ಯುಕೆ ಕನ್ನಡಿಗರನ್ನು ರಂಜಿಸಲಿರುವ ರಘು ದೀಕ್ಷಿತ್

Raghu Dixit concerts in UK
'ನಿನ್ನ ಪೂಜೆಗೆ ಬಂದೆ ಮಹದೇಶ್ವರ'... ಸೈಕೋ ಚಿತ್ರದ ಈ ಹಾಡಿನಿಂದ ವಿಶ್ವಕನ್ನಡಿಗರ ಮನೆಮಾತಾಗಿರುವ ಸಂಗೀತ ನಿರ್ದೇಶಕ, ಸಾಹಿತಿ ಮತ್ತು ಹಾಡುಗಾರ ರಘು ದೀಕ್ಷಿತ್ ಯುನೈಟೆಡ್ ಕಿಂಗಡಂನ ಕನ್ನಡಿಗರನ್ನು, ಸಂಗೀತ ಪ್ರೇಮಿಗಳಿಗೆ ಸಂಗೀತದ ರಸದೌತಣ ಬಡಿಸಲಿದ್ದಾರೆ.

ಪಾಶ್ಚಿಮಾತ್ಯ ಮತ್ತು ಜನಪದ ಸಂಗೀತದಿಂದ ಖ್ಯಾತರಾಗಿರುವ ರಘು ಜುಲೈ 23ರಿಂದ 26ರವರೆಗೆ ಲಂಡನ್, ವಿಲ್ಟ್ ಶೈರ್ ಮತ್ತು ಬರ್ಮಿಂಗ್ ಹ್ಯಾಮ್ ಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಲಿದ್ದಾರೆ.

ಕಾರ್ಯಕ್ರಮಗಳ ವಿವರ ಕೆಳಗಿನಂತಿವೆ

ಜುಲೈ 23 : ಲಂಡನ್ನಿನ ದಿ ಗಿಬ್ಸನ್ ಗಿಟಾರ್ ಸೆಂಟರ್
ಜುಲೈ 24 : ವಿಲ್ಟ್ ಶೈರ್ ನಲ್ಲಿರುವ ಕಾರ್ಲಟನ್ ಪಾರ್ಕ್
ಜುಲೈ 25 : ಬರ್ಮಿಂಗಹ್ಯಾಮ್ ನಲ್ಲಿರುವ ಹ್ಯಾಂಡ್ಸ್ ವರ್ಥ್ ಪಾರ್ಕ್
ಜುಲೈ 26 : ಬರ್ಮಿಂಗಹ್ಯಾಮ್ ನಲ್ಲಿರುವ ಹಾಕಿ ಬಾರ್ ಮತ್ತು ಕಿಚನ್

ಎಲ್ಲ ಕಾರ್ಯಕ್ರಮಗಳು ಸಾಯಂಕಾಲ 8 ಗಂಟೆಗೆ ಪ್ರಾರಂಭವಾಗಲಿವೆ. ಲಂಡನ್ ನಲ್ಲಿರುವ ಸಂಗೀತ ರಸಸಂಜೆ ಖಾಸಗಿ ಕಾರ್ಯಕ್ರಮವಾಗಿದ್ದು ಉಳಿದವುಗಳಿಗೆ ಸಾರ್ವಜನಿಕರು ಭಾಗವಹಿಸಬಹುದಾಗಿದೆ.

ಪಾಶ್ಚಾತ್ಯ ಸಂಗೀತ ಮಾತ್ರವಲ್ಲ ಜಾನಪದ ಗೀತೆಯಲ್ಲೂ ಅಸಾಧ್ಯ ಸಾಧನೆ ಮಾಡಿರುವ ರಘು ದೀಕ್ಷಿತ್ ಸೈಕೋ ಚಿತ್ರದಿಂದ ಕನ್ನಡ ಚಿತ್ರರಸಿಕರ ಗಮನಕ್ಕೆ ಬರುವವರೆಗೆ ಎಲೆಮರೆಯ ಕಾಯಿಯಂತೆಯೇ ಇದ್ದರು. ಸೈಕೋ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಮಾಡಿರುವ ಅವರ 'ನಿನ್ನ ಪೂಜೆಗೆ ಬಂದೆ ಮಹದೇಶ್ವರ' ಹಾಡು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಸಂಗೀತವನ್ನು ಪರಿಚಯಿಸಿತು. ಉಚ್ಛ ಕಂಠದ ಆ ಸ್ವರ, ಕೈಯಲ್ಲಿ ಗಿಟಾರ್ ಹಿಡಿದು ವಿಭಿನ್ನ ದಿರಿಸು ಧರಿಸಿರುವ ರಘು ದೀಕ್ಷಿತ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಮಾಹಿತಿ : ಶಶಿಕಾಂತ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+