ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಲಾಂಟಾದಲ್ಲಿ ಸೈಕೊ ಕನ್ನಡ ಚಿತ್ರ ಪ್ರದರ್ಶನ

By Staff
|
Google Oneindia Kannada News

Psycho Kannada movie show in Atlantaಅಟ್ಲಾಂಟಾ, ನ. 5 : ಕನ್ನಡಿಗ ರಘು ದೀಕ್ಷಿತ್ ಅವರು ಹಾಡಿರುವ 'ನಿನ್ನ ಪೂಜೆಗೆ ಬಂದೆ ಮಹದೇಶ್ವರ' ಹಾಡಿನಿಂದ ಅಪಾರ ಜನಮನ್ನಣೆ ಗಳಿಸಿರುವ ಹೊಚ್ಚಹೊಸ ಕನ್ನಡ ಚಲನಚಿತ್ರ 'ಸೈಕೊ' ನವೆಂಬರ್ 8, ಶನಿವಾರದಂದು ಇಲ್ಲಿನ ಪೀಚ್ ಟ್ರಿ ಸಿನೆಮಾಸ್ ಥಿಯೇಟರ್ ನಲ್ಲಿ ಪ್ರದರ್ಶಿತವಾಗುತ್ತಿದೆ. 'ಕನ್ನಡ ಪಿಕ್ಚರ್ ಕ್ಲಬ್' ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.

ಸಂಗೀತ, ಛಾಯಾಗ್ರಹಣ, ಬಳಸಲಾಗಿರುವ ಸೆಟ್ಟಿಂಗಿನ ಬಗ್ಗೆ ಉತ್ತಮ ಮಾತುಗಳು ಕೇಳಿಬರುತ್ತಿವೆ. ಚಿತ್ರದ ನಾಯಕ ಧನುಷ್ ಮತ್ತು ನಾಯಕಿ ಅನಿತಾ ಅವರ ಹೆಸರನ್ನು ಬಹಿರಂಗಪಡಿಸದೆ ಚಿತ್ರದ ನಿರ್ದೇಶಕ ದೇವದತ್ ಅಪಾರ ಕುತೂಹಲ ಕೆರಳಿಸಿದ್ದರು. ನಾಯಕ, ನಾಯಕಿ, ನಿರ್ದೇಶಕ, ಸಂಗೀತ ನಿರ್ದೇಶಕ, ನಿರ್ಮಾಪಕ ಗುರುದತ್ತ ಮತ್ತು ಛಾಯಾಗ್ರಾಹಕ ಸಭಾ ಕುಮಾರ್ ಎಲ್ಲರಿಗೂ ಈ ಚಿತ್ರ ಪ್ರಥಮ. ಹೀಗಾಗಿ ಅಪಾರ ಶ್ರಮವಹಿಸಿ ಚಿತ್ರ ತಯಾರಿಸಿದ್ದಾರೆ.

ಎರಡು ಗಂಟೆಯ ಸಿನೆಮಾ ಶನಿವಾರ ಮಧ್ಯಾಹ್ನ 2 ಗಂಟೆಗೆ ಪ್ರದರ್ಶಿತವಾಗುತ್ತಿದೆ. ಚಿತ್ರ ಪ್ರದರ್ಶನದ ಸ್ಥಳ, ದಿನಾಂಕ, ಸಮಯಗಳನ್ನು ಮತ್ತೊಮ್ಮೆ ಗಮನಿಸಿ.

ದಿನಾಂಕ : ನವೆಂಬರ್ 8, ಶನಿವಾರ
ಸಮಯ : ಮಧ್ಯಾಹ್ನ 2 ಗಂಟೆಗೆ
ಸ್ಥಳ : PeachTree Cinemas
6135, Peachtree pkwy
Norcross, Georgia 30092
ಟಿಕೆಟ್ ಬೆಲೆ : 7 ಡಾಲರ್

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಸೈಕೊದಿಂದ ಕನ್ನಡಕ್ಕೆ ಮೂವರು ಪ್ರತಿಭೆಗಳ ಬಳುವಳಿ
ಚಿತ್ರ ವಿಮರ್ಶೆ : ದೇವದತ್ ನಿರ್ದೇಶನದ ಸೈಕೊ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X