• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದಲ್ಲಿ ಮೊದಲ ಹೃದಯ ಕಸಿ ಮಾಡಿದ ಕನ್ನಡಿಗ ಇನ್ನಿಲ್ಲ

By ಭಾಗ್ಯಶ್ರೀ ರೈ
|

1966ರಲ್ಲಿ ಅಮೆರಿಕಾದ ಮೊದಲ ಯಶಸ್ವಿ ಹೃದಯ ಜೋಡಣೆ ಶಸ್ತ್ರಚಿಕಿತ್ಸೆ ನಡೆಸಿದ ಅಮೆರಿಕನ್ನಡಿಗ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಬೆಂಗಳೂರು ಮೂಲದ ವೈದ್ಯ ಡಾ|| ಬಾನಡ್ ವಿಶ್ವನಾಥ್ ಅವರು ಇತ್ತೀಚೆಗೆ ತಮ್ಮ 77ನೇ ವಯಸ್ಸಿನಲ್ಲಿ ನ್ಯೂಯಾರ್ಕ್‌ನಲ್ಲಿ ಮೃತರಾದರು.

ನ್ಯೂಯಾರ್ಕ್‌ನಲ್ಲಿರುವ ಕನ್ನಡ ಕೂಟ ಮತ್ತು ಬಸವ ಇಂಟರ್‌ನ್ಯಾಷನಲ್ ಸಂಸ್ಥೆಗಳ ಸಂಸ್ಥಾಪಕರಲ್ಲಿ ಡಾ|| ವಿಶ್ವನಾಥ್ ಪ್ರಮುಖರಾಗಿದ್ದರು. ಅಮೆರಿಕದಲ್ಲಿ ಮೊದಲ ಭಾರತೀಯ ಟಿವಿ ಕಾರ್ಯಕ್ರಮ, ಮೊದಲ ಏಷ್ಯನ್ ಎಫ್ಎಂ ರೇಡಿಯೋ ಆರಂಭಿಸಿದ ಡಾ. ವಿಶ್ವನಾಥ್ ಅಶಕ್ತ ವರ್ಗಗಳ ಜನರ ಅಭ್ಯುದಯಕ್ಕಾಗಿ ಅಪಾರವಾಗಿ ಶ್ರಮಿಸಿದ್ದರು. ವಿಶ್ವನಾಥ್ ರವರು ಪತ್ನಿ, ಪುತ್ರರಾದ ದೀಪಕ್, ದಿಲೀಪ್ ಮತ್ತು ದೇವ್, ಸ್ನೇಹಿತರು ಮತ್ತು ದುಃಖತಪ್ತ ಅಮೆರಿಕಾದ ಭಾರತೀಯ ಸಮುದಾಯವನ್ನು ಅಗಲಿದ್ದಾರೆ.

ಮೂಲತಃ ಬೆಂಗಳೂರಿನವರಾದ ವಿಶ್ವನಾಥ್ ಅವರ ತಂದೆ ನಂದೀಶ್ವರ ಅವರು ಅಂದಿನ ಮೈಸೂರು ಮಹಾರಾಜರ ಸರ್ಕಾರದಲ್ಲಿ ಅಮಲ್ದಾರರಾಗಿ ಸೇವೆ ಸಲ್ಲಿಸಿದ್ದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿದ ವಿಶ್ವನಾಥ್ ರವರು ಮೊದಲ ರ‍್ಯಾಂಕ್‌ ಗಳಿಸಿ 1960ರಲ್ಲಿ ಎಂ.ಬಿ.ಬಿ.ಎಸ್. ಪದವಿ ಗಳಿಸಿದರು. ನಂತರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದ ಅವರು ವಿಶ್ವವಿಖ್ಯಾತ ಹೃದಯತಜ್ಞ ಡಾ|| ಡೆಂಟನ್ ಕೂಲಿ ಅವರ ಮಾರ್ಗದರ್ಶನದಲ್ಲಿ ಹೊಸ್ಟನ್ (ಟೆಕ್ಸಾಸ್) ನಗರದಲ್ಲಿ ಅಧ್ಯಯನ ಮಾಡಿದರು.

ಡಾ|| ಕೂಲಿ ರವರು 1966ರಲ್ಲಿ ಅಮೆರಿಕಾದ ಮೊದಲ ಯಶಸ್ವಿ ಹೃದಯ ಜೋಡಣೆ ಶಸ್ತ್ರಚಿಕಿತ್ಸೆ ನಡೆಸಿದಾಗ ಅವರ ತಂಡದಲ್ಲಿ ಡಾ|| ವಿಶ್ವನಾಥ್ ತಜ್ಞರಾಗಿ ಸೇರ್ಪಡೆಯಾಗಿದ್ದರು. ಇದಾದನಂತರ ಅಮೆರಿಕಾದ ಹೆಸರಾಂತ ವೈದ್ಯರ ಪಟ್ಟಿಯಲ್ಲಿ ಡಾ|| ವಿಶ್ವನಾಥರ ಸ್ಥಾನ ಶಾಶ್ವತವಾಯಿತು. [ಬೆಂಗಳೂರಿನಲ್ಲಿ ಮಿಡಿದ ಮತ್ತೊಂದು ಜೀವಂತ ಹೃದಯ]

1960-70 ದಶಕಗಳಲ್ಲಿ ಬೆಂಗಳೂರಿನ ಜನಪ್ರಿಯ ನಾಯಕರಾಗಿದ್ದ ಮಾಜಿ ಮೇಯರ್ ಕೆ.ಎಂ. ನಂಜಪ್ಪನವರ ಹಿರಿಯ ಪುತ್ರಿ ಸತ್ಯವತಿಯವರನ್ನು ವಿಶ್ವನಾಥ್ ಮದುವೆ ಮಾಡಿಕೊಂಡರು. ಮದುವೆಯಾದ ನಂತರ ಡಾ. ವಿಶ್ವನಾಥ್ ದಂಪತಿಗಳು ನ್ಯೂಯಾರ್ಕ್‌ನಲ್ಲಿಯೇ ನೆಲೆಗೊಂಡರು. [ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ]

ಹೃದಯವಂತ ದಂಪತಿಗಳ ಹೃದಯದಲ್ಲೂ ಕನ್ನಡ : ತಾಯಿನಾಡಿನಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ಡಾ|| ವಿಶ್ವನಾಥ್ ದಂಪತಿಗಳ ಹೃದಯದಲ್ಲಿ ಕನ್ನಡ ಮತ್ತು ಭಾರತೀಯ ಸಂಸ್ಕೃತಿ ಜಾಗೃತವಾಗಿತ್ತು. ಮನಸ್ಸು ತಾಯಿ ಸಂಸ್ಕೃತಿಗಾಗಿ ತವಕಿಸುತ್ತಿತ್ತು. ಸೃಜನಶೀಲರಾದ ವಿಶ್ವನಾಥ್ ತಾವು ಏಕೆ ಅಮೆರಿಕದಲ್ಲಿರುವ ಕನ್ನಡಿಗ ಮತ್ತು ಭಾರತೀಯರೊಂದಿಗೆ ಸಂಪರ್ಕ ಸಾಧಿಸಿ ಸಾಂಸ್ಕೃತಿಕವಾಗಿ ಕ್ರೀಯಾಶೀಲರಾಗಬಾರದೆಂದು ಆಲೋಚಿಸಿದರು.

ಅದರ ಫಲಿತಾಂಶವೇ ಅಮೆರಿಕಾದ ಪ್ರಪ್ರಥಮ ಭಾರತೀಯ ಟಿವಿ ಕಾರ್ಯಕ್ರಮ "ವಿಷನ್ ಆಫ್ ಏಷಿಯಾ" ಆರಂಭವಾದದ್ದು. ಪ್ರತಿ ಭಾನುವಾರ ಎರಡು ಗಂಟೆಗಳ ಈ ಟಿವಿ ಕಾರ್ಯಕ್ರಮವನ್ನು ವಿಶ್ವನಾಥ್ ದಂಪತಿಗಳು ಪ್ರಸಾರ ಮಾಡಲು ಪ್ರಾರಂಭಿಸಿದರು. 1976ರಲ್ಲಿ ಹೀಗೆ ಪ್ರಾರಂಭವಾದ "ವಿಷನ್ ಆಫ್ ಏಷಿಯಾ" ಸೂಪರ್ ಹಿಟ್ಟಾಗಿ ಯಾವುದೇ ಅಡೆ ತಡೆ ಇಲ್ಲದೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. [ಹೃದಯದ ಆರೋಗ್ಯಕ್ಕೆ ಅಕ್ಕಪಕ್ಕದವರನ್ನು ಪ್ರೀತಿಸಿ]

ಈ ಕಾರ್ಯಕ್ರಮದ ಯಶಸ್ಸಿನಿಂದ ಉತ್ತೇಜಿತರಾದ ಡಾ|| ವಿಶ್ವನಾಥ್ ಮೊದಲ ಭಾರತೀಯ 24/7 ಅಂತಾರಾಷ್ಟ್ರೀಯ ಟಿವಿ ಪ್ರಸಾರವನ್ನು 1986ರಲ್ಲಿ ಪ್ರಾರಂಭಿಸಿದರು. ಇದಾದ ನಂತರ 2002ರಲ್ಲಿ ಅಮೆರಿಕಾದ ಮೊದಲ ಏಷಿಯನ್ ಎಫ್.ಎಂ. ರೇಡಿಯೋ ಪ್ರಸಾರವನ್ನು ಆರಂಭಿಸಿದರು. ಈ ಮೂರು ಸಂಸ್ಥೆಗಳು ಅದ್ಭುತ ಯಶಸ್ಸು ಗಳಿಸಿ ಅಮೆರಿಕಾದ ಭಾರತೀಯ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದೆ.

ಪ್ರಶಸ್ತಿ : ಡಾ|| ವಿಶ್ವನಾಥರ ಕೊಡುಗೆಯನ್ನು ಪರಿಗಣಿಸಿದ ಸಂಘ ಸಂಸ್ಥೆಗಳು ಮತ್ತು ಜನನಾಯಕರು ಹಲವಾರು ಭಾರಿ ಅವರಿಗೆ ಸನ್ಮಾನ ಮಾಡಿದ್ದಾರೆ. 1993ರಲ್ಲಿ ಭಾರತೀಯ ವಿದ್ಯಾಭವನ ಪ್ರಶಸ್ತಿ. 2001ರಲ್ಲಿ ನ್ಯಾಷನಲ್ ಸಿಟಿಜನ್ಸ್ ಓವರ್‌ಸೀಸ್ ಪ್ರಶಸ್ತಿ. 2001ರಲ್ಲಿ ಮಾಜಿ ಪ್ರಧಾನ ಮಂತ್ರಿ ಪಿ.ವಿ. ನರಸಿಂಹ ರಾಯರಿಂದ ಪ್ರಧಾನ. 2010ರಲ್ಲಿ ಜೀವಮಾನದ ಸಾಧನೆಗಾಗಿ ಅಕ್ಕ (AKKA) ಪ್ರಶಸ್ತಿ.

ಡಾ|| ವಿಶ್ವನಾಥ್ ಅವರು ಸ್ನೇಹಶೀಲ ಸಹೃದಯಿ ವ್ಯಕ್ತಿಯಾಗಿದ್ದರು. ಸಮಾಜದ ಅಶಕ್ತ ವರ್ಗಗಳ ಜನರ ಮೇಲೆ ಅನುಕಂಪವಿತ್ತು. ಅವರಿಗೆ ನೆರವು ನೀಡಲು ಮತ್ತು ಭಾರತದಲ್ಲಿ ಪರಿಹಾರ ಕಾರ್ಯಗಳಿಗೆ ಡಾ|| ವಿಶ್ವನಾಥ್ ಹಣಕಾಸು ಒದಗಿಸಿದ್ದಾರೆ. ಅಮೆರಿಕಾಗೆ ಭೇಟಿ ನೀಡುತ್ತಿದ್ದ ಭಾರತೀಯರು ತೊಂದರೆಗೀಡಾದರೆ ಡಾ|| ವಿಶ್ವನಾಥ್ ಅವರ ನೆರವಿಗೆ ಧಾವಿಸುತ್ತಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dr. Banad Vishwanath (77), popular heart surgeon originally from Bengaluru, who did first heart transplantation in America is no more. He has many firsts to his name. He is the first person to start Indian TV program, first to start FM radio in USA. May his soul rest in peace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more