ಕೆಕೆಎನ್‌ಸಿ ಕನ್ನಡೋತ್ಸವದಲ್ಲಿ ಸುಧಾ ಹಾಸ್ಯ, ಛಾಯಾ ಸಂಗೀತ

ಕೆಕೆಎನ್‌ಸಿ ಆಯೋಜಿಸಿರುವ 'ಕನ್ನಡೋತ್ಸವ' ಸಾಂಸ್ಕೃತಿಕ ಸಂಜೆಯಲ್ಲಿ ಅಮೆರಿಕನ್ನಡಿಗರನ್ನು ಹಾಸ್ಯ ರಸದಿಂದ ಕಚಗುಳಿಯಿಡಲು 'ಮಾತಿನ ಮಲ್ಲಿ' ಸುಧಾ ಬರಗೂರು ಅವರು ಬೆಂಗಳೂರಿನಿಂದ ಆಗಮಿಸಿದ್ದರೆ, ಸಂಗೀತದ ಹೊನಲಲ್ಲಿ ತೇಲಾಡಿಸಲು 'ಕರ್ನಾಟಕದ ಕೋಗಿಲೆ' ಎಂದು ಖ್ಯಾತಿ ಪಡೆದಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ ಬಿ.ಆರ್. ಛಾಯಾ ಅವರು ಅಣಿಯಾಗಿದ್ದಾರೆ.
ಇವೆರಡು ಕಾರ್ಯಕ್ರಮಗಳ ಜೊತೆಗೆ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇನ್ನೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲು ತಯಾರಾಗಿವೆ. ಒಟ್ಟಿನಲ್ಲಿ ಕನ್ನಡೋತ್ಸವ ಕ್ಯಾಲಿಫೋರ್ನಿಯಾ ಮತ್ತು ಸುತ್ತಲಿನ ಕನ್ನಡಿಗರಿಗೆ ಹಾಸ್ಯ ಸಂಗೀತದ ರಸದೌತಣ ಬಡಿಸಲಿದೆ. ವೀಣಾ ಗೌಡ ಮತ್ತು ಸುದತ್ತ ಗೌತಮ್ ಅವರು ಕಾರ್ಯಕ್ರಮಗಳ ನಿರೂಪಣೆ ಮಾಡಲಿದ್ದಾರೆ.
ಕಾರ್ಯಕ್ರಮಗಳ ವಿವರ
* ನಾಡಗೀತೆಗಳು - ಸಂಧ್ಯಾ ಗಾಯತ್ರಿ ಅವರ ನಿರ್ದೇಶನದಲ್ಲಿ ಪುಟಾಣಿಗಳಿಂದ ವೃಂದಗಾನ.
* ಬೆಳದಿಂಗಳು ಹೊಳೆದಾಗ - ಶೇಷಪ್ರಸಾದ ಚಿಕ್ಕತ್ತೂರ್ ಮತ್ತು ಶಾಂತಲಾ ಬಂಡಿ ಅವರಿಂದ ಸಂಗೀತ ಮತ್ತು ಸಾಹಿತ್ಯ ರಂಜನೆ.
* ಹನಿ ಹನಿ ಇಬ್ಬನಿ - ಉಷಾ ಹೆಬ್ಬಾರ್ ಅವರ ನಿರ್ದೇಶನದಲ್ಲಿ ಮಕ್ಕಳಿಂದ ನರ್ತನ.
* ಕರುನಾಡ ಅಂದ - ನೈನಾ ಶಾಸ್ತ್ರೀ ಮತ್ತು ತಂಡದಿಂದ ನೃತ್ಯ ಕಾರ್ಯಕ್ರಮ.
* ನೃತ್ಯ ಸಂಭ್ರಮ - ಸ್ಮರಣ ಗ್ರೂಪ್‌ನಿಂದ ನರ್ತನ.
* ಮೀನಾಕ್ಷಿ ಮದುವೆ ಪ್ರಸಂಗ - ರುದ್ರಪ್ರಸಾದ್ ಎಸ್. ನಿರ್ದೇಶನದಲ್ಲಿ ಹಾಸ್ಯ ನಾಟಕ.
* ಸುಗಮ ಸಂಗೀತ - ಬಿ.ಆರ್. ಛಾಯಾ ಅವರಿಂದ ಸಂಗೀತ ರಂಜನೆ.
* ಹಾಸ್ಯ ಸಂಜೆ - ಸುಧಾ ಬರಗೂರು ಅವರಿಂದ ಹಾಸ್ಯ ಸೌರಭ.
* ತಿರುಗೇಟು - ವಲ್ಲೀಶ ಶಾಸ್ತ್ರೀ ಮತ್ತು ತಂಡದಿಂದ ನಾಟಕ.
ಕಾರ್ಯಕ್ರಮ ನಡೆಯುವ ಸ್ಥಳ : Spangenberg Theater, 780 Arastradero Road, Palo Alto, CA 94306
ಸಮಯ : ಮಧ್ಯಾಹ್ನ 3.30
ಟಿಕೆಟ್ : ಸದಸ್ಯರಿಗೆ 7 ಡಾಲರ್. ಸದಸ್ಯರಲ್ಲದವರಿಗೆ 15 ಡಾಲರ್. 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಪ್ರವೇಶ ಉಚಿತ. ಟಿಕೆಟ್ ಪಡೆಯುವಾಗ ನೂಕುನುಗ್ಗಲು ಉಂಟಾಗದಂತೆ ಆನ್‌ಲೈನ್ ಮುಖಾಂತರ ಟಿಕೆಟ್ ಕೊಳ್ಳಬಹುದು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications