ಅನಿವಾಸಿ ಆತ್ಮಾವಲೋಕನ ;ವಿಚಾರ ಸಂಕಿರಣ
ದುಬೈ, ಏ. 2 : ಬೆರಗು ಹುಟ್ಟಿಸುವ ಆಧುನಿಕ ಅರಬ್ ಮರಳುಗಾಡಿನಲ್ಲಿ ಕನ್ನಡ ಭಾಷೆ,ಕನ್ನಡ ಸಾಹಿತ್ಯ ಮತ್ತು ಕನ್ನಡ ಜನ ಪ್ರೀತಿಯನ್ನು ಜಿನುಗಿಸುವ ಧ್ವನಿ ಪ್ರತಿಷ್ಠಾನವು "ಅನಿವಾಸಿ ಆತ್ಮಾವಲೋಕನ" ಎಂಬ ವಿಷಯವನ್ನು ಕೇಂದ್ರ ವಸ್ತುವಾಗಿಟ್ಟುಕೊಂಡು ಕನ್ನಡದಲ್ಲಿ ಒಂದು ವಿಚಾರ ಸಂಕಿರಣ ಏರ್ಪಡಿಸಿದೆ. ಇದೇ ಗುರುವಾರ 4ನೇ ತಾರಿಕು ಸಂಜೆ 4 ಗಂಟೆಗೆ ಈ ಸಂಕಿರಣ ಶಾರ್ಜಾದಲ್ಲಿರುವ ಶಾರ್ಜಾ ಇಂಡಿಯನ್ ಅಸೋಸಿಯೋಷನ್ ಸಭಾಂಗಣದಲ್ಲಿ ನಡೆಯಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನ ನಾನಾ ಊರು ಪಟ್ಟಣಗಳಲ್ಲಿ ನೆಲೆಸಿರುವ ಪರಿಣತ ಕನ್ನಡಿಗರು ಸಿದ್ಧಪಡಿಸಿರುವ ಪ್ರಬಂಧಗಳನ್ನು ಸಂಕಿರಣದಲ್ಲಿ ಮಂಡಿಸಲಾಗುತ್ತದೆ.
ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಈ ಪ್ರಬಂಧಗಳ ಬಗೆಗೆ ಮುಕ್ತ ಚರ್ಚೆಗೂ ಅವಕಾಶವಿರುತ್ತದೆ. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನಿತ ಶೇಖರ್ ಬಿ ಶೆಟ್ಟಿ ಅವರನ್ನು ಎಮಿರೇಟ್ಸ್ ಕನ್ನಡಿಗರ ಪರವಾಗಿ ಸನ್ಮಾನಿಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಪ್ರಕಾಶ್ ಪಯ್ಯಾರ್ ಅವರನ್ನು ಸಂಪರ್ಕಿಸಿ [050 6976081]












Click it and Unblock the Notifications