ಅಕ್ಕ ಅಧ್ಯಕ್ಷರಾಗಿ ದಯಾಶಂಕರ ಅಡಪ ಆಯ್ಕೆ

* ಅಧ್ಯಕ್ಷ ದಯಾಶಂಕರ ಅಡಪ (ಮಿಷಿಗನ್)
* ಕಾರ್ಯದರ್ಶಿ ನಾಗಶಂಕರ ಚಂದ್ರಶೇಖರ (ಮೇರಿಲ್ಯಾಂಡ್)
* ಖಚಾಂಜಿ ಮಧುರಂಗಯ್ಯ (ನ್ಯೂ ಜೆರ್ಸಿ)
* ಉಪಾಧ್ಯಕ್ಷ ಬಸವರಾಜು ಶಿವಣ್ಣ (ನ್ಯೂ ಜೆರ್ಸಿ)
* ಉಪಾಧ್ಯಕ್ಷ ಶಿವಮೂರ್ತಿ ಕೀಲಾರ (ಇಲಿನಾಯ್)
* ಉಪಾಧ್ಯಕ್ಷ ಮಾದೇಶ್ ಬಸವರಾಜ್ (ವರ್ಜೀನಿಯ)
* ಜಂಟಿ ಕಾರ್ಯದರ್ಶಿ ಸಮಂತ್ ಲಕ್ಷ್ಣಣ್ (ಇಲಿನಾಯ್)
* ಜಂಟಿ ಕಾರ್ಯದರ್ಶಿ ರಮೇಶ್ ಮಂಜೇಗೌಡ (ನ್ಯೂ ಜೆರ್ಸಿ)
* ಜಂಟಿ ಖಚಾಂಜಿ ಸಂಜಯ್ ರಾವ್ (ವರ್ಜೀನಿಯ)
* ಜಂಟಿ ಖಚಾಂಜಿ ರವಿಶಂಕರ್ ಭೈರಪ್ಪ ಗೌಡ (ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯ)
"ಹೊಸ ಅಧ್ಯಕ್ಷ ದಯಾಶಂಕರ ಅವರು ಅಕ್ಕ ಸಂಸ್ಥೆಯ ಓರ್ವ ಶಿಸ್ತಿನ ಸಿಪಾಯಿ. ವಿವಿಧ ಹುದ್ದೆಗಳನ್ನು ಅಲಂಕರಿಸುವುದರ ಮೂಲಕ 2000 ಇಸವಿಯಿಂದ ಅವರು ಸಂಸ್ಥೆಗೆ ಬಹುವಿಧ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಯುವಕರೂ, ಕಾರ್ಯತತ್ಪರರೂ ಮತ್ತು ಅಕ್ಕದ ಧೇಯೋದ್ದೇಶಗಳಿಗೆ ಕಟಿಬದ್ಧರೂ ಆಗಿರುವ ಅಡಪ ಅವರಿಂದ ಇನ್ನೂ ಹೆಚ್ಚಿನದ್ದನ್ನು ಅಮೆರಿಕನ್ನಡಿಗರು ನಿರೀಕ್ಷಿಸಬಹುದಾಗಿದೆ" ಎಂದು ನಿರ್ಗಮಿಸುತ್ತಿರುವ ಅಧ್ಯಕ್ಷ ರವಿ ಡೆಂಕಣಿಕೋಟೆ ಹೇಳಿದ್ದಾರೆ.
"ದಯಾಶಂಕರ ಅವರಲ್ಲದೆ ಆಡಳಿಯ ಮಂಡಳಿಗೆ ಚುನಾಯಿತರಾಗಿರುವ ಇತರ ಪದಾಧಿಕಾರಿಗಳು ಕೂಡ ಸಂಸ್ಥೆಗೆ ತಮ್ಮ ತನು ಮನ ಮತ್ತು ಧನವನ್ನು ಧಾರೆ ಎರೆಯಲು ಶಕ್ತರಾಗಿರುವಂತಹ ಕನ್ನಡಿಗರಾಗಿದ್ದಾರೆ. ಎಲ್ಲ ಪದಾಧಿಕಾರಿಗಳೂ ತಮ್ಮ ತಮ್ಮ ರಾಜ್ಯದ ಕನ್ನಡ ಸಂಘಗಳಲ್ಲಿ ದುಡಿದ ಅಪಾರ ಅನುಭವದ ಹಿನ್ನೆಲೆ ಉಳ್ಳವರು. ಇವರೆಲ್ಲರ ಅನುಭವ ಮತ್ತು ದೂರದೃಷ್ಟಿ ನಾನಾ ಬಗೆಯ ಕನ್ನಡ ಕೆಲಸಗಳನ್ನು ಹಮ್ಮಿಕೊಳ್ಳುವ ಅಕ್ಕ ಸಂಸ್ಥೆಗೆ ನೆರವಾಗುವುದರಲ್ಲಿ ಸಂಶಯವಿಲ್ಲ" ಎಂದು ರವಿ ಡೆಂಕಣಿಕೋಟೆ ದಟ್ಸ್ ಕನ್ನಡಕ್ಕೆ ಭಾನುವಾರ ಬೆಂಗಳೂರಿನಲ್ಲಿ ತಿಳಿಸಿದರು. ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಮಗೆ ನೆರವಾದ ಕನ್ನಡ ಬಂಧುಗಳಿಗೆ ಅವರು ಇದೇ ಸಂದರ್ಭದಲ್ಲಿ ವಂದನೆಗಳನ್ನು ತಿಳಿಸಿದ್ದಾರೆ. [ಅಕ್ಕ]












Click it and Unblock the Notifications