• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಟ್ಲಾಂಟದಲ್ಲಿ ಕರ್ನಾಟಕದ ಸರ್ವದಾಸರ ದಿನಾಚರಣೆ

By Shami
|

ಪ್ರಿಯ ರೇಖಾ ಪ್ರದೀಪ್,

ನಿಮ್ಮ ಮಿಂಚಂಚೆ ತಲುಪಿತು. ನೃಪತುಂಗ ಕನ್ನಡ ಕೂಟದ ಆಶ್ರಯದಲ್ಲಿ "ಕರ್ನಾಟಕದ ಸರ್ವದಾಸರ ದಿನಾಚರಣೆ"ಯನ್ನು ಸತತ ಐದನೇ ವರ್ಷ ಆಚರಿಸುತ್ತಿರುವುದು ತಿಳಿದು ಸಂತೋಷವಾಯಿತು. ಕಾರ್ಯಕ್ರಮದ ಮಾಹಿತಿ ಮತ್ತು ಕರೆಯೋಲೆಯನ್ನು ಚಿತ್ರದಲ್ಲೇ ಕೊಟ್ಟಿದ್ದೇನೆ. ಅಟ್ಲಾಂಟ ಕನ್ನಡಿಗರು ಇದನ್ನು ಕಂಡು ಮತ್ತಷ್ಟು ಉಲ್ಲಸಿತರಾಗಿ ಕೀರ್ತನೆ-ನೃತ್ಯಕ್ಕೆ ಒಂದು ದಿನ (ಅಕ್ಟೋಬರ್ 18) ಮುಡಿಪಾಗಿಡುವರೆಂಬ ಅಪೇಕ್ಷೆ ನನ್ನದು.

ಯುದ್ಧವನ್ನು ಬಿಟ್ಟ ತಿಮ್ಮಪ್ಪನಾಯಕ ದೇವರನಾಮಗಳನ್ನು ಬರೆಯುತ್ತ ಪರಮಾತ್ಮನ ಧ್ಯಾನದಲ್ಲಿ ತಲ್ಲೀನರಾದ ಕನಕದಾಸರ "ದಾಸರ ಮುಂಡಿಗೆ" ನೆನಪಾಗುತ್ತಿದೆ.

ಪುಟ್ಟದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |

ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |

ಸುಡಗಾಡುದಾಸ ನಾನಲ್ಲ |ಕಷ್ಠದಾಸ ನಾನಲ್ಲ |

ಕೊಟ್ಟದಾಸ ನಾನಲ್ಲ |ಹೊಟ್ಟೆದಾಸ ನಾನಲ್ಲ |

ಇಟ್ಟಿಗೆ ದಾಸ ನಾನಲ್ಲ |ಶಿಷ್ಟದಾಸ ನಾನಲ್ಲ |

ನಿಷ್ಠದಾಸ ನಾನಲ್ಲ |ಭ್ರಷ್ಠದಾಸ ನಾನಲ್ಲ |

ಶ್ರೇಷ್ಠದಾಸ ನಾನಲ್ಲ |ವಿತ್ತದಾಸ ನಾನಲ್ಲ |

ಹುತ್ತದಾಸ ನಾನಲ್ಲ | ನಾನು ಈ ಷೋಡಶ ದಾಸರುಗಳ ದಾಸಾನು ದಾಸರ ದಾಸಿಯರ ಮನೆಯ ಮಂಕುದಾಸರ ಮನೆಯ ಶಂಕುದಾಸ ಬಾಡದಾದಿ ಕೇಶವ ||

ಪುರಂದರದಾಸರ ಹೆಸರು ಕಿವಿಗೆ ಬಿದ್ದಾಗ ನನಗೆ ತಕ್ಷಣ ನೆನಪಾಗುವ ಕೀರ್ತನೆ - ಲಂಬೋದರ ಲಕುಮಿಕರ. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುವವರಿಗೆ ಓನಾಮ. ಕೀರ್ತನೆಯ ಪೂರ್ಣ ಸಾಹಿತ್ಯ, ರಾಗ, ತಾಳ ವಿವರಗಳನ್ನು ಕೆ ವಿ ರಾಮಪ್ರಸಾದ್ (ಹಂಸಾನಂದಿ) ಅವರಿಂದ ಕೇಳಿ ತರಸಿಕೊಂಡಿದ್ದೇನೆ. ದಯವಿಟ್ಟು ನೋಡಿ. ವಂದನೆಗಳು.

English summary
Atlanta Kannada Koota (EST) hosts, Day dedicated to all saint composers of Karnataka. Registrations now open.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X