ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐರ್ಲಂಡಲ್ಲಿ ನ. 1ರಂದು ಮೊಳಗಲಿದೆ ಕನ್ನಡ ಡಿಂಡಿಮ

By Staff
|
Google Oneindia Kannada News
Kannada Habba 2007
'ಕನ್ನಡ ಹಬ್ಬ 2007'ದಲ್ಲಿ ಐರಿಶ್ ಕನ್ನಡಿಗರು
ಐರಿಶ್ ಕನ್ನಡಿಗರು ಮೂರನೆಯ ವರ್ಷ ಕೂಡ ರಾಜ್ಯೋತ್ಸವವನ್ನು ಭರ್ಜರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ವಾರ್ಷಿಕೋತ್ಸವ ಹಾಗೂ ರಾಜ್ಯೋತ್ಸವದ ಆಚರಣೆ 'ಕನ್ನಡ ಹಬ್ಬ 2008' ನವೆಂಬರ್ 1ರಂದು ಪೋರ್ಟ್ ಮೋನಾರ್ಕ್ ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಭಾಗದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಆಯೋಜಕರು ಪ್ರಾರ್ಥಸಿದ್ದಾರೆ.

ಕಾರ್ಯಕ್ರಮಗಳು : ಹಾಡು, ನೃತ್ಯ, ಕನ್ನಡ ನಾಟಕ, ಆಟೋಟಗಳು, ರಂಗೋಲಿ ಸ್ಪರ್ಧೆ, ಚಿತ್ರ ರಚನೆ, ಕನ್ನಡ ಕಾವ್ಯ ಗೋಷ್ಠಿ. ಎಲ್ಲ ಸ್ಪರ್ಧೆಗಳೂ ಕನ್ನಡದಲ್ಲೇ ಇರುತ್ತವೆ. ಕೊನೆಗೆ ಭೋಜನ ಕೂಡ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸಲಿದೆ.
ವಿವರ ಕೆಳಗಿನಂತಿವೆ

"ಕನ್ನಡ ಹಬ್ಬ 2008"
ದಿನಾಂಕ : ಶನಿವಾರ, 1ನೇ - ನವೆಂಬರ್, 2008
ಸಮಯ : ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ
ಸ್ಠಳ : ಪೋರ್ಟ್ ಮಾರ್ನಾಕ್, ಡಬ್ಲಿನ್ ನಗರ, ಐರ್ಲ್ಯಾಂಡ್. (Portmarnock Sports & Leisure Club, Blackwood Lane, Portmarnock, Dublin, Ireland.)

ಪ್ರವೇಶ ದರ - 18 ಯೂರೊ (ಮಕ್ಕಳಿಗೆ ಉಚಿತ ಪ್ರವೇಶ)

ಆಸಕ್ತ ಕನ್ನಡಿಗರು ಹೆಚ್ಚಿನ ವಿವರಗಳಿಗೆ ದುರ್ಗೇಶ್ ಕಾಳೇಗೌಡ ಅವರನ್ನು ಸಂಪರ್ಕಿಸಿ. ಅವರ ಇಮೇಲ್ : [email protected]
ಐರಿಶ್ ಕನ್ನಡಿಗರ ವೆಬ್ ಪುಟ : http://www.irishkannadigaru.com/
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ - 086 0711 725, 087 6343 721, 087 9864 124, 085 7117 786, 086 8549 011

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X