ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್ ಪ್ರಧಾನಿಯಿಂದ ಕನ್ನಡ ಪುಸ್ತಕ ಬಿಡುಗಡೆ

By Staff
|
Google Oneindia Kannada News

Gowri Satya, Ravishankar, Helen
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಲಭಿಸಿದ ಸಂತಸದ ಜೊತೆಗೆ ನಮ್ಮ ಕೀವಿ ಕನ್ನಡಿಗರಿಗೆ ಮತ್ತೊಂದು ಹರ್ಷದ ಸುದ್ದಿ ಕಾದಿತ್ತು. ಕರ್ನಾಟಕ ರಾಜ್ಯೋತ್ಸವದ ದಿನವೇ ನಮ್ಮ ನ್ಯೂಜಿಲೆಂಡಿನ ಪ್ರಧಾನಿ ಹೆಲೆನ್ ಕ್ಲಾರ್ಕ್ ಅವರು ಮೈಸೂರಿನ ಪತ್ರಕರ್ತ ಗೌರಿ ಸತ್ಯ ಅವರು ರಚಿಸಿದ ನ್ಯೂಜಿಲೆಂಡ್ ಮಡಿಲಲ್ಲಿ ಎಂಬ ಕನ್ನಡ ಪುಸ್ತಕವನ್ನು ಬಿಡುಗಡೆ ಮಾಡಿದರು. ಅಕ್ಲೆಂಡಿನ ಸಾಂಡ್ರಿಂಗ್‌ಹ್ಯಾಮ್ ಸಮುದಾಯ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿದ ಕ್ಲಾರ್ಕ್ ಅವರು ಸುಂದರ ಹೊದಿಕೆ ಮತ್ತು ಒಳಗಿನ ಫೋಟೊಗಳನ್ನು ನೋಡಿ ಪುಳಕಿತರಾಗಿ ಎಂತಹ ಸುಂದರ ಪುಸ್ತಕ! ಯಾರಾದರೂ ನನಗೆ ಇದನ್ನು ಓದಿ ಹೇಳಬಲ್ಲಿರಾ ಎಂದು ಉದ್ಗರಿಸಿದರು. ಅದಕ್ಕೆ ಅಲ್ಲೇ ಇದ್ದ ಕನ್ನಡಿಗ ಡಾ.ಲಿಂಗಪ್ಪ ಕಲ್ಬುರ್ಗಿಯವರು ಪ್ರತಿಕ್ರಯಿಸಿ ನಾನು ಹೇಳುತ್ತೇನೆ ಎಂದು ಅಶ್ವಾಸನೆ ನೀಡಿದರು.

ನಾಲ್ಕು ವರ್ಷದ ಹಿಂದೆ ತಮ್ಮ ಮಗಳು ಸ್ಮಿತಾ ಮತ್ತು ಅಳಿಯ ಕುಮಾರ್ ರಾಮಸ್ವಾಮಿ ಅವರ ಆಹ್ವಾನದ ಮೇಲೆ ನ್ಯೂಜಿಲೆಂಡಿಗೆ ಬಂದಿದ್ದ ಗೌರಿ ಸತ್ಯ ಅವರು ಸುಮಾರು ಎಂಟು ತಿಂಗಳ ಕಾಲ ಎಲ್ಲೆಡೆ ಪ್ರವಾಸಿಯಾಗಿ ಸುತ್ತಿ ತಮ್ಮ ಅನುಭವವನ್ನು ಅನನ್ಯ ಶೈಲಿಯಲ್ಲಿ ಈ ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ. ಈ ನಾಡಿನ ಮೂಲ ಜನಾಂಗ ಮಾವೋರಿಗಳ ಬದುಕು, ಕಲೆ, ಸಂಸ್ಕೃತಿಗಳ ಬಗ್ಗೆ ಸೊಗಸಾದ ವ್ಯಾಖ್ಯಾನ ನೀಡಿದ್ದಾರೆ. ಕೇಪ್ ರೀಯಾಂಗ ನ್ಯೂ ಪ್ಲಿಮತ್ ಮೌಂಟ್ ರೂಪೆಹು ರೊಟೊರೊವ ಹ್ಯಾಮಿಲ್ಟನ್ ಮುಂತಾದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಓದುತ್ತಿದ್ದರೆ ನಾವು ಅಲ್ಲಿಯೇ ಇರುವಂತೆ ಭಾಸವಾಗುತ್ತದೆ. ಆದರೆ ಅವರಲ್ಲಿನ ಪತ್ರಕರ್ತ ಸದಾ ಜಾಗ್ರತನಾಗಿರುವುದಕ್ಕೆ ಅವರು ನಮ್ಮ ಅಕ್ಲೆಂಡಿನ ಕಾಮಾಟಿಪುರ ಎನಿಸಿದ ಕರಂಗಹಪೆ ರಸ್ತೆಯ ಕೊಳಕು ಜೀವನದ ಬಗ್ಗೆ ನಿಷ್ಪಕ್ಷಪಾತದಿಂದ ವರದಿ ಮಾಡಿರುವುದು ಸಾಕ್ಷಿಯಾಗುತ್ತದೆ.

Gowri Satya, Ravishankar, Helen
ಕೆಲವೊಮ್ಮೆ ನ್ಯೂಜಿಲೆಂಡನ್ನು ಹೊಗಳುತ್ತಲೇ ಅದನ್ನು ಕರ್ನಾಟಕಕ್ಕೆ ಹೋಲಿಸಿ ನಮ್ಮೂರೇ ಚಂದ ನಮ್ಮೂರೇ ಅಂದ ಎಂದು ರಾಗ ಎಳೆಯುತ್ತಾರೆ. ಒಟ್ಟಿನಲ್ಲಿ ನಮ್ಮ ಸುಂದರ ನ್ಯೂಜಿಲೆಂಡ್ ಬಗ್ಗೆ ಬರೆದ ಈ ಪುಸ್ತಕ ತನ್ನ ಸರಳ ಶೈಲಿ ಮತ್ತು ಲೇಖಕರ ಭಾಷಾ ಪ್ರಭುತ್ವದ ಕಾರಣ ನಿರರ್ಗಳವಾಗಿ ಓದಿಸಿಕೊಂಡು ಹೋಗುತ್ತದೆ. ಕನ್ನಡಿಗರಿಗೆ ಔದಾರ್ಯ ಸಹಜ ಗುಣ, ಆದ್ದರಿಂದಲೇ ಏನೊ ಗೌರಿ ಸತ್ಯ ಅವರು ಸ್ಥಳೀಯ ಕನ್ನಡಿಗರನ್ನು ಸ್ವಲ್ಪ ಹೆಚ್ಚೆನಿಸುವಷ್ಟು ಪ್ರಶಂಸಿಸಿದ್ದಾರೆ. ಇರಲಿ ಬಿಡಿ ಅದು ನಮಗೇನು ಅಪ್ರಿಯವಲ್ಲ.

ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಜಸ್ಟೀಸ್ ಆಫ್ ಪೀಸ್ ಡಾ. ಲಿಂಗಪ್ಪ ಕಲ್ಬುರ್ಗಿ[ಕನ್ನಡ ಕೂಟದ ಮಾಜಿ ಅಧ್ಯಕ್ಷರು], ಪ್ರಸಕ್ತ ಅಧ್ಯಕ್ಷ ರವಿ ಶಂಕರ್ ರಾವ್ ಮತ್ತು ಇತರರು ಲೇಖಕರನ್ನು ಅಭಿನಂದಿಸಿದರು. ಈಗ ಮತ್ತೊಮ್ಮೆ ಇಲ್ಲಿಗೆ ತಮ್ಮ ಪತ್ನಿ ನಿರ್ಮಲಾ ಅವರೊಡನೆ ಗೌರಿ ಸತ್ಯ ಇಲ್ಲಿಗೆ ಬಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X