ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಭಾರತದ ಪಾತ್ರಗಳು : ನಿತ್ಯಾನಂದರಿಂದ ಉಪನ್ಯಾಸ

By Staff
|
Google Oneindia Kannada News

Yekshanagana artist Polali Nityananda Karanthಹವ್ಯಾಸಿ ಯಕ್ಷಗಾನ ಕಲಾವಿದ ಪೊಳಲಿ ನಿತ್ಯಾನಂದ ಕಾರಂತ್ ಅವರಿಂದ 'ಮಹಾಭಾರತ ಪ್ರಮುಖ ಪಾತ್ರಗಳು' ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಡೆಟ್ರಾಯಿಟ್‌ನ ಪಂಪ ಕನ್ನಡ ಕೂಟ ಜುಲೈ 19ನೇ ತಾರೀಖಿನಂದು ಹಮ್ಮಿಕೊಂಡಿತ್ತು.

ಪಂಪ ಕನ್ನಡ ಕೂಟದ ವಿಜಯಾ ಪಂಡಿತ್ ಮತ್ತು ಅರ್ಕೇಶ್ ಪಂಡಿತ್ ಅವರ ನಿವಾಸದ ಸಭಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಮಹಾಭಾರದ ವೈವಿಧ್ಯಮಯ ಪಾತ್ರಗಳನ್ನು ಮತ್ತು ಪಾತ್ರಗಳ ವಿಶೇಷತೆಯನ್ನು ಅತ್ಯಂತ ಸ್ವಾರಸ್ಯಕರವಾಗಿ ವಿಶ್ಲೇಷಿಸಿದರು. ಸಭಿಕರು ತದೇಕಚಿತ್ತದಿಂದ ಉಪನ್ಯಾಸವನ್ನು ಆಲಿಸಿದರು.

ಪಂಪ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯೆ ವಿಜಯಾ ಪಂಡಿತ್ ಇವರು ಸ್ವಾಗತಿಸಿದರು. ಕೊನೆಗೆ ಸದಸ್ಯ ಪುರುಷೋತ್ತಮ ಮರಕಡ ಇವರು ಧನ್ಯವಾದವನ್ನು ಅರ್ಪಿಸಿದರು.

ಈ ಮೊದಲು ನಡೆದ ಪಂಪ ಕನ್ನಡ ಕೂಟದ ಯುಗಾದಿ ಕಾರ್ಯಕ್ರಮದಲ್ಲಿ ಅಕ್ಕ ಕನ್ನಡ ಸಂಸ್ಥೆಯ ಅಧ್ಯಕ್ಷ ರಮೇಶ್ ಗೌಡ, ನಿಕಟಪೂರ್ವ ಅಧ್ಯಕ್ಷ ಅಮರನಾಥ ಗೌಡ ಹಾಗೂ ಪಂಪ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯೆ ವಿಜಯಾ ಪಂಡಿತ್ ಇವರುಪೊಳಲಿ ನಿತ್ಯಾನಂದ ಕಾರಂತರನ್ನು ಶಾಲು ಹೊದಿಸಿ ಸನ್ಮಾನಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X