ನ್ಯೂಜೆರ್ಸಿ ಆದಿಚುಂಚನಗಿರಿ ಮಠದಲ್ಲಿ ಸಂಭ್ರಮದ ದೀಪಾವಳಿ!

By: ವರದಿ: ಕಟ್ಟೆ ಬಳಗ
Subscribe to Oneindia Kannada

ನ್ಯೂಜೆರ್ಸಿಯ ಸೊಮರ್ಸೆಟ್ ನಲ್ಲಿರುವ ಶ್ರೀ ಆದಿಚುಂಚನ ಗಿರಿ ಮಠದಲ್ಲಿ ಮಠಾಧೀಶ್ವರರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ, ಶ್ರೀ ಶ್ರೀಶೈಲನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ನೂರಕ್ಕೂ ಹೆಚ್ಚು ಕನ್ನಡ ಬಾಂಧವರು ಸೇರಿ ಅತ್ಯಂತ ಸಡಗರದಿಂದ ಮತ್ತು ಅದ್ದೂರಿಯಾಗಿ ದೀಪಾವಳಿಯನ್ನು ಆಚರಿಸಿದರು.

ಸಂಜೆ ಶ್ರೀ ಶ್ರೀಶೈಲನಾಥ ಸ್ವಾಮೀಜಿ ಯವರು ಗಣಪತಿ ಸ್ತುತಿ, ಹೋಮದೊಂದಿಗೆ ಪೂಜೆ ಪ್ರಾರಂಭಿಸಿದರು. ನಂತರ ಭಕ್ತಾದಿಗಳ ಸಂಕಲ್ಪದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಲಕ್ಷ್ಮಿ ಪೂಜೆ ಕೂಡ ಜೊತೆಜೊತೆಗೆ ನಡೆಸಲಾಯಿತು.

Deepavali celebrated at Adichunchanagiri math in New Jersey

ಲಲಿತಾ ಸಹಸ್ರ ನಾಮವನ್ನು ಸುಶ್ರಾವ್ಯವಾಗಿ ಹಾಡುತ್ತ ರೇಷ್ಮೆ ಸೀರೆಯುಟ್ಟ ಮುತ್ತೈದೆಯರು ಪೂಜೆಯಲ್ಲಿ ಪಾಲ್ಗೊಂಡು ದೀಪಾವಳಿ ಹಬ್ಬಕ್ಕೆ ಹೊಸ ಕಳೆಯನ್ನು ತಂದುಕೊಟ್ಟರು. ಎಲ್ಲರೂ ಒಕ್ಕೊರಲಿನಿಂದ ಹಾಡುತ್ತಿದ್ದಾಗ ಲಲಿತಾ ಸಹಸ್ರ ನಾಮವನ್ನು ಕೇಳುವುದೇ ಒಂದು ಆನಂದ.

Deepavali celebrated at Adichunchanagiri math in New Jersey

ನಂತರ ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಅತ್ಯಂತ ಸಡಗರದಿಂದ ವಿವಿಧವಾದ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸಿದರು. ದೀಪಾವಳಿಯೆಂದ ದೀಪಗಳ ಆವಳಿಯ ಜೊತೆ ಪಟಾಕಿಗಳ ಸದ್ದು ಇಲ್ಲದಿದ್ದರೆ ಹೇಗೆ? ಶ್ರೀಶೈಲನಾಥ ಸ್ವಾಮೀಜಿಗಳು ಕೂಡ ಎಲ್ಲರೊಂದಿಗೆ ಸೇರಿ ಪಟಾಕಿ ಸಿಡಿಸಿ ಆನಂದಿಸಿದರು.

Deepavali celebrated at Adichunchanagiri math in New Jersey

ನಂತರ 30ಕ್ಕೂ ಹೆಚ್ಚು ಬಗೆ ಬಗೆ ಖಾದ್ಯಗಳ ಭರ್ಜರಿ ಭೋಜನವನ್ನು ಏರ್ಪಡಿಸಲಾಗಿತ್ತು. ಭಕ್ತಾದಿಗಳೆಲ್ಲರೂ ಹಬ್ಬದೂಟವನ್ನು ಮನಸಾರೆ ಸವಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Deepavali festival celebrated at Adichunchanagiri math in New Jersey in the divine presence of Sri Srishailanath Swamiji. Hundreds of devotees participated in the event. The function concluded with sumptuous meals

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