• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ?

By Staff
|

ಯಾವ theory ನಂಬಬೇಕು ಹೇಳಿ. ಅಮೆರಿಕದಲ್ಲಿ ಇರೋದೆಲ್ಲಾ ಒಳ್ಳೇದು ಅಂತ ನಾನು ಹೇಳ್ತಿಲ್ಲ. ಹಂಸ ಕ್ಷೀರ ನ್ಯಾಯದ ತರಹ ಅವರಲ್ಲಿರೋ ಒಳ್ಳೆ ಗುಣಗಳನ್ನ ನಾವು ಯಾಕೆ ಆಯ್ಕೆ ಮಾಡ್ಕೊಳ್ಳೋಲ್ಲಾ ಅನ್ನೋದೇ ನನ್ನ ಚಿಂತೆ.

  • ವಲ್ಲೀಶ ಶಾಸ್ತ್ರಿ, ಕ್ಯಾಲಿಫೋರ್ನಿಯಾ

ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ?ಬೆಂಗಳೂರಿಂದ ಎನಾರಾ ಫಾರಿನ್ ಪ್ಲೇನ್ (ಲುಫ್ತಾನ್ಸಾನೋ, ಬ್ರಿಟಿಷ್ ಏರ್ ವೇಸೋ) ಹತ್ತಿದೀರಾ? ಏರ್ ಹೋಸ್ಟಸ್‌ನ ಕೂಗಬೇಕಾದರೆ ಕೂಗ್ಲೋ ಬೇಡೋ ಅಂತ ಯೋಚಿಸಿ ಕೂಗ್ತೀವಿ. ಕೂಗಬೇಕಾದರೂ ನಯ ನಾಜೂಕು. ಕರೆಗುಂಡಿ ಒತ್ತೋಕೆ ಮುಂಚೆ ಒಂದ್ಸಾರಿ ಯೋಚಿಸ್ತೀವಿ. ಎಲ್ಲಾ ಸ್ವಾತಂತ್ರ್ಯಾನೂ ಕಳ್ಕೋಂಡೋರ್ ತರಹ ಆಗ್ಬಿಡ್ತೀವಿ. ಅದೇ ನಮ್ಮ ಏರ್ ಇಂಡಿಯಾ ಪ್ಲೇನ್ ಹತ್ತಿದ ತಕ್ಷಣ ನಮ್ಮ ನಡತೇಲಿ ಏನು ವ್ಯತ್ಯಾಸ, ಎಷ್ಟು ಸ್ವಾತಂತ್ರ್ಯ, ಏರ್ ಹೋಸ್ಟಸ್ ಮೇಲೇ ಅದೇ ರೋಪು, ಡಿಮ್ಯಾಂಡು, ಇಪ್ಪತ್ ಸಾರಿ ಗುಂಡಿ ಒತ್ತತೀವಿ. ಯಾಕೆ ಹಿಂಗೆ?

ಫಾರಿನ್ ಏರ್ ಲೈನ್‌ನಾಗೆ ಯಾಕೆ ಹಿಂಗಾಗೊಲ್ಲಾ? ಹಾಗೇನೇ, ಪ್ಲೇನ್‌ನಿಂದ ಅಮೆರಿಕಾ ಇಳೀರಿ, ಏನೋ ಭಯ. ನಡತೇಲಿ ಎಲ್ಲೂ ಇಲ್ಲದ ಚೇಂಜು. ಕೈಲಿದ್ದ ಕಾಗದದ ಚೂರು ಎಸೀಬೇಕಾದರೂ ಕಸದ ಬುಟ್ಟಿ ನೋಡ್ತೀವಿ. Immigration Lineನಲ್ಲಿ ನಿಂತ್ಕೊಳೋದರಿಂದಾನೇ ಶುರು, ನಮ್ಮ ನಯ ನೀತಿ. ಇದನ್ನ ಯಾರೂ ಹೇಳ್ಕೊಡೋಲ್ಲ. personal space ಅನ್ನೋದು automatic ಆಗಿ ಬಂದ್ಬಿಡುತ್ತೆ. ಯಾರನ್ನಾದರೂ ಮಾತಾಡಸ್ಬೇಕಾದರೆ ತಕ್ಷಣ excuse me ಅಂತೀವಿ. ಅದೇ ಬೆಂಗಳೂರಲ್ಲೋ, ಬಾಂಬೇಲೋ ಇಳೀರಿ, ನಮಗೆ ಒಂದು ಧೈರ್ಯ. Immigration line ನಿಂತ್ಕೊಳ್ಳೋಕೆ ನೂಕಾಡ್ತೀವಿ. ಯಾರೋ influence ಇರೋನು ಮುಂದೆ ಹೋಗ್ತಾನೆ. ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ?

