ್ನಿ ನಾಗಿಣಿಭರಣರದ್ದು. [ಕ್ಯಾಲಿಫೋರ್ನಿಯಾ ನಾಟಕೋತ್ಸವದಲ್ಲಿ ಜಯಶ್ರೀ, ಭರಣ]

'ಅಲ್ಲಮ' ಚಿತ್ರದ ತಯಾರಿಯಲ್ಲಿ ತೊಡಗಿರುವ ಟಿ.ಎಸ್.ನಾಗಾಭರಣ, ನಾಟಕಾಸ್ತಕ ಅಮೇರಿಕ ಕನ್ನಡಿಗರ ಕೋರಿಕೆಗೆ ಸ್ಪಂದಿಸಿ ಬಹುಭಾಷಾ ನಾಟಕೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಮೇರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿನ ರಂಗಾಸಕ್ತ ಕನ್ನಡಿಗರು ಹುಟ್ಟು ಹಾಕಿರುವ 'ಬಣ್ಣದ ವೇಷ' ತಂಡವು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇದೆ.

ಈ ವರ್ಷ ಪ್ರಪ್ರಥಮ ಬಾರಿಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಹುಸೆ ನಗರದಲ್ಲಿ ಬಹುಭಾಷಾ ನಾಟಕೋತ್ಸವದ ತಯಾರಿಯಲ್ಲಿ ಶ್ರೀಮತಿ ಪದ್ಮ ಕಡೂರು ನೇತೃತ್ವದ 'ಬಣ್ಣದ ವೇಷ' ತಂಡ ನಿರತವಾಗಿದೆ.
ಧಾರವಾಡ ಆರ್ಯರವರ 'ಅಗಸ್ತ್ಯನಿಂದ ಐ.ಟಿ.ವರೆಗೆ' ಮೂಲಕೃತಿಯನ್ನು ಪರಿಷ್ಕರಿಸಿ ಎರಡೇ ವಾರಗಳ ಅತ್ಯಲ್ಪ ಅವಧಿಯಲ್ಲಿ ಅದಕ್ಕೆ ರಂಗರೂಪ ನೀಡುತ್ತಿದ್ದಾರೆ. 'ಮುದ್ದಣ ಟು ಮನೋರಂ' ಎಂಬ ಶೀರ್ಷಿಕೆಯೊಂದಿಗೆ ನಾಗಾಭರಣ ನಿರ್ದೇಶನದಲ್ಲಿ ರಂಗದ ಮೇಲೆ ಬರುತ್ತಿರುವ ಈ ನಾಟಕಕ್ಕೆ ಕವಿ ಮುದ್ದಣ, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಎಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ ರಾವ್ ಅವರ ಹಾಡುಗಳನ್ನ ಬಳಸಿಕೊಳ್ಳಲಾಗುತ್ತಿದೆ.

ಅಮೇರಿಕ ಕನ್ನಡಿಗರಿಗೆ ನಾಟಕದ ಒಳನೋಟಗಳನ್ನು ಹೇಳಿಕೊಡುವುದರಲ್ಲಿ ಸದ್ಯಕ್ಕೆ ಬಿಜಿಯಾಗಿರುವ ಟಿ.ಎಸ್.ನಾಗಾಭರಣರ ಅಮೇರಿಕದ ರಂಗಾನುಭವವನ್ನು ತಿಳಿಯಲು ಇನ್ನೊಂದಿಷ್ಟು ದಿನ ಕಾಯಬೇಕು. (ಫಿಲ್ಮಿಬೀಟ್ ಕನ್ನಡ)
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications