• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿನ್ನ ಕೇಳಲು ಬಂದೆ ರಘು ದೀಕ್ಷಿತಾ

By Staff
|

ಬೇಸಿಗೆಯ ಬಿಸಿ ಕಡಿಮೆಯಾಗುತ್ತಲೇ, ಇನ್ನೇನು ಆಂಗ್ಲ ನಾಡಿನ ಕನ್ನಡಿಗರು ಇಲ್ಲಿನ ಚಳಿಗಾಲಕ್ಕಾಗಿ ತಯಾರಿ ನಡೆಸುತ್ತಿರುವ ಸಮಯಕ್ಕೆ ಸರಿಸಾಗಿ ರಘು ದೀಕ್ಷಿತ್ ರವರ ಸಂಗೀತದ ಸುಧೆ ಕನ್ನಡಿಗರ ಮೈ ಬಿಸಿಯೇರಿಸಿತು. ಹೌದು, ಇದು ಇಂಗ್ಲೆಂಡಿನ ರಾಜಧಾನಿ ಲಂಡನ್ ನಲ್ಲಿನ ಹ್ಯಾಮರ್ ಸ್ಮಿತ್ ಎಂಬ ಜಾಗದಲ್ಲಿ 31ನೇ ಜುಲೈ ಶುಕ್ರವಾರದಂದು, ಅದೂ ವರಮಹಾಲಕ್ಷ್ಮಿ ಹಬ್ಬದ ದಿನದಂದು ಕಂಡು ಬಂದ ಸಂಭ್ರಮ.

* ರಾ ನಾ ವಿನಯ್, ಲಂಡನ್

ದೂರದ ಕರ್ನಾಟಕದಲ್ಲಿನ ಕನ್ನಡಿಗರಿಗೆ ಲಕ್ಷ್ಮಿ ಹಬ್ಬದ ಸಂಭ್ರಮವಾದರೆ, ನಮ್ಮಂಥ ಹೊರನಾಡಿನ ಕನ್ನಡಿಗರಿಗೆ ಸಂಗೀತ ಹಬ್ಬದ ಸಂಭ್ರಮ. ರಘು ದೀಕ್ಷಿತ್ ಕಾರ್ಯಕ್ರಮದ ಸುದ್ದಿಯನ್ನು ಕನ್ನಡಿಗರು-ಯುಕೆಯವರಿಂದ ಇ-ಮೇಲ್ ಮೂಲಕ ತಿಳಿದ ತಕ್ಷಣ, ಮರುಭೂಮಿಯಲ್ಲಿ ನೀರಡಿಕೆಯಿಂದ ಬಳಲುತ್ತಿರುವ ಕನ್ನಡಿಗನಿಗೆ ನೀರಿನ ಚಿಲುಮೆಯನ್ನು ಕಂಡಷ್ಟು ಖುಷಿಯಾಯಿತು.

ಸಂಜೆ 7.30ಕ್ಕೆ ಶುರುವಾಗಬೆಕಾಗಿದ್ದ ಕಾರ್ಯಕ್ರಮ ತಡವಾಗಿ ಶುರುವಾದರೂ ಅಲ್ಲಿ ನೆರೆದಿದ್ದ ಕನ್ನಡಿಗರ ಉತ್ಸಾಹ ಎಳ್ಳಷ್ಟೂ ಕಡಿಮೆಯಾಗಲಿಲ್ಲ. ಇದಕ್ಕೆ ರಘು ದೀಕ್ಷಿತ್ ರವರ ಸ್ಮಿತವದನ, ಬಂದವರನ್ನೆಲ್ಲಾ ತಮ್ಮವರಂತೆಯೇ, ತುಂಬಾ ವರುಷದ ಪರಿಚಯದವರಂತೆಯೇ ಮಾತನಾಡಿಸುತ್ತಿದ್ದ ಪರಿ ಹಾಗೂ ಅವರ ಕಂಠಸಿರಿಯಿಂದ ಇನ್ನೂ ಹೊರಹೊಮ್ಮಬೇಕಾಗಿದ್ದ ಗಾನಸುಧೆ, ಇವೆಲ್ಲವೂ ಕಾರಣವಾಗಿತ್ತು. 'ನಿನ್ನ ಪೂಜೆಗೆ ಬಂದೆ ಮಹದೇಶ್ವರ' ಎಂಬ ಹಾಡಿನಂತೆ 'ನಿನ್ನ ಹಾಡಿಗೆ ಬಂದೆ ರಘು ದೀಕ್ಷಿತ' ಎಂದು ಅಭಿಮಾನಿಗಳ ಜನ ಸಂದಣಿ ಹೆಚ್ಚುತ್ತಲೇ ಹೋಯಿತು. ಸರಿಸುಮಾರು 9 ಗಂಟೆ ವೇಳೆಗೆ ರಘು ತಮ್ಮ ವಿಶಿಷ್ಟ ಉಡುಗೆ ತೊಡಿಗೆಯೊಂದಿಗೆ, ಕೈಯಲ್ಲಿ ಎಂದಿನಂತೆ ಗಿಟಾರ್ ಹಿಡಿದು ಹಾಡಲು ಮುಂದಾದಾಗ, ಅಲ್ಲಿದ್ದ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಯಿತು.

ನಂತರ ಅವರು ನೆರೆದಿದ್ದ ಜನರಿಗೆ ಅಭಿನಂದಿಸುತ್ತಾ ಹಾಡು ಶುರುಮಾಡಿದಾಗ, ಮುಂದಿನ 1 ಗಂಟೆಗಳ ಕಾಲ ನಾವು ಎಲ್ಲಿದ್ದೆವೆಂದು ನಮಗೇ ಮರೆತು ಹೋಯಿತು. ಮೊದಲಿಗೆ 'ಮೈಸೂರ್ ಸೆ ಆಯಿ' ನಂತರ 'ಗುಡುಗುಡಿಯಾ ಸೇದಿ ನೋಡು', 'ನಿನ್ನ ಪೂಜೆಗೆ ಬಂದೆ ಮಹದೇಶ್ವರ', 'ಸೋರುತಿಹುದು ಮನೆಯ ಮಾಳಿಗಿ', 'ಅಂಬರ್ ಸೇ' ಹಾಡುಗಳು ರಂಗೇರಿಸಿದವು. ಬರೀ ಕನ್ನಡಿಗರಷ್ಟೇ ಅಲ್ಲದೆ ಆಂಗ್ಲದ ಜನರೂ ಸಹ ರಘು ಅವರ ಹಾಡುಗಳಿಗೆ ಮೂಕವಿಸ್ಮಿತರಾದದ್ದನ್ನು ಕಂಡು ಬೆರಗಾಯಿತು. ಅವರ ಹಾಡುಗಳಿಗೆ ಹಾಗು ಸಂಗೀತಕ್ಕೆ ಹೆಜ್ಜೆ ಹಾಕಲು ಎಲ್ಲರೂ ಕಾತರರಾಗಿದ್ದೆವಾದರೂ, ಜಾಗದ ಮಿತಿಯಿಂದ ಎಲ್ಲರೂ ಕುಳಿತಲ್ಲಿಯೇ ಹೆಜ್ಜೆಹಾಕಬೇಕಾಯಿತು. ಹಾಡಿದ್ದು ಕೇವಲ 6 ಹಾಡುಗಳಾದರೂ, ಅವು 600 ಬಾರಿ ನೆನಪನ್ನು ನಮ್ಮ ಮನದಂಗಳದಿಂದ ಸದಾ ಮೆಲುಕು ಹಾಕುವಂತೆ ಮಾಡಿತು.

ಕಾರ್ಯಕ್ರಮದ ನಂತರ ಅವರನ್ನು ಭೇಟಿಮಾಡಿ ನಮಗೆ ಅವರ ಸಂಗೀತದಲ್ಲಿನ ಆಸಕ್ತಿಯನ್ನು ವಿವರಿಸಿ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡೆವು. ಅಂತಹ ದೊಡ್ಡ ಕಲಾವಿದನನ್ನು ಅಷ್ಟು ಸನಿಹದಿಂದ ಭೇಟಿ ಮಾಡಿ ಫೋಟೊ ತೆಗೆಸಿಕೊಳ್ಳುವೆನೆಂದು ಕನಸಿನಲ್ಲೂ ಭಾವಿಸಿರಲಿಲ್ಲ. ಫೋಟೊಗಾಗಿ ನಿಂತ ಅಷ್ಟೂ ಜನರನ್ನು ಹಾಗು ಒಬ್ಬರ ನಂತರ ಒಬ್ಬರಂತೆ ಸರದಿಯಲ್ಲಿ ಬಂದ ಎಲ್ಲರನ್ನೂ ನಯವಾಗಿಯೇ ಮಾತನಾಡಿಸಿ, ಹಸನ್ಮುಖಿಯಾಗಿ ಫೋಟೊ ಕ್ಲಿಕ್ಕಿಸಿಕೊಂಡ ರಘು ದೀಕ್ಷಿತ್ ಗೆ 'ಹ್ಯಾಟ್ಸ್ ಆಫ್'. ಕಿವಿಗಳಿಗೆ ಹಬ್ಬವಾದ ಮೇಲೆ ಹೊಟ್ಟೆಗೆ ಹಬ್ಬವಾಗದಿರಲು ಸಾಧ್ಯವೆ? ಆದಕಾರಣ, ಅಲ್ಲೇ ಸನಿಹದಲ್ಲಿದ್ದ ಉಪಹಾರ ಗೃಹಕ್ಕೆ ತೆರಳಿ ಆ ಕೈಂಕರ್ಯವನ್ನು ಪೂರೈಸಿದೆವು. ಆ 2 ಗಂಟೆಗಳ ಕಾಲ ರಘುವಿನೊಂದಿಗೆ ವಿರಾಜಮಾನವಾಗಿ ಹರಟುತ್ತಾ ಕಳೆದ ಕಾಲವು ಎಂದಿಗೂ ಮಾಸದು. ರಘು ಕೂಡ ಮನಬಿಚ್ಚಿ ತಮ್ಮ ಅನುಭವಗಳನ್ನು ಹಂಚಿಕೊಂಡದ್ದು ನಮಗೆಲ್ಲಾ ಅತೀವ ಸಂತಸ ಉಂಟು ಮಾಡಿತು. ನಂತರ ಸಮಯ ನೋಡಿದಾಗ ಬೆಳಗಿನ ಜಾವ 1 ಗಂಟೆ!

ಸಂಗೀತ ಹಾಗು ಊಟದ ಕಾರ್ಯಕ್ರಮ ಮುಗಿದು ಸ್ಟೇಷನ್ ಕಡೆಗೆ ಹೆಜ್ಜೆ ಇಡುತ್ತಿದ್ದಂತೆ, ಇತರರು ರಘು ಅವರ ಹಾಡುಗಳನ್ನು ಗುನುಗುನಿಸುತ್ತಾ ನಡೆಯುತ್ತಿರುವುದು ಅಲೆಅಲೆಯಾಗಿ ಕೇಳಿ ಬಂದು ಹಾಗೇ ಮಾಯವಾಯಿತು. ಅವರ ಸರಳತೆ, ಹೃದಯ ವೈಶಾಲ್ಯತೆ, ಸಂಗೀತ ಪ್ರತಿಭೆ ಹಾಗು ಕಂಚಿನ ಕಂಠ ಇನ್ನೂ ನೂರ್ಕಾಲ ಅಸಂಖ್ಯಾತ ಅಭಿಮಾನಿಗಳನ್ನು ರಂಜಿಸಲೆಂದು ಆಶಿಸುತ್ತೇನೆ. 'Eagerly waiting for another show of Raghu Dixit in UK with all ears'. Thank You Raghu for entertaining us.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more