ಒಂದಕ್ಕಿಂತ ಒಂದು ಕ್ರಿಯೇಟಿವ್ ಐಡಿಯಾ

ಯುಗಾದಿಯಂದು ಬೇವುಬೆಲ್ಲ ಮಾಡಲಿಕ್ಕೆ ಬೇವಿನಸೊಪ್ಪು ಸಿಗೋದಿಲ್ಲಾಂತ ಬೆಲ್ಲದ ಜತೆ ಮೆಂತ್ಯದ ಕಾಳುಗಳನ್ನು ಕುಟ್ಟಿ ಹದವಾದ ಸಿಹಿ-ಕಹಿ ಮಿಶ್ರಣ ಮಾಡ್ತಾರಂತೆ ಷಿಕಾಗೊದಲ್ಲಿರುವ ಅನುಪಮಾ ಮಂಗಳವೇಢೆ. ಅವರ ಲಾಜಿಕ್ ಏನೆಂದರೆ ಬೇವಾದರೇನು ಮೆಂತ್ಯವಾದರೇನು ರುಚಿಯಲ್ಲೆರಡೂ ಕಹಿಯಲ್ಲವೇನು? ಎಂದು. ಕ್ಯಾಲಿಫೋರ್ನಿಯಾದ ಮಧುಕಾಂತ್ ಬರೆಯುತ್ತಾರೆ, ನಮ್ಮಮ್ಮ ಇಲ್ಲಿಗೆ ಬಂದಿದ್ದಾಗ ಯುಗಾದಿಯಂದು ಬೆಲ್ಲದ ಜತೆ ಹಾಗಲಕಾಯಿ ರುಬ್ಬಿ ಮಿಶ್ರಣ ತಯಾರಿಸಿದ್ದರು. ಥೇಟ್ ಬೇವುಬೆಲ್ಲ ಥರನೇ ಇತ್ತು. ಬಹುಶಃ ಬೇವಿನಕಾಯಿಗೆ ಹಾಗಲಕಾಯಿ ಸಾಕ್ಷಿ ಅನ್ನೋ ಗಾದೆ ಹುಟ್ಟಿದ್ದೇ ಹಾಗೆ ಇರಬಹುದು. ಇರಲಿ, ಬೇವಿಗೆ ಸಬ್‌ಸ್ಟಿಟ್ಯೂಟ್ ಆಗಿ ಮೆಂತ್ಯ ಅಥವಾ ಹಾಗಲಕಾಯಿ ಬಳಸಬಹುದಂತ ಯಾರಿಗೇ ಆದ್ರೂ ಸುಲಭದಲ್ಲೇ ಹೊಳೆಯಬಹುದು. ಅಥವಾ ನ್ಯೂಜೆರ್ಸಿಯ ವಸಂತಾ ಶಶಿ ಅವರಂತೆ ಕರಿಬೇವಿನ ಎಲೆನಾದ್ರೂ ಉಪಯೋಗಿಸಬಹುದು. ಆದರೆ ಸ್ವಿಡ್ಜರ್ಲೆಂಡ್‌ನಲ್ಲಿರುವ ಅಶ್ವಿನಿ ಆಶ್ರಿತ್ ಅವರ ಬೇವುಬೆಲ್ಲ ರೆಸಿಪಿ ಕೇಳಿದ್ರೆ ನೀವು ದಿಗಿಲುಗೊಳ್ಳುವುದು ಖಂಡಿತ. ಸ್ಕಿನ್ ಟ್ರೀಟ್‌ಮೆಂಟ್‌ಗಂತ ಭಾರತದಿಂದ ತಂದಿದ್ದ ಆಯುರ್ವೇದಿಕ್ ನೀಮ್ ಟ್ಯಾಬ್ಲೆಟ್‌ಗಳನ್ನು ಬೆಲ್ಲದೊಟ್ಟಿಗೆ ಕುಟ್ಟಿ ಪುಡಿಮಾಡಿ ಇಲ್ಲಿ ನಾವು ಯುಗಾದಿಗೆ ಬೇವುಬೆಲ್ಲ ತಯಾರಿಸಿದ್ದೇವೆ ಅಂತಾರೆ ಅವರು! ಕುವೆಂಪು ಏನಾದ್ರೂ ಇದನ್ನೆಲ್ಲ ಕೇಳಿಸಿಕೊಂಡಿದ್ದಿದ್ರೆ ಎಲ್ಲಾದರೂ ಇರು ಎಂತಾದರೂ ಇರು ಹೇಗಾದ್ರೂ ಸರಿ ಬೇವುಬೆಲ್ಲ ಮಾಡಿ ತಿನ್ನುತ್ತಿರು ಅಂತಿದ್ರೋ ಏನೋ!
ಮೇರಿಲ್ಯಾಂಡ್‌ನ ಶೈಲಜಾ ಗುಂಡೂರಾವ್‌ಗೆ ಬೇವಿನಸೊಪ್ಪಿನ ಅಲಭ್ಯತೆಯ ಸಮಸ್ಯೆ ಇಲ್ಲ. ಅವರ ಸ್ನೇಹಿತೆಯೊಬ್ಬರು ಫ್ಲೋರಿಡಾದಲ್ಲಿದ್ದಾರಂತೆ, ಅವರು ಬೇವು ಮಾವು ತುಳಸಿ ಇತ್ಯಾದಿಗಳನ್ನು ತಮ್ಮ ಮನೆಹಿತ್ತಲಲ್ಲೇ ಬೆಳೆಸಿದ್ದು ಯುಗಾದಿಗೆ ಮೊದಲೇ ಖಾಸಾಗೆಳತಿಯರಿಗೆಲ್ಲ ಕೊರಿಯರ್‌ನಲ್ಲಿ ಬಟವಾಡೆ ಮಾಡ್ತಾರಂತೆ. ಮಿಕ್ಕಂತೆ ಶೈಲಜಾ ಅವರ ಸಬ್‌ಸ್ಟಿಟ್ಯೂಟ್ ಲಿಸ್ಟ್ ಚೆನ್ನಾಗಿದೆ. ಎಳ್ಳುಬೆಲ್ಲದ ಬದಲು ಎಳ್ಳಿನ ಚಿಕ್ಕಿ, ಸಕ್ಕರೆಅಚ್ಚಿನ ಬದಲು ಚಾಕಲೇಟ್, ಕಬ್ಬಿನ ಬದಲು ಬಾಳೆಹಣ್ಣು, ಬಾಗಿನದಲ್ಲಿ ಅರಸಿನಕುಂಕುಮ ಪ್ಯಾಕೆಟ್ ಬದಲು ಬಿಂದಿಸ್ಟಿಕ್ಕರ್ಸ್, ಕನ್ನಡಿ-ಬಾಚಣಿಗೆ ಬದಲು ನೈಲ್‌ಪಾಲಿಶ್! ನಾರ್ತ್ ಕೆರೊಲಿನಾದಲ್ಲಿರುವ ಸವಿತಾ ರವಿಶಂಕರ್ ಬರೀತಾರೆ, ತೋರಣಕ್ಕೆ ಮಾವಿನೆಲೆ ಬದಲಿಗೆ ಮಾಗ್ನೊಲಿಯಾ ಲೀವ್ಸ್, ಕಲಶಕ್ಕೆ ವೀಳ್ಯದೆಲೆ ಬದಲಿಗೆ ಮನಿಪ್ಲಾಂಟ್ ಲೀವ್ಸ್, ಪ್ಲಾಸ್ಟಿಕ್‌ನ ಬಾಳೆದಿಂಡು, ಪ್ಲಾಸ್ಟಿಕ್ ಮಲ್ಲಿಗೆಮಾಲೆಗೆ ಜಾಸ್ಮಿನ್ ಸೆಂಟ್ ಸಿಂಪಡಣೆ, ಸೀರೆ-ಖಣದ ಬದಲು ಬಟ್ಟೆಯ ಶಾಪಿಂಗ್‌ಬ್ಯಾಗ್... ಅಷ್ಟೇಅಲ್ಲ ಪುರೋಹಿತರ ಬದಲಿಗೆ ಲ್ಯಾಪ್‌ಟಾಪ್. ಪುರೋಹಿತರಾದರೆ ಅವಸರ ಮಾಡ್ತಾರೆ, ಅದಕ್ಕಿಂತ ಲ್ಯಾಪ್‌ಟಾಪ್ ಅಥವಾ ಸಿ.ಡಿ ಪ್ಲೇಯರ್ ಆದರೆ ಬೇಕೆಂದಾಗ ನಿಲ್ಲಿಸಿ, ನೈವೇದ್ಯ ಎಲ್ಲ ಅಣಿ ಮಾಡಿ ಆಮೇಲೆ ಮತ್ತೆ ಮುಂದುವರಿಸಬಹುದು. ಇವೆಲ್ಲ ನಮಗೀಗ ಎಷ್ಟು ರೂಢಿಯಾಗಿದೆಯೆಂದರೆ ಶಾಸ್ತ್ರದಲ್ಲಿರೋದೇ ಹೀಗೆ ಎಂದುಕೊಳ್ಳಬೇಕು!
