• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಂಗ್ಲನಾಡಿನ ಕನ್ನಡಿಗರಿಗೆ ಆಹ್ವಾನ ಪತ್ರ

By Shami
|
ಪ್ರಿಯ ಕನ್ನಡಿಗ ಬಂಧುಗಳೆ,

ಪ್ರಾಯಶಃ ನೀವೆಲ್ಲ ಬಹಳ ಕಾತುರದಿಂದ ನಮ್ಮ ಈ ವರ್ಷದ ಪ್ರಥಮ ಕಾರ್ಯಕ್ರಮದ ಬಗ್ಗೆ ಎದುರುನೋಡುತ್ತಿರಬಹುದು. ಹೌದು, ನಾವಂತೂ ನಿಮಗೆ ಖಂಡಿತ ನಿರಾಸೆಯುಂಟು ಮಾಡುವುದಿಲ್ಲ. ಈ ಬಾರಿ ನಾವು ಆಚರಿಸುತ್ತಿರುವ ವಸಂತೋತ್ಸವಕ್ಕೆ ನಿಮ್ಮನ್ನೆಲ್ಲ ದಟ್ಸ್ ಕನ್ನಡ ಅಂತರ್ಜಾಲ ತಾಣದ ಮೂಲಕ ಆಮಂತ್ರಿಸಲು ನಮಗೆ ಎಲ್ಲಿಲ್ಲದ ತವಕ, ಉಲ್ಲಾಸ. ಹೌದು, ಈ ಬಾರಿ ಯುಗಾದಿ ಎನ್ನುವ ಬದಲು ಋತುಗಳ ರಾಜ ವಸಂತೋತ್ಸವ ಎನ್ನೋಣ!

ವಸಂತೋತ್ಸವ, ದಿನಾಂಕ 15 ಮೇ 2010
ಸ್ಥಳ : ಕ್ಯಾನನ್ ಶಾಲೆ, ಹ್ಯಾರೊ, ಲಂಡನ್.

ಒಂದು ದಿನದ ಈ ವರ್ಷಾವರಿ ಹಬ್ಬದ ಕಾರ್ಯಕ್ರಮಗಳ ವಿಹಂಗಮ ನೋಟ ಈ ಕೆಳಗಿನಂತಿದೆ.

* ಕನ್ನಡದ ಹೆಸರಾಂತ ರಾಕ್ ಸಂಗೀತ ಕಲಾವಿದ ರಘು ದೀಕ್ಷಿತ ಅವರಿಂದ ಕನ್ನಡ ರಾಕ್ ಸಂಗೀತ.

ರಘು ದೀಕ್ಷಿತ ಪ್ರಖ್ಯಾತ ಸಂಗೀತ ಕಲಾವಿದರಲ್ಲದೆ ಸಂಗೀತ ನಿರ್ದೇಶಕರೂ ಕೂಡ. ಮೈಸೂರಿನ ಹುಡುಗ. ತಮ್ಮ ಭರ್ಜರಿ ಹಾಡುಗಳಿಂದ ನಿಮ್ಮ ಮನಸೂರೆಗೊಳ್ಳುವುದು ನಿಸ್ಸಂಶಯ. ಸೈಕೋ ಚಲನಚಿತ್ರದ ಹಾಡುಗಳು ಇನ್ನೂ ನಮ್ಮ ಕಿವಿಗಳಲ್ಲಿ ರಿಂಗಣ ನುಡಿಯುತ್ತಿರುವುದೇ ಇದಕ್ಕೆ ಒಂದು ನಿದರ್ಶನ. ನಿಮ್ಮನ್ನೆಲ್ಲ ಹುಚ್ಚೆದ್ದು ಕುಣಿಯುವಂತೆ ಮಾಡುವ, ನವ್ಯ ಪ್ರಕಾರದ ಅವರ ಸಂಗೀತವನ್ನು ಸವಿಯುವ ಸುವರ್ಣಾವಕಾಶವನ್ನು ನೀವು ಕಳೆದುಕೊಳ್ಳುವಿರಾ? ನೋ! ಈ ದಿನಾಂಕವನ್ನು (15 ಮೇ) ನಿಮ್ಮ ದಿನಚರಿ ಪುಸ್ತಕದಲ್ಲಿ ಗುರುತುಹಾಕಿ. ಆ ಶನಿವಾರವನ್ನು ಲಂಡನ್ ವಸಂತನಿಗಾಗಿ ಮೀಸಲಿಡಿ.

* ಕನ್ನಡ ಚಲನಚಿತ್ರದ ಹಾಸ್ಯಕಲಾವಿದ ಕಾಮೆಡಿ ಕಿಂಗ್ ಕೋಮಲ್.

ಕಳೆದ ಕೆಲವು ವರ್ಷಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಪ್ರಸಿದ್ಧಿ ಪಡೆದ ನಟ ಕೋಮಲ್ ಕುಮಾರ್. ತಮ್ಮ ಹಾಸ್ಯಭರಿತ ಸಂಭಾಷಣೆಗಳಿಂದ ನಮಗೆ ಕಚಗುಳಿ ನೀಡಿ ನಕ್ಕು ನಗಿಸುವುದೇ ಅವರ ಹವ್ಯಾಸ. ಕನ್ನಡ ಚಿತ್ರರಂಗದ ಚಿರಪರಿಚಿತ ಹಾಸ್ಯ ಹಾಗೂ ನಾಯಕ ನಟ ಜಗ್ಗೇಶ್ ಅವರ ಸಹೋದರರಾದ ಇವರು ತಮ್ಮ ಬಿಡುವಿಲ್ಲದ ದಿನಚರಿಗಳ ಮಧ್ಯೆಯೂ ನಮ್ಮ ಮನವಿಗೆ ಓಗೊಟ್ಟು ನಮ್ಮೊಂದಿಗೆ ಸಮಯ ಕಳೆಯಲು ಸಮ್ಮತಿಸಿದ್ದಾರೆ. ಇದು ಅವರು ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ ಕನ್ನಡಿಗರ ಬಗ್ಗೆ ಅವರಿಗಿರುವ ಕಾಳಜಿ, ಪ್ರೇಮವನ್ನು ತೋರಿಸುತ್ತದೆ. ಈ ಸಂದರ್ಭವನ್ನು ನೀವು ಕಳೆದುಕೊಳ್ಳಲಾರಿರೆಂದು ನಮ್ಮ ಭರವಸೆ.

* ಅಶ್ವಿನಿ ಪ್ರಭಾಕರ್ ಅವರ ಸುಮಧುರ ಗಾನಸುಧೆ ಈ ಬಾರಿಯ ಇನ್ನೊಂದು ಆಕರ್ಷಣೆ. ನಿಮ್ಮ ಮನ ಮೆಚ್ಚುವ ಹಾಡುಗಳಿಂದ ಮನ ಮುದಗೊಳಿಸಲಿದ್ದಾರೆ.

* ಸಿಲ್ಲಿ ಲಲ್ಲಿ ಧಾರಾವಾಹಿ ಖ್ಯಾತಿಯ ರೂಪ ಪ್ರಶಾಂತ್ ತಮ್ಮ ಆಕರ್ಷಕ ಶೈಲಿಯಲ್ಲಿ ಕಾರ್ಯಕ್ರಮ ನಿರೂಪಿಸಿ, ಎಂದಿನಂತೆ ನಿಮ್ಮನ್ನೆಲ್ಲ ವಿನೋದಕ್ರೀಡೆಗಳಲ್ಲಿ ತೊಡಗಿಸುವರು.

* ನಮ್ಮ ಸ್ಥಳೀಯ ಪ್ರತಿಭೆಗಳ ಕಲಾ ಪ್ರದರ್ಶನವನ್ನಂತೂ ಎಂದಿಗೂ ಮರೆಯುವಂತಿಲ್ಲ. ನೃತ್ಯ, ಸಂಗೀತ ಹಾಗೂ ಲಘು ಪ್ರಹಸನಗಳನ್ನು ನೀವು ತದೇಕಚಿತ್ತದಿಂದ ನೋಡುವಂತೆ ಪ್ರದರ್ಶಿಸಲಿದ್ದಾರೆ.

