'ಅಕ್ಕ' ಬೆಂಗಳೂರು ಕಚೇರಿ ಉದ್ಘಾಟನೆ

ಕಚೇರಿ ಉದ್ಘಾಟನೆ ವೇಳೆ ಅಕ್ಕದ ನಿಕಟಪೂರ್ವ ಅಧ್ಯಕ್ಷ ರವಿ ಡೆಂಕಣಿಕೋಟೆ, ಟ್ರಸ್ಟಿ ಅಮರ್ ನಾಥ್ ಗೌಡ, ಯುನೈಟೆಡ್ ಲ್ಯಾಂಡ್ ಬ್ಯಾಂಕಿನ ಅಧ್ಯಕ್ಷ ಪ್ರದೀಪ್ ಕುಮಾರ್, ರಾಘವೇಂದ್ರ ರಾಜು ಮುಂತಾದ ಅಕ್ಕ ಸದಸ್ಯರು ಹಾಗೂ ಅಭಿಮಾನಿಗಳು ನೆರೆದಿದ್ದರು. ಕಚೇರಿಯ ವಿಳಾಸ : ಉತ್ತರ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ). S-415, ನಾಲಕ್ಕನೇ ಮಹಡಿ, ಮಣಿಪಾಲ್ ಸೆಂಟರ್, ಡಿಕನ್ ಸನ್ ರಸ್ತೆ, ಎಂಜಿ ರಸ್ತೆ ಪಕ್ಕ, ಬೆಂಗಳೂರು 560 042. ದೂರವಾಣಿ : 080-4212 7135, 080-4212 7137, 080-4149 0304.
ಸಂಸ್ಥೆಯ ಹತ್ತು ವರ್ಷಗಳ ಪ್ರಯಾಣದಲ್ಲಿ ಇಂದೊಂದು ಪ್ರಮುಖ ಮೈಲಿಗಲ್ಲು. ನಮ್ಮದೇ ಆದ ಒಂದು ಕಚೇರಿಯನ್ನು ಹೊಂದಬೇಕೆಂಬ ಬಹುದಿನಗಳ ಕನಸು ಇಂದು ನೆರವೇರಿತು ಎಂದು ಕಚೇರಿ ಉದ್ಘಾಟನೆ ನಂತರ ಮಾತನಾಡಿದ ಅಮರ್ ನಾಥ್ ಗೌಡ ಹೇಳಿದರು. ಅಮೆರಿಕಾದಲ್ಲಿ ಅಕ್ಕ ಕಾರ್ಯದರ್ಶಿಯ (ನಾಗಶಂಕರ್ ಚಂದ್ರಶೇಖರ್) ನಿವಾಸವೇ ಕಚೇರಿಯಾಗಿ ಕಾರ್ಯ ನಿರ್ವಹಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ, ಭಾರತದಲ್ಲಿ ಇಂಥ ಕಚೇರಿಯ ಅಗತ್ಯ ತೀವ್ರವಾಗಿ ಕಂಡುಬಂದುದರಿಂದ ಸ್ಥಳ ಪಡೆಯಲಾಯಿತು ಎಂದು ರವಿ ಡೆಂಕಣಿಕೋಟೆ ತಿಳಿಸಿದರು.
ಇದೇ ವೇಳೆ, ಅಕ್ಕದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡುವ ಔಪಚಾರಿಕ ಕಾರ್ಯಕ್ರಮವೂ ನೆರವೇರಿತು. ಹೂ ಗುಚ್ಛ ನೀಡುವುದರ ಮೂಲಕ ರವಿ ಡೆಂಕಣಿಕೋಟೆ ಅವರು ಅಕ್ಕದ ಹೊಣೆಯನ್ನು ದಯಾಶಂಕರ ಅಡಪ ಅವರಿಗೆ ವರ್ಗಾಯಿಸಿದರು. ಈ ಸಂದರ್ಭದಲ್ಲಿ ದಟ್ಸ್ ಕನ್ನಡದೊಂದಿಗೆ ಮಾತನಾಡಿದ ಅಕ್ಕ ಮುಂದಾಳುಗಳ ಕೆಲವು ಕನಸುಗಳು ಇಂತಿವೆ:
* ವಿಶ್ವ ಕನ್ನಡಿಗರ, ಮುಖ್ಯವಾಗಿ ಅಮೆರಿಕನ್ನಡಿಗರ ಬಾಂಧವ್ಯ ವೃದ್ಧಿಗೆ ಹೊಸ ಯತ್ನಗಳು.
* ಅಮೆರಿಕ ಕನ್ನಡ ಕೂಟಗಳ ನಡುವಣ ಪರಸ್ಪರ ಸಂಬಂಧಗಳಿಗೆ ಅಕ್ಕ ಹೊಸ ಭಾಷ್ಯ.
* ಕರ್ನಾಟಕ ಕನ್ನಡಿಗರೊಂದಿಗಿನ ಸಾಮರಸ್ಯ ಸುಧಾರಣೆಗೆ ಅಕ್ಕದ ನೂತನ ಸಂಕಲ್ಪ.
* ರಾಜ್ಯ ಸರಕಾರದಿಂದ ಯಾವ ಕಾರಣಕ್ಕೂ ಚಿಕ್ಕಾಸೂ ಧನಸಹಾಯ ಪಡೆಯಬಾರದೆಂಬ ಪ್ರತಿಜ್ಞೆ.
* ಮುಂದಿನ ಸಮ್ಮೇಳನ ಲಾಸ್ ವೆಗಾಸ್ ಅಥವಾ ಫಿಲಡೆಲ್ಫಿಯಾದಲ್ಲಿ ನಡೆಸುವ ಆಲೋಚನೆ.
* ಸದ್ಯದಲ್ಲೇ ಅಕ್ಕದ ಹೊಸ ಕಾರ್ಯಕ್ರಮಗಳ ಘೋಷಣೆ. [ಅಕ್ಕ ಸಂಸ್ಥೆ]
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications