ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ ವಾರ್ತೆಯನ್ನು ಕಣ್ಣಿಗೆ ಕಟ್ಟುವಂತೆ ತಂದಿಳಿಸಿದ್ದ 'ಹಮ್ ವೀ'

By ಜಯಶ್ರೀ ದೇಶಪಾಂಡೆ
|
Google Oneindia Kannada News

ಅದೇನೇ ಇರಲಿ ಇರಾಕಿನ ಘೋರ ಬಿಸಿಲಿನಲ್ಲಿ , ಕೆಂಡದಂತೆ ಸುಡುವ ಮರಳಿನಲ್ಲಿ... ದಾಹ ಪ್ರಾಣವನ್ನೇ ತೆಗೆದು ಬಿಡುವಷ್ಟು ಕ್ರೂರವೆನಿಸುವ ಸಮಯ, ಸಂದರ್ಭಗಳಲ್ಲಿ ಅಮೆರಿಕದ ಸೈನಿಕರನ್ನು, ಪತ್ರಕರ್ತರನ್ನು ಹೊತ್ತು ಸಾವಿರಾರು ಮೈಲಿ ಉದ್ದಗಲಕ್ಕೂ ಏರಿಳಿದು ಚಲಿಸಿ ಕ್ಷಣಕ್ಷಣದ ಯುದ್ಧ ವಾರ್ತೆಯನ್ನು ಹಗಲಿರುಳೂ ನಮ್ಮ ನಿಮ್ಮೆಲ್ಲರ ಕಣ್ಣಿಗೆ ಕಟ್ಟುವಂತೆ ಮೊಟ್ಟ ಮೊದಲು ತಂದಿಳಿಸಿದ್ದೇ ಈ ಹಮ್ ವೀ !

ಪ್ರಪಂಚವನ್ನೇ ತಲೆ ಮೇಲೆ ಹೊತ್ತಂತೆ 'ಎಲ್ಲಿ, ಯಾವಾಗ, ಹೇಗೆ...ಯಾರು, ಏನು' ರೀತ್ಯಾ ದಿನದ 24ಗಂಟೆ ಮೂಲೆ ಮೂಲೆಯ ಸಮಾಚಾರ ಬಿತ್ತರಿಸುವ ಸಿಎನ್ಎನ್, 1990- 1991ರಲ್ಲಿ ಅಮೆರಿಕ ಇರಾಕಿನ ಮೇಲೆ ಏರಿ, ಮಾಡಿದ ಯುದ್ಧವನ್ನು ನಡೆಯುತ್ತಿದ್ದ ಹಾಗೆ , ಅದೇ ಕ್ಷಣದಲ್ಲಿ 'ಲೈವ್ ಟೆಲಿಕಾಸ್ಟ್ ' ಮಾಡಲು ಸಾಧ್ಯವಾಗಿದ್ದೇ ಅಂದಿನ ದಿನಗಳ ದೊಡ್ಡ ವಿಸ್ಮಯಕರ ಸಾಧನೆ. ಅದಾಗಿದ್ದೇ ಈ ಹಮ್ ವೀ ವಾಹನದಿಂದಾಗಿ. ಹೀಗಿರುವ ಈ ವಾಹನದ ಹೆಸರಿನ ಅರ್ಥ 'ಹೈ ಮೊಬಿಲಿಟಿ ಮಲ್ಟಿ ಪರ್ಪಸ್ ವೀಲ್ಡ್ ವೆಹಿಕಲ್' ಅಂತ.

ಹಾಗೆ 2ನೇ ಮಹಾಯುದ್ಧಾನಂತರದಿಂದಲೇ ಜೀಪುಗಳ ಅವತಾರ, ಬಳಕೆ, ಆವಿಷ್ಕಾರಗಳ ಹೊಸ ಪರ್ವ ಆರಂಭ ಆಗಿ ಮತ್ತೆ ಮುಂದಿನ ದಶಕಗಳಲ್ಲಿ ನಾನಾ ಬಗೆಯ ಯುದ್ಧ ವಾಹನಗಳು ಇಳಿದು ಬಂದಿದ್ದು ಹೌದು. ಆ ನಿಟ್ಟಿನಲ್ಲಿ ಹಮ್ ವೀ ಕಳೆದ ಎರಡುವರೆ ದಶಕಗಳಿಂದ ದುಡಿದಿದ್ದ ಸಂಗತಿಯನ್ನು ಅಲ್ಲಿದ್ದ ಫಲಕದಲ್ಲಿ ಓದಿದೆ. (ಶಾರುಖ್‌ರನ್ನು ಬಂಧಿಸಿದ್ದಕ್ಕಾಗಿ ಕ್ಷಮೆ ಕೇಳಿದ ಅಮೆರಿಕ)

ಹಾಗೆ ಜಗತ್ತಿನ ಹೆಚ್ಚಿನ ಎಲ್ಲಾ ದೇಶಗಳು ಇಂಥ ವಾಹನಗಳ ಒಡೆಯರೇ. ತಮ್ಮದೇ ಮಾಡೆಲ್, ತಯಾರಿಕೆಗಳಿದ್ದರೂ ಅಮೆರಿಕದಿಂದ ಖರೀದಿಸಿದ್ದು ಸಹ ಅಪಾರ ಸಂಖ್ಯೆಯಲ್ಲಿವೆ. ಕಾರಣಗಳು ಸಾವಿರ, ಶತ್ರುದಾಳಿ/ ಯುದ್ಧ, ಮೊದಲುಗೊಂಡು ಆಪತ್ತಿನ ಪ್ರಸಂಗಗಳಲ್ಲಿ ಜೀವ ಉಳಿಸುವ ಬಂಧುವಾಗಿ ನಿಂತ ಲೋಹ ಸೇನೆಯಿದು.