ಕಾರ್ಯಕ್ರಮ ನೋಂದಣಿ ಮತ್ತು ರುಚಿಕರ ಭೋಜನದೊಂದಿಗೆ ಕಾರ್ಯಕ್ರಗಳು ಮಧ್ಯಾನ್ಹ 12ಕ್ಕೆ ಪ್ರಾರಂಭವಾಗಿ ಸಂಜೆ 7 ಕ್ಕೆ ಮುಕ್ತಾಯಗೊಳ್ಳಲಿದೆ. ಕಾರ್ಯಕ್ರಮದ ವಿವರ, ಸ್ಥಳಕ್ಕೆ ಮಾರ್ಗದರ್ಶನ, ಸೌಲಭ್ಯಗಳು, ನೋಂದಣಿ ಹಾಗೂ ಸ್ವಯಂಸೇವಕ ಸಹಾಯಗಳ ಬಗ್ಗೆ ಸವಿಸ್ತಾರವಾಗಿ ಮುಂಬರುವ ದಿನಗಳಲ್ಲಿ ನಿಮಗೆಲ್ಲ ಬರೆಯುತ್ತೇವೆ. ಯಾವುದಕ್ಕೂ ನಮ್ಮ http://www.kannadigaruUK.com ಅಂತರ್ಜಾಲ ತಾಣಕ್ಕೆ ಆಗಾಗ್ಗೆ ಭೇಟಿ ಕೊಡುತ್ತಿರಿ. ಇದೇ ವೇಳೆ, ಕನ್ನಡಿಗರುಯುಕೆ ಸುದ್ದಿಗಳು ಎಂದಿನಂತೆ ದಟ್ಸ್ ಕನ್ನಡದಲ್ಲಿ ಅರಳುತ್ತಲೇ ಇರುತ್ತವೆ.

ಕನ್ನಡಿಗರುಯುಕೆ ಯಾಹು ಗ್ರೂಪ್ ನ ಸದಸ್ಯರಾಗದೆ ಇರುವ ಆಂಗ್ಲನಾಡಿನ ಕನ್ನಡಿಗರು ನಮ್ಮ ಈ ಸಮಾರಂಭದ ಹೆಚ್ಚಿನ ವಿವರ ಮತ್ತು ನಿಯತಕಾಲಿಕ ಪ್ರಕಟಣೆಗಳು ನಿಮ್ಮ ಇಮೈಲ್ ಗೆ ಸ್ವಯಂಚಾಲಿತವಾಗಿ ತಲುಪುವಂತೆ ಮಾಡಲು ದಯವಿಟ್ಟು ಈ ಉಲ್ಲೇಖವನ್ನು ಕ್ಲಿಕ್ಕಿಸಿ ವಿಳಂಬಮಾಡದೆ ಸದಸ್ಯರಾಗಿ.

ಉತ್ತಮ ದರ್ಜೆಯ ಮನರಂಜನೆಯನ್ನು ತಮಗೆ ನೀಡಬೇಕೆನ್ನುವುದೇ ನಮ್ಮ ಉತ್ಕಟ ಹಂಬಲ. ಕನ್ನಡ ಭಾಷೆ, ಸಂಸ್ಕೃತಿ ಇಲ್ಲಿ ಪಸರಿಸುವುದಕ್ಕೆ ನಿಮ್ಮ ಪ್ರೋತ್ಸಾಹ ಮತ್ತು ಹಾಜರಾತಿ ತೀರಾ ಅತ್ಯಗತ್ಯ. ದಯವಿಟ್ಟು ನಮ್ಮ ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕನ್ನಡಾಂಬೆಯ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಮತ್ತೊಮ್ಮೆ ಕಳಕಳಿಯ ಪ್ರಾರ್ಥನೆ.

ಕನ್ನಡಿಗರು ಯುಕೆ ಸಮಿತಿಯ ಪರವಾಗಿ. ಆಂಗ್ಲನಾಡಿನ ಸಶಕ್ತ ಕನ್ನಡಿಗ ಸಮುದಾಯದ ನಿರ್ಮಾಣಕ್ಕಾಗಿ, ಕನ್ನಡಿಗರುಯುಕೆ!

ಈ ಕೆಳಗಿನ ಉಲ್ಲೇಖಗಳನ್ನು ಪರಿಶೀಲಿಸಿ.

ರಘು ದೀಕ್ಷಿತ್http://www.youtube.com/watch?v=kI1in1optlMhttp://www.youtube.com/watch?v=g0tJgHCmL5chttp://www.youtube.com/watch?v=kIMRTWp0VV8&feature=relatedhttp://www.youtube.com/watch?v=RTuF2kBd9x0&feature=related

ಕೋಮಲ್ http://www.youtube.com/watch?v=zUNFIHOhmZAhttp://www.youtube.com/watch?v=BGCB0PsZygMhttp://www.youtube.com/watch?v=SDkSnYNijnQ
ಆಶ್ವಿನಿ ಪ್ರಭಾಕರ್http://www.youtube.com/watch?v=m1kGP-17CIE

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more