ಫ್ಲೋರಿಡಾದಲ್ಲಿರುವ ರೇಖಾ ಹೆಗಡೆ ಚೌತಿ-ನವರಾತ್ರಿಗಳಲ್ಲಿ ಕರ್ಜಿಕಾಯಿ ಮಾಡಲು ಅಕ್ಕಿಯ ಅರಳು ಸಿಗದಿದ್ದಾಗ ಜೋಳ ತಂದು ಪಾಪ್‌ಕಾರ್ನ್ ಮಾಡಿ ಅದರ ಹುಡಿಯಿಂದ ಸಿಹಿತಿಂಡಿ ಮಾಡ್ತಾರಂತೆ. ರಂಗೋಲಿಹುಡಿ ಸಿಗದಿದ್ದರೆ ಫ್ಲೋರಿಡಾದ ಬೀಚುಗಳಲ್ಲಿ ಧಾರಾಳವಾಗಿ ಸಿಗುವ ನುಣುಪಾದ ಬಿಳಿ ಮರಳನ್ನು ತಂದು ರಂಗೋಲಿ ಹಾಕ್ತಾರಂತೆ! ಮೇರಿಲ್ಯಾಂಡ್‌ನ ಮಧುಶಾಲಿನಿ ಭಾಸ್ಕರ್ ಗೌರಿಹಬ್ಬದ ಬಾಗಿನಕ್ಕೆ ಬಿದಿರಿನ ಮೊರ ಸಿಗುವುದಿಲ್ಲಾಂತ ನಾಲ್ಕೈದು ತಿಂಗಳ ಮೊದಲು ಈಸ್ಟರ್ ಹಬ್ಬದ ವೇಳೆ ಇಲ್ಲಿನ ಅಂಗಡಿಗಳಲ್ಲಿ ಸಿಗುವ ಬಣ್ಣಬಣ್ಣದ ಬೆತ್ತದಬುಟ್ಟಿಗಳನ್ನು ತಂದಿಟ್ಟು ಅದರಲ್ಲಿ ಬಾಗಿನ ಕೊಡ್ತಾರಂತೆ. ಸಂಕ್ರಾಂತಿಗೆ ಎಳ್ಳಿನ ಜತೆಗೆ ಕುಸುರಿಕಾಳು ಇರಬೇಕೆಂದು ಬೇಕಿಂಗ್‌ನಲ್ಲಿ ಬಳಸುವ ಸಣ್ಣಸಣ್ಣ ಬಿಳಿಬಣ್ಣದ Hershey's kisses ಚಾಕಲೇಟ್ ಬಳಸ್ತಾರಂತೆ. ದೀಪಾವಳಿಯಂದು ನೀರುತುಂಬುವ ಹಬ್ಬದ ಸಂಭ್ರಮ ಹೆಚ್ಚಿಸಲಿಕ್ಕೆಂದು ಬೇಸ್‌ಮೆಂಟ್‌ನಲ್ಲಿರುವ ವಾಟರ್‌ಬಾಯ್ಲರ್‌ಗೇ ಅರಸಿನ-ಕುಂಕುಮ ಹಚ್ಚಿ ಪೂಜೆ ಮಾಡ್ತಾರಂತೆ!
ಮುಂದೆ ಓದಿ : ತೆಂಗಿನಕಾಯಿಗೆ ಸಬ್‌ಸ್ಟಿಟ್ಯೂಟ್ ಜುಟ್ಟು! »
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications