ಲಂಡನ್ನಿನಲ್ಲಿ ವಿದ್ಯಾಭೂಷಣರಿಂದ ಭಕ್ತಿ ಸಂಗೀತ ಸುಧೆ
ಲಂಡನ್, ಫೆಬ್ರವರಿ 18 : ದಾಸವರೇಣ್ಯ ಪುರಂದರದಾಸರ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡುವ ಕಂಚಿನ ಕಂಠದ ವಿದ್ಯಾಭೂಷಣ ಅವರು ಲಂಡನ್ ನಲ್ಲಿ ಫೆ.20ರಂದು ಮತ್ತು ಬರ್ಮಿಂಗ್ಹ್ಯಾಮ್ ನಲ್ಲಿ ಫೆ.21ರಂದು ಗಾನಸುಧೆಯನ್ನು ಹರಿಸಲಿದ್ದಾರೆ.
ಯುನೈಟೆಡ್ ಕಿಂಗಡಂನ ವೆಂಕಟ ಕೃಷ್ಣ ವೃಂದಾವನ ಈ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದು, ನಾದಸುಧೆಯನ್ನು ಹರಿಸಿದ ನಂತರ ಕೃಷ್ಣ ಪೂಜೆಯು ಜರುಗಲಿದೆ. ಸಂಗೀತಾಸಕ್ತರು ನೋಂದಾಯಿಸಿಕೊಳ್ಳಬೇಕಾಗಿ ಆಯೋಜಕರು ಕೋರಿದ್ದಾರೆ. [ಲಂಡನ್ನಿನ ಸ್ಲೌನಲ್ಲಿ ಮಧ್ವನವಮಿ, ಶ್ರೀಕೃಷ್ಣ ಗಾನಾಮೃತ]

ಲಂಡನ್ನಿನಲ್ಲಿ ಸಂಗೀತ ಕಾರ್ಯಕ್ರಮ ಶನಿವಾರ 5.30ರಿಂದ 8.30ರವರೆಗೆ ಹ್ಯಾರೋನ ಮ್ಯಾನ್ಸನ್ ಅವೆನ್ಯೂನಲ್ಲಿರುವ ಅಯ್ಯಪ್ಪನ್ ಕೋವಿಲ್ ಹಾಲ್ ನಲ್ಲಿ ನಡೆಯಲಿದೆ. ಬರ್ಮಿಂಗ್ಹ್ಯಾಮ್ ನಲ್ಲಿ ಭಾನುವಾರ ಮಧ್ಯಾಹ್ನ 2.30ರಿಂದ 5.30ರವರೆಗೆ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿರುವ ವೆಂಕಟೇಶ್ವರ/ಬಾಲಾಜಿ ದೇವಸ್ಥಾನದಲ್ಲಿ ಕಾರ್ಯಕ್ರಮ ಜರುಗಲಿದೆ.
ಈ ಎರಡೂ ದಿನಗಳ ಕಾರ್ಯಕ್ರಮಗಳಿಂದ ಸಂಗ್ರಹಿಸಲಾಗುವ ಹಣವನ್ನು ವೆಂಕಟ ಕೃಷ್ಣ ವೃಂದಾವನದ ಸಮಾಜಮುಖಿ ಚಟುವಟಿಕೆಗೆ ವಿನಿಯೋಗಿಸಲಾಗುವುದು. ವಯಸ್ಕರಿಗೆ ಟಿಕೆಟ್ ಬೆಲೆ 10 ಪೌಂಡ್ ಇದ್ದರೆ, ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶ ಉಚಿತ.












Click it and Unblock the Notifications