ಅಮೆರಿಕದಲ್ಲಿ ನಡೆಯುವ Basket Ball ಅಥವ Base Ball Gameಗಳನ್ನ ನೋಡ್ಬೇಕು, ಸುಮಾರು 50ರಿಂದ 60ಸಾವಿರ ಜನ ಸೇರ್ತಾರೆ. ಜನ stadiumಗೆ ಬರುವಾಗ ಆಗಲೀ ಹೊರಗೆ ಹೋಗುವಾಗ ಆಗಲೀ ಒಂದೇ ಒಂದು ಅಂತಹ ಅಹಿತರ ಘಟನೆಗಳು ನಡೆಯೋಲ್ಲ. ಎಂತಾ rush ಇದ್ರೂ ಸಹ personal space ಹೇಗೆ ಇಡ್ತಾರೆ ಅಂತ ಅಂತಹ gameಗಳಿಗೆ ಹೋಗೇ ನೋಡ್ಬೇಕು.

ಈ ಸಾರಿ ನಮ್ಮ India vacationನಲ್ಲಿ ಒಂದು ಘಟನೆ ಹೇಳ್ತೀನಿ, ಬೇಜಾರು ಮಾಡ್ಕೊಬೇಡಿ. ನಾನು, ನನ್ನ ಹೆಂಡ್ತಿ ಕನ್ನಡದ ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಮ್ ಜೊತೆ "ಮಾತಾಡ್ ಮಾತಾಡು ಮಲ್ಲಿಗೆ" ಚಿತ್ರ ನೋಡಕ್ಕೆ ಸಂತೋಷ್ ಚಿತ್ರಮಂದಿರಕ್ಕೆ ಹೋಗಿದ್ವಿ. ಟಿ. ಎನ್. ಸೀತಾರಾಂ ಅಂದ್ರೆ ಗೊತ್ತಲ್ಲ, star celebrity. ಚಿತ್ರ ಮುಗಿದ ಮೇಲೆ ಜನ ಮುತ್ಕೋತಿದ್ರು. ನಾವು ಅವರ ಜೊತೇನೆ ಹೇಗೋ ಜನರ ಹತ್ತಿರ ಎಲ್ಲಾ ತಬ್ಬಿಸ್ಕೊಂಡು ಬರ್ತಾ ಇದ್ವು. ಇದು ನನ್ನ ಹೆಂಡ್ತೀಗೆ ಹೊಸದು. ನನ್ನ ಕೈನ ಭದ್ರವಾಗಿ ಹಿಡ್ಕೊಂಡು ಬರ್ತಾ ಇದ್ಲು. ನೋಡ್ದೋರ್ಗೆ ಗೊತ್ತು ಗಂಡ ಹೆಂಡ್ತಿ ಹೋಗ್ತಾ ಇದಾರೆ ಅಂತ ಗೊತ್ತಾಗ್ತಿತ್ತು. ಒಬ್ಬ ಬಂದು ಹ್ಯಾಗೆ ತಳ್ಕೊಂಡು ಹೋದ ಅಂದ್ರೆ ನನ್ನ ಹೆಂಡ್ತಿ ನನ್ನ ಕೈ ಬಿಟ್ಟು ಮುಂದೆ ಎಲ್ಲೋ ಗುಂಪಲ್ಲಿ ಹೋಗಿದ್ಲು. ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ?

ನ್ಯೂಯಾರ್ಕ್, ಲಾಸ್ ಏಂಜಲಿಸ್‌ನಂತಹ ನಗರಗಳಲ್ಲಿ ಭೇಲ್ ಪುರಿ, ಪಾನಿ ಪುರಿ ಗಾಡಿಗಳಲ್ಲಿ ಸಿಗದಿದ್ದರೂ ಇಲ್ಲಿನ ತಿಂಡಿಗಳು ಹೋಟೆಲಿನಲ್ಲಿ ತಿನ್ನಲು ಸಿಗುತ್ತದೆ. ಆದರೆ ಅದರ ಶುಚಿತ್ವ, ಜನ ತಿಂದಾದ ಮೇಲೆ ಕಸ ಎಸೆಯುವ ರೀತಿ ನೋಡಬೇಕು. ಕಸವೆಲ್ಲಾ ಕಸದ ಬುಟ್ಟಿಗೇ ಬೀಳುತ್ತವೆ. ಕಸದ ಬುಟ್ಟಿಗಳು ಬಸುರಿಯಾಗುವುದಕ್ಕೇ ಬಿಡುವುದಿಲ್ಲ. ನಮ್ಮೂರುಗಳಲ್ಲಿ ಗಾಡಿಮೇಲಿನ ತಿಂಡಿ ತಿನ್ನೋದು ಅಂದ್ರೆ, ಭೇಲ್ ಪುರಿ, ಪಾನಿ ಪುರಿ ಅಂಗಡಿಗಳಲ್ಲಿ ರಸ್ತೆ ಬದಿ ತಿನ್ನೋ ಸುಖ ಬಹಳ ದೇಶಗಳಲ್ಲಿಲ್ಲ. ಕೆಲವು ಅರಬ್ಬೀ ದೇಶಗಳಲ್ಲಿ ಲಭ್ಯ. ಆದರೆ, ನಮ್ಮ ಊರುಗಳಲ್ಲಿ ತಿಂದ ಮೇಲೆ ಕೈಲಿದ್ದ ಪೇಪರ್ ತುಂಡುಗಳು, ಎಲೆ ಚೂರುಗಳು ಅಲ್ಲಿಯ ಮೋರಿಗೇ ಪಾಲು. ಪಾಪ ಅಲ್ಲೆಲ್ಲೋ ಒಂದು ಮೂಲೆಯಲ್ಲಿ ಇರುವ ಸಣ್ಣ ಕಸದ ಬುಟ್ಟಿ ತುಂಬಿದ ಬಸುರಿಯಾಗಿರುತ್ತೆ. ಕಸ ಎಸೆಯುವುದರಲ್ಲಿ ನಮ್ಮ ದೇಶದಲ್ಲಿರುವಷ್ಟು ಸ್ವಾತಂತ್ರ್ಯ ಇನ್ನಾವ ದೇಶದಲ್ಲೂ ಕಾಣೆ. ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ?

ಪ್ರಪಂಚದ ಯಾವುದೇ ಮುಂದುವರಿದ ದೇಶದಲ್ಲೇ ಹೋಗಿ STOP signಗೆ ಎಷ್ಟು ಮರ್ಯಾದೆ ಇದೆ ಅಂತ ತಿಳಿಯುತ್ತೆ, ಅಮೆರಿಕೆಯಲ್ಲಂತೂ ವಾಹನಗಳು ಅಡ್ಡ ಬರುತ್ತಿರಲಿ ಅಥವ ಇಲ್ಲದಿರಲಿ, STOP sign ಬಂದ ತಕ್ಷಣ ವಾಹನ ಚಾಲಕರು, ನಮ್ಮೂರಿನಲ್ಲಿ ಅಷ್ಟು ಭಕ್ತಿಯಿಂದ ದಾರಿಯಲ್ಲಿ ಸಿಗುವ ದೇವಸ್ಥಾನಗಳಿಗೂ ನಿಂತು ನಮಸ್ಕಾರ ಮಾಡ್ತಾರೋ ಇಲ್ವೋ,STOP sign ಸಿಕ್ಕರೆ ವಾಹನ ನಿಲ್ಲಿಸಿ ಅಕ್ಕ ಪಕ್ಕ ನೋಡಿ ಮುಂದೆ ಹೋಗುತ್ತಾರೆ. ಇನ್ನು ಟ್ರಾಫಿಕ್ ಬೆಂಗಳೂರಲ್ಲಿ ಎಲ್ಲೂ STOP sign ಇರೋದೆ ಕಾಣೆ. ಇದ್ರೂ ಯಾರಾದ್ರೂ STOP signನಲ್ಲಿ ತನ್ನ ವಾಹನವನ್ನು ನಿಲ್ಲಿಸಿದ್ದೇ ಆದರೆ ಅವನು ಮೂರ್ಖ. ಯಾಕೇಂದ್ರೆ ಹಿಂದಗಡೆ ಇಂದ ಇನ್ನೊಬ್ಬ ಬಂದು ಹೊಡದಿರ್ತಾನೆ. ನೀವು ನಿಮ್ಮ ವಾಹನವನ್ನು ಬೆಂಗಳೂರಿನಲ್ಲಿ ಚಲಿಸುತ್ತಿರುವಾಗ observe ಮಾಡಿ ನೋಡಿ. ನೀವು ಮೈನ್ ರೋಡ್‌ನಲ್ಲಿ ಹೋಗ್ತಾ ಇದ್ರೆ ನಿಮ್ಮ ರಸ್ತೆಗೆ ಅಡ್ಡ ರಸ್ತೆಯಿಂದ ಬಂದ ವಾಹನ ನಿಮ್ಮ ಮುಂದೆ ಬಂದು ನೀವು ವಾಹನ ನಿಲ್ಲಿಸಬೇಕೆ ಹೊರತು, ಅಡ್ಡರಸ್ತೆಯಿಂದ ಬಂದವ ಸುಮ್ಮನೆ ಹಾರನ್ ಮಾಡಿಕೊಂಡು ಮುಂದೆ ಬರುತ್ತಾನೆ. ಅಪ್ಪಿ ತಪ್ಪಿ ಏನಾದರೂ ನಿಮ್ಮ ವಾಹನ ಅವನ ವಾಹನಕ್ಕೆ ಮುತ್ತಿಡಬೇಕು, "ಯಾಕ್ರೀ ಹಾರನ್ ಮಾಡಿದ್ದು ಕೇಳಿಸ್ಲಿಲ್ವಾ?" ಅಂತ ನಿಮ್ಮ ಮೇಲೆ ತಪ್ಪು ಕೂರಿಸುತ್ತಾನೆ. ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ?

ಯೂರೋಪ್, ಸಿಂಗಪೂರ್, ಅಮೆರಿಕ ದೇಶಗಳಲ್ಲಿ ಎಲ್ಲಾ ಕಟ್ಟಡಗಳಲ್ಲಿ Wheel Chair ವ್ಯವಸ್ಥೆ ಕಡ್ಡಾಯ. ಎಲ್ಲ ಕಡೆ ಸರಿಸಮನಾದ ವ್ಯವಸ್ಥೆ. ಎಲ್ಲೂ ಅಂಗವಿಕಲತ್ವದ ಭೇದ ಭಾವವಿಲ್ಲದ ಹಾಗೆ ವ್ಯವಸ್ಥೆ ಇರುತ್ತೆ. ನಮ್ಮ ಬಂಧುಗಳಲ್ಲಿ ಒಬ್ಬರಿಗೆ ಕಾಲಿನ ತೊಂದರೆಯಿಂದ ನಡೆಯಲು ತೊಂದರೆ, ಅವರಿಗೆ ಎಲ್ಲಿ ಹೋಗಬೇಕಾದರೂ Wheel Chairನ ಅಗತ್ಯವಿದೆ. ಅದಕ್ಕಾಗಿ ಅಮೆರಿಕೆಯಿಂದ ಒಂದು Wheel Chair ಕಳುಹಿಸಿದೆ. ಈ ಬಾರಿ ನಮ್ಮ ರಜೆಯಲ್ಲಿ ಬಂದು ನೋಡಿದರೆ ಇನ್ನೂ ಹೊಸದರ ಹಾಗೇ ಕಾಣಸ್ತಾ ಇತ್ತು. ಎಲ್ಲೂ ಓಡಾಡಿಲ್ಲವೇನೋ ನಾವೇ ಎಲ್ಲಾ ಕಡೆ ಕರ್ಕೊಂಡು ಹೋಗೋಣವೆಂದು ನೋಡಿದರೆ, ಆಸ್ಪತ್ರೆಯೊಂದನ್ನು ಬಿಟ್ಟರೆ ಎಲ್ಲೂ Wheel Chair ತಳ್ಳಲು ವ್ಯವಸ್ಥೆಯೇ ಇರಲಿಲ್ಲ. ದೇವಸ್ಥಾನಗಳಲ್ಲಾಗಲಿ, ಛತ್ರಗಳಲ್ಲಾಗಲಿ, ಚಿತ್ರಮಂದಿರಗಳಲ್ಲಾಗಲಿ ಎಲ್ಲೂ ಈ ವ್ಯವಸ್ಥೆಯನ್ನು ಕಾಣಲಿಲ್ಲ. ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ?

ಈ ಸಾರಿ ನಮ್ಮ ರಜೆಯಲ್ಲಿ ಒಂದ್ಸಾರಿ ಮೈಸೂರಿಗೆ ಹೋಗಿದ್ದೆ. ಪ್ರತಿ ರಜೆಯಲ್ಲಿ ಬಂದಾಗ ನಾನು ಹೋಗುತ್ತಿದ್ದಿದ್ದು ಟ್ರೈನ್‌ನಲ್ಲಿ. ಎಲ್ಲರೂ ಹೊಗಳಿ ನನ್ನನ್ನ ಐರಾವತ ಬಸ್ನಲ್ಲಿ ಮೈಸೂರ್ಗ್ ಕಳಿಸಿದ್ರು. ಸರಿ ನಾನೂ ಒಳಗಡೆ ಬಂದು ನೋಡ್ದೆ. ಪರ್ವಾಗಿಲ್ವೇ, ಅಮೆರಿಕದ Greyhoundಬಸ್ ತರಹಾನೇ ಇದೆಯಲ್ಲ. Air conditioned, Adjustable seat ಎಲ್ಲಾ ನೋಡೀ ಐರಾವತನ ಪ್ರಯಾಣ ಸುಖವಾಗಿರುತ್ತೆ ಅಂತ ಮನಸ್ಸಲ್ಲೇ ಅಂದ್ಕೊಂಡೆ. ಕಂಡಕ್ಟರ್ ಎಲ್ಲರಿಗೂ ನೀರಿನ ಬಾಟ್ಲು ತಂದ್ಕೊಟ್ಟ. ಅಬ್ಬಾ ಪ್ರಯಾಣ ಈ ಮಟ್ಟಕ್ಕೆ ಬಂದಿದೆಯಲ್ಲಾ, ನಮ್ಮ ವಿದೇಶಿ ಸ್ನೇಹಿತರಿಗೂ ಈ ಬಸ್‌ನ recommend ಮಾಡಬಹುದು ಅಂದ್ಕೊಂಡೆ.

ಸರಿ Bus stand ಬಿಡ್ತು ನೋಡಿ ಶುರುವಾಯ್ತು ಒಬ್ಬರು Cell phoneನಲ್ಲಿ ಜೋರಾಗಿ ಮಾತು, ಪಕ್ಕದ ಸೀಟ್ನಲ್ಲಿ ಇಬ್ಬರು ಜೋರಾಗಿ ಯಾವುದೋ ವ್ಯವಹಾರದ ಮಾತು. ಎಷ್ಟು ಅಂತ ಮಾತಾಡ್ತಾರೆ, ಸ್ವಲ್ಪ ದೂರ ಹೋದಮೇಲೆ ಎಲ್ಲರೂ ಮಲಕ್ಕೊಳ್ತಾರೆ ಅಂದ್ಕೊಂಡೆ. ಬಸ್ಸು ಬೆಂಗಳೂರ್ ಬಿಡ್ತು, ಬಿಡದಿ ಬಿಡ್ತು ನಿಲ್ಲಲ್ಲೇ ಇಲ್ಲ. ರಾಮನಗರದ ತನಕ ನೋಡ್ದೇ ಪಕ್ಕದಲ್ಲಿದ್ದೋರ್ಗೆ ಕೇಳ್ಕೊಂಡೆ ಸ್ವಲ್ಪ ಮೆತ್ತಗೆ ಮಾತಾಡಕ್ಕಾಗುತ್ತಾ ಅಂತ. ಇನ್ನು cell phone ಗೆ ಹ್ಯಾಗೆ ಬೀಗ ಹಾಕಲಿ. ನಿಮಷಕ್ಕೊಂದ್ಸಾರಿ ಯಾವುದೋ ಕನ್ನಡ ಹಾಡೋ, ಹಿಂದಿ ಹಾಡೋ ಹಾಡ್ಕೊಂಡು ಶುರುವಾಗ್ತಿತ್ತು ಸಂಭಾಷಣೆ ಜೋರಾಗಿ. ಅದೆ ಈ ಬಸ್ಸು ಬೆಂಗಳೂರಿಗೂ ಮೈಸೂರಿಗೂ ಮಧ್ಯದಲ್ಲಿ bio-break ಅಥವಾ Coffee Break ಅಂತ ಮದ್ದೂರಿನ ಹತ್ರ ನಿಲ್ಲಿಸೋದು ವಾಡಿಕೆ. ಈ ಬಸ್ಸಿನವ ತಗೊಂಡು ಹೋಗಿ ನೇರವಾಗಿ ಮದ್ದೂರು bus-stand ನಲ್ಲೇ ನಿಲ್ಲಿಸಿದ. ಮದ್ದೂರು ಅಂದ್ರೆ ಖುಷಿ ಆಗೋದು ಮದ್ದೂರು ವಡೆ. ನಮ್ಮ ಆಶ್ಚರ್ಯಕ್ಕೆ ಅಲ್ಲಿ ಮದ್ದೂರು ವಡೆ ಬಿಟ್ಟು ಉಡುಪಿ ಉದ್ದಿನ ವಡೆ ಇತ್ತು.

ಯಾಕಪ್ಪ ಮದ್ದೂರು ವಡೇ ಇಲ್ವ ಅಂದ್ರೆ, "ಸಾರ್ ಉಡುಪಿ ಕಾಂಟ್ರಾಕ್ಟರು, ಅವನಿಗೆ ಮದ್ದೂರು ವಡೆ ಮಾಡೋಕ್ಕೆ ಬರೋಲ್ಲಾ" ಅನ್ನಬೇಕೆ ನಮ್ಮ ಕಂಡಕ್ಟರ್. ಅದಕ್ಕಿಂತ ಹೆಚ್ಚಾಗಿ ಕಾಫಿ ಕುಡಿಯೋಕೆ ಅಂತ ಕೂಪನ್ ತಗೊಂಡ್ ಹೋದ್ರೆ ತುಂಬಾ ಜನ ಇದ್ರು, ಸರಿ ನಾನೂ ಲೈನ್‌ನಲ್ಲಿ ಕಡೇಲಿ ನಿಂತ್ಕೊಂಡೆ. ಎಷ್ಟು ಹೊತ್ತಾದ್ರೂ ಲೈನ್ ಮುಂದೇ ಹೋಗಲೇ ಇಲ್ಲ. ಎಲ್ಲರೂ ನುಗ್ಗಿ ನುಗ್ಗಿ ಮುಂದೆ ಕೈ ನೀಡಿ ಕಾಫಿ ತಗೋತಾ ಇದ್ರು. ನಾನೂ ಎಲ್ರೂ ತಗೊಂಡ್ಮೇಲೆ ತಗೊಂಡು ಕಾಫಿ ಹಿಡ್ಕೊಂಡು ಬರೋ ಹೊತ್ತಿಗೆ, ಇನ್ನೊಂದು ಬಸ್ಸಿನ ಜನ ಹಾಜರ್ ಜೇನು ನೊಣದ ತರಹ. ಕಷ್ಟ ಪಟ್ಕೊಂಡು ಬಿಸಿ ಬಿಸಿ ಕಾಫಿ ಕಪ್ ಹಿಡ್ಕೊಂಡು ಬಂದ್ರೆ, ನಮ್ಮ ಗಾಡಿ driver ಆಗಲೇ horn ಮಾಡ್ತಾ ಗಾಡಿ start ಮಾಡೇ ಬಿಟ್ಟ. ಆ ಬಿಸಿಗೆ ನನ್ನ ಕಾಫಿ ಕಪ್ಪು ಕರಗ್ತಾ ಇತ್ತು, ಅಷ್ಟು ಅವಸರದಲ್ಲಿ ಕುಡೀಯೊಕು ಆಗ್ತಿರಲಿಲ್ಲ. ಅಲ್ಲೇ ಕಸದ ಬುಟ್ಟಿಗೆ ಹಾಕಿ ಗಾಡಿ ಹತ್ತಿದೆ. ಅದೇ ಅಮೆರಿಕದ Greyhound ಬಸ್‌ನಲ್ಲಿ ಪ್ರಯಾಣ ಮಾಡಿ, ಅಕ್ಕ ಪಕ್ಕದ ಸೀಟ್ನೋರು ಸಹ ಎಷ್ಟು ಮೆತ್ತಗೆ ಮಾತನಾಡ್ತಾರೆ ಅಂದ್ರೆ ಪಕ್ಕದಲ್ಲಿರೋನಿಗೇ ಕೇಳ್ಸಿರೋಲ್ಲ. cell phone ತನ್ನ ಮೌನ ಸ್ಥಿತಿಯಲ್ಲಿರುತ್ತೆ ಅಥವ ನಡುಕ ಸ್ಥಿತಿಯಲ್ಲಿರುತ್ತೆ. ಈ ಪಾಠಾನ ಎಲ್ಲೂ ಹೇಳ್ಕೊಡೋಲ್ಲ. ಅವರಿಗೆ ಅವರೇ ಮಾಡ್ಕೋತಾರೆ. ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ?

ಗರುಡ ಮಾಲಿನ ಒಂದು ಪ್ರಸಂಗ ಹೇಳಲೇ ಬೇಕು. ಎರಡನೇ ಅಂತಸ್ಥಿನಲ್ಲೋ ಮೂರನೇ ಅಂತಸ್ಥಿನಲ್ಲಿ ಬಾಗಿಲಲ್ಲೇ ಒಂದು ದೊಡ್ಡ ಜಾಹಿರಾತಿನ ಫಲಕ ಇತ್ತು. ಅದರ ಹತ್ತಿರಾನೇ ಒಂದು ಪ್ರಕಟನೆಯನ್ನೂ ಹಾಕಿದ್ದರು. “Photography Prohibited"ಅಂತ. ಬಾಗಿಲಲ್ಲೇ ಗಾರ್ಡೂ ನಿಂತಿದ್ದ. ಇಬ್ಬರು ಹುಡುಗರು ಆ ಜಾಹಿರಾತಿನ ಮುಂದೆ ನಿಂತ್ಕೊಂಡು Photo ತೆಗಸ್ಕೊಳ್ಳೋಕೆ ನೋಡ್ತಾ ಇದ್ರು. ತಕ್ಷಣ ಗಾರ್ಡ್ ಬಂದು "Photo ತಗೋ ಬಾರ್ದು ಸಾರ್" ಅಂದ. ಹುಡುಗ್ರು ಮೊದಲು ಒಂದೇ Photo ಏನೂ ಆಗೋಲ್ಲಾ ಅಂತ ವಾದಿಸಿದರು, ಆಮೇಲೆ ಗಾರ್ಡಿಗೇ ರೋಪು ಹೋಡದ್ರು "ನಾವು ಯಾರು ಅಂತ ಗೋತ್ತೇನೋ? ಅಂಗಡಿ ಎತ್ತಿಸ್ಬಿಡ್ತೀನಿ" ಅಂತ. ಆಗ ಗಾರ್ಡ್ ಪಾಪ ಸುಮ್ಮನೆ ಇದ್ದ. ಇಂತ ಗೂಂಡಾಗಿರಿಯೋ ಬರೀ ರೋಪೋ ನಾನು ಎಲ್ಲೂ ನೋಡೀಲ್ಲ, ಬೆಂಗಳೂರು ಬಿಟ್ಟು. ಅಮೆರಿಕಾದಲ್ಲಿ ಆಗ್ಬೇಕಿತ್ತು, ತಕ್ಷಣ security ಬಂದು, ಹಿಡ್ಕೊಂಡು, Policeಗೆ phone ಮಾಡಿ ಆ ಹುಡುಗರು ಕಂಭಿ ಎಣಿಸೋದೆ ಅಲ್ಲ, Local TV channelಗಳಲ್ಲೆಲ್ಲಾ ಪ್ರಸಾರ ಅಗ್ಬಿಡ್ತಿತ್ತು. ಹಿಂಗ್ಯಾಕೆ ನಮ್ಮೂರಲ್ಲೇ ಆಗುತ್ತೆ?

ಪರದೇಶದ ಮಣ್ಣಿಗೆ ಕಾಲಿಟ್ಟ ತಕ್ಷಣ ನಮ್ಮ wave lengthಚೇಂಜ್. smart ಆಗ್ಬಿಡ್ತೀವಿ. ನಾಚಿಕೆ ಸ್ವಭಾವ ಬರುತ್ತೆ. ಇದ್ದಕ್ಕಿದ್ದ ಹಾಗೆ ಬೇರ್ಯೋರ್ಗೆ ಗೌರವ ಕೊಡ್ತೀವಿ. ಇದು ಒಂದು ರೀತಿ ಬಂಧನಾನೋ ಅಥವಾ ನಮ್ಮ ಸ್ವಾತಂತ್ರ್ಯ ಕಳ್ಕೋಳ್ತೀವೋ? ಯಾವುದು ಸರಿ ಯಾವುದು ತಪ್ಪು? ಅಲ್ಲಯ್ಯಾ ಈ ಊರಗಳಲ್ಲಿ ಬಂದ್ರೆ ನಮಗೆ ಏನಯ್ಯ ಸ್ವಾತಂತ್ರ್ಯ ಇಲ್ಲದ ಹಾಗೆ ಇರ್ತೀವಿ. ಅದೇ ನಮ್ಮೂರಲ್ಲಿ ನೋಡು ಏನು ಧೈರ್ಯವಾಗಿ ನಾವು ಏನ್ಬೇಕಾದ್ರೂ ಮಾಡ್ಕೊಂಡ್ ಇರ್ಬೋದು ಎನ್ನೋದು ಒಂದು theory. ಇನ್ನೊಂದು theory, ನಮ್ಮೂರ್ನೋರ್ಗೆ ಈ ಬುದ್ದಿ ಯಾವಾಗ್ ಬರುತ್ತೋ? ಇಲ್ಲಿ ಜನ ಏನಯ್ಯಾ ಎಷ್ಟು ನಯವಾಗಿ ಮಾತನಾಡಸ್ತಾರೆ? ನಿಂಗೆ ಪರಿಚಯ ಇರ್ಲಿ ಬಿಡ್ಲಿ good morning, good evening ಹೇಳಿ ಎಷ್ಟು ನಯವಾಗಿ ನಗುಮುಖ ಮಾಡ್ತಾರೆ.

ಈಗ ಯಾವ theory ನಂಬಬೇಕು ಹೇಳಿ. ಅಮೆರಿಕದೆಲ್ಲಾ ಒಳ್ಳೇದು ಅಂತ ಹೇಳ್ತಿಲ್ಲಾ, ಹಂಸ ಕ್ಷೀರ ನ್ಯಾಯದ ತರಹ coke, pizza ಹಾದಿ ಹಿಡಿಯೋಕ್ಕಿಂತ ಅವರಿಲ್ಲಿರೋ ಒಳ್ಳೆ ಗುಣಗಳನ್ನ ನಾವು ಯಾಕೆ ಆಯ್ಕೆ ಮಾಡ್ಕೊಳ್ಳೋಲ್ಲಾ ಅನ್ನೋದೇ ನನ ಚಿಂತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more