ಜೈಲಿನಲ್ಲಿದ್ದೇ 24 ಪದವಿ ಗಳಿಸಿದ ಎನ್ಆರ್ಐ ವೈದ್ಯ

ಅಶ್ಲೀಲ ಸಾಹಿತ್ಯವನ್ನು ಭಾರತಕ್ಕೆ ಕಳಿಸಿದ್ದಕ್ಕಾಗಿ ಹತ್ತು ವರ್ಷ ಜೈಲುಶಿಕ್ಷೆಗೆ ಗುರಿಯಾದ ಅಮೆರಿಕದ ವೈದ್ಯ ಡಾ. ಭಾನು ಪಟೇಲ್ ಸಾಬರಮತಿ ಬಂದೀಖಾನೆಯಲ್ಲಿ ರಾಗಿ ಹಿಟ್ಟು ಬೀಸುತ್ತ ಕೂರಲಿಲ್ಲ. ಕಲಿತ ವಿದ್ಯೆ ಯಾವತ್ತೂ ನಷ್ಟವಾಗುವುದಿಲ್ಲ ಎಂಬುದನ್ನು ಅರಿತಿದ್ದ ಪಟೇಲ್ ಜೈಲಿನಲ್ಲಿಯೇ ಕುಳಿತು ಪುಸ್ತಕಗಳನ್ನೆಲ್ಲ ಅರೆದು ಕುಡಿದು 24 ಡಿಗ್ರಿಗಳನ್ನು ತನ್ನದಾಗಿಸಿಕೊಂಡ.
1998ರಲ್ಲಿ ಅಮೆರಿಕನ್ ಮೆಡಿಕಲ್ ಕೌನ್ಸಿಲ್ ಪರೀಕ್ಷೆ ಬರೆದು ಪಾಸಾಗಿ ವೈದ್ಯವೃತ್ತಿ ಕೈಗೊಂಡಿದ್ದ ಪಟೇಲನಿಗೆ ದುಡ್ಡನ್ನು ವೇಗವಾಗಿ ಗಳಿಸಬೇಕೆಂಬ ಹುಚ್ಚು ಹಿಡಿದು ಅಶ್ಲೀಲ ಸಾಹಿತ್ಯ ಬರೆದು ಭಾರತಕ್ಕೆ ರವಾನಿಸಲು ಪ್ರಾರಂಭಿಸಿದ. ಈ ಅಪರಾಧಕ್ಕಾಗಿ 2003ರಲ್ಲಿ ಅಹ್ಮದಾಬಾದ್ ಪೊಲೀಸರಿಂದ ಬಂಧಿತನಾದ.
ಕೈಯಲ್ಲಿ ಪಾಟಿ ಹಿಡಿದು ಫೋಟೋ ತೆಗೆಸಿಕೊಂಡ ನಂತರ, ಬಿಳಿ ಅಂಗಿ ಚಡ್ಡಿ ಧರಿಸಿದವ IGNOU ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾನಿಯಕ್ಕೆ ಅರ್ಜಿ ಗುಜರಾಯಿಸಲು ಪ್ರಾರಂಭಿಸಿದ. ಕಾಲಕ್ರಮೇಣ, ಎಂಬಿಎ, ಎಮ್.ಕಾಂನಲ್ಲಿ ಸ್ನಾತಕೋತ್ತರ ಪದವಿ, ಹಣಕಾಸು ನಿರ್ವಹಣೆ, ಕಂಪ್ಯೂಟಿಂಗ್, ಮಾನವ ಹಕ್ಕು, ಗಾಂಧಿ ಆದರ್ಶಗಳು, ಯೋಗ, ಆಯಾತ/ನಿರ್ಯಾತ, ಜನರಲ್ ಎಲೆಕ್ಟ್ರಾನಿಕ್ಸ್, ಉದ್ಯಮ, ಫುಡ್ ಮತ್ತು ನ್ಯೂಟ್ರಿಷನ್ ವಿಭಾಗಗಳಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ ಪಟೇಲ್.
ತನ್ನ ಈ ಶ್ರೇಯಕ್ಕೆ ಸ್ಫೂರ್ತಿ ಸಾಬರಮತಿ ಜೈಲಿನ ಮಹಾತ್ಮಾ ಗಾಂಧಿ ಬಂದೀಖಾನೆಯೇ ಎಂದು ಭಾನು ಪಟೇಲ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಲ್ಲಯವರೆಗೆ ಅವರು ಎಂಟು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಉಳಿದ ಜೀವನವನ್ನು ಗಾಂಧೀಜಿ ಆದರ್ಶವನ್ನು ಪಾಲಿಸುತ್ತ ಬದುಕಬೇಕೆಂದು ಬಯಸಿದ್ದಾರೆ. [ಜೈಲು]












Click it and Unblock the Notifications