ಲಂಡನ್ನಿನಲ್ಲೂ ವಿಶ್ವ ಕನ್ನಡ ಸಮ್ಮೇಳನ

ಕನ್ನಡ ನಾಡಿನ ಭಾಷೆ ಸಂಸ್ಕೃತಿಯನ್ನು ಯುರೋಪ್ ಮತ್ತು ಪ್ರಪಂಚದಾದ್ಯಂತ ಪ್ರಚಾರ ಮಾಡುವ , ಯುರೋಪ್ ದೇಶಗಳ ಮತ್ತು ಕರ್ನಾಟಕ ದೊಂದಿಗೆ ವ್ಯಾವಹಾರಿಕ,ರಾಜತಾಂತ್ರಿಕ ಸಂಬಂಧವನ್ನು ವೃದ್ಧಿಸುವ ಉದ್ದೇಶದಿಂದ ಈ ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011 ಅನ್ನು ಏರ್ಪಾಡು ಮಾಡಲಾಗಿದೆ.
ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011 ಅಂಗವಾಗಿ ಸಾಹಿತ್ಯ ಗೋಷ್ಠಿ, ಉದ್ಯಮ ಗೋಷ್ಠಿ, ಸಂಗೀತ ಗೋಷ್ಠಿ, ವೈದ್ಯಕೀಯ ಗೋಷ್ಠಿ, ಹಾಸ್ಯ ಗೋಷ್ಠಿ ಮತ್ತು ಹಲವಾರು ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಲಂಡನ್ನಿನ ಇತಿಹಾಸ ಪ್ರಸಿದ್ದ ಪ್ರವಾಸಿ ತಾಣಗಳನ್ನು,ವ್ಯವಹಾರಿಕ ಸಂಸ್ಥೆಗಳನ್ನು,ರಾಜಕೀಯ ವ್ಯವಸ್ಥೆಯನ್ನು ನಮ್ಮ ಕನ್ನಡಿಗರು ನೋಡಬೇಕು ಹಾಗೆಯೆ ಇಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರನ್ನು ನಮ್ಮ ರಾಜ್ಯದ ಏಳಿಗೆಗೆ ಉಪಯೋಗಿಸಿಕೊಳ್ಳಲು ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011 ಒಂದು ವಿಶೇಷವಾದ ವೇದಿಕೆಯಾಗಬೇಕು ಎನ್ನುವುದು ಅಪೇಕ್ಷೆ.
ಮುಂದಿನ ವರುಷಗಳಲ್ಲಿ ಯೂರೋಪಿನ ಫ್ರಾನ್ಸ್,ಜರ್ಮನಿ,ಡೆನ್ಮಾರ್ಕ್,ಬೆಲ್ಜಿಯಮ್ ,ಸ್ವಿಜರ್ ಲ್ಯಾಂಡ್ ರಾಜಧಾನಿಗಳಾದ ಪ್ಯಾರಿಸ್, ಫ್ರಾಂಕ್ ಫಾರ್ಟ್, ಬ್ರಸ್ಸೆಲ್ಸ್, ಡೆನ್ಮಾರ್ಕ್, ಜಿನಿವ ಮೊದಲಾದ ಕಡೆ ವಿಶ್ವ ಕನ್ನಡ ಸಮ್ಮೇಳನ-ಯುರೋಪ್ ಸಂಭ್ರಮವನ್ನು ಆಯೋಜಿಸುವ ಇರಾದೆಯಿದೆ.
ಹಲವಾರು ವರುಷಗಳಿಂದ ಕನ್ನಡ ಸಾಹಿತ್ಯ,ಸಂಸ್ಕೃತಿ,ಉದ್ಯೋಗ,ವಾಣಿಜ್ಯ,ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿ ದುಡಿದು ಅನುಭವವಿರುವ ಗಣ್ಯರ ಸಹಾಯದಿಂದ,ಸಂಗೀತ,ನಾಟ್ಯ,ಯಕ್ಷಗಾನ,ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವ ಗಣ್ಯರ ಸಹಕಾರದೊಂದಿಗೆ ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011 ಉತ್ಸಾಹಕ್ಕೆ ಸಂಗಮ ಸಂಸ್ಥೆಯು ಈ ಸಾಹಸಕ್ಕೆ ಕೈ ಹಾಕಿದೆ. ಇದೇ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನವು ಬಹುಸುಂದರವಾಗಿ ವೈಭವದಿಂದ ನಡೆಯಲಿ ಎಂದು ಹಾರೈಸುತ್ತದೆ.
ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011 ಬಗ್ಗೆ ಬರಲಿರುವ ದಿನಗಳಲ್ಲಿ ಹೆಚ್ಚಿನ ವಿವರಗಳನ್ನು ಪ್ರಕಟಿಸುವುದಾಗಿ ಕಾರ್ಯಕ್ರಮದ ಆಯೋಜಕರಾದ ಕುಮಾರ್ ಕುಂಟಿಕಾನಮಠ , ಸಂಪತ್ ಯಾದವಾಡ್ ಮತ್ತು ಶರತ್ ಕೋಲಾರ ರಾಮಚಂದ್ರ ಅಯ್ಯರ್ ರವರು ತಿಳಿಸಿದ್ದಾರೆ. ಈ ಸಮ್ಮೇಳನಕ್ಕೆ ಎಲ್ಲ ಸಹೃದಯ ಕನ್ನಡಿಗರ ಸಹಕಾರವನ್ನು,ಹಿರಿಯರ ಆಶೀರ್ವಾದವನ್ನು ಆಯೋಜಕರು ಕೇಳುತ್ತಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
1.Kumar Kuntikanamata Bpharm, MBA.
Director
ALC Ltd, UK
9 William court
68 Guildford road east
Farnborough
UK
00447791204551
00441252513646
[email protected]
www.kuntikanamata.com
2.Sampat Yadwad, BE
Director
ALC ltd,UK
16, Ardwick Court,
190 Sycamore Road
Farnborough GU14 6RH
UK
00447876240902
[email protected]
3. Sharath Kolar Ramachandra Iyer BE
Director
Anika Business Solutions Ltd.
30 Wroxham Avenue
Hemel Hampstead
Hertfordshire
HP39 HF
00447813339923
[email protected]












Click it and Unblock the Notifications