Article on Humvee Military light Truck war vehicle of USA

ಯುದ್ಧಾಸ್ತ್ರಗಳನ್ನು ಹೊತ್ತು ಸಾಗಿದ ಇವು ಆಂಬುಲೆನ್ಸ್, ಬಟ್ಟೆಬರೆ, ಇನ್ನು ಅನೇಕಾನೇಕ ಅಗತ್ಯವಸ್ತುಗಳನ್ನು ರಣರಂಗಕ್ಕೆ ಕೊಂಡೊಯ್ದಿವೆ. ಮಾಡಿದ ಕಾರ್ಯಗಳು ಅಸಂಖ್ಯ ಅಂತ ಸುದ್ದಿ. ಅವುಗಳಲ್ಲಿ ಇದೇ ಹಮ್ ವೀ ನಿರಂತರವಾಗಿ ಕಳಿಸಿದ ಹಗಲು ರಾತ್ರಿಯ ನೈಟ್ ವಿಷನ್ ರಣರಂಗ ಚಿತ್ರಗಳ (ಅಂದಿನ ದಿನಗಳಲ್ಲಿ ಹೊಚ್ಚ ಹೊಸ ಅಸ್ತ್ರವಾಗಿತ್ತಲ್ಲ ಈ ನೈಟ್ ವಿಷನ್?) ನಾವು ನೀನೆಲ್ಲ ಬೆರಗಾಗಿ ಕಣ್ಣರಳಿಸಿ ನೋಡಿದ ಯುದ್ಧದ ಲೈವ್ ದೃಶ್ಯಗಳು. ಮರೆಯಲಾದೀತೇ ಅವನ್ನೆಲ್ಲಾ?

ಧರ್ಮಸ್ಯ ಗ್ಲಾನಿರ್ಭವತಿಯಾದಾಗ ಕೃಷ್ಣ ಬಂದು ನಿಲ್ಲುತ್ತಾನೆನ್ನುವ ಭರವಸೆಯಲ್ಲಿ ಕಾದು ಕುಳಿತಿರುವವರು ನಾವು...'ತದಾತ್ಮಾನಾಮ್ ಸೃಜಾಮ್ಯಹಮ್' ಮಾಡಲಿರುವನೆಂಬ ಭರವಸೆ...ಆದರೆ ಈ ಕಾಯುವಿಕೆಗೆ ಯಾವ ಬಗೆಯ ಅಂತ್ಯವನ್ನು ಯೋಚಿಸಿದ್ದಾನೆಯೋ ಭಗವಂತ... (ನಾವಿಕೋತ್ಸವ ಲಾಂಛನ ಲಾಂಚ್ ಮಾಡಿದ ಪ್ರಣಯರಾಜ)

ಕಾಲಮಾನದೊಡನೆ ಹೊಂದಾಣಿಕೆಗಿಳಿಯದೆ , ನಿಸರ್ಗನಿಯಮ, ಮಾನವೀಯತೆ ಎರಡರ ರೇಖೆಗಳನ್ನೂ ಉಲ್ಲಂಘಿಸುತ್ತಾ ನಡೆದಿರುವ ಮಾನವ ತನ್ನ ಪಾಲಿಗೆ ತಾನೇ ಭಸ್ಮಾಸುರನಾಗತೊಡಗಿದ್ದಾನೆ.. ಭೂಮಿ ಹೊತ್ತಿರುವ ಏಳಕ್ಕೂ ಹೆಚ್ಚು ಬಿಲಿಯನ್ (7,443,085,) ಜೀವಗಳಿಗೆ ರಕ್ಷಣೆ ಬದುಕು ಇವೆರಡನ್ನೂ ನಿರಾಕರಿಸುತ್ತ ನಮ್ಮೊಂದಿಗೆ

ನಮ್ಮಲ್ಲೇ ಬದುಕಿರುವ ಹಲವರು ಇರುವ ವರೆಗೆ ಹಮ್ ವೀ ಮತ್ತು ಅದನ್ನು ಮೀರಿಸಬಲ್ಲ ಯುದ್ಧ ವಾರ್ತಾಪ್ರಸಾರ ರಥಗಳು ಬೇಕಾಗುತ್ತಲೇ ಇರುತ್ತವೆ!

English summary
Article on Humvee Military light Truck war vehicle of USA by Jayashree Deshpande - Part 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X