• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ತೂಕ ಇಳಿಸೋ ಡೊಳ್ಳು ಹೊಟ್ಟೆಯ ಗಣಪ

By Staff
|

"ನೀನೇನೋ ಹಾಗನ್ನುತ್ತೀಯ ಸರಿ. ಆದರೆ ನಾನು ಅಲ್ಲಿ ದೇವಲೋಕದಲ್ಲಿ ಎಷ್ಟು ಜನರ ಲೇವಡಿ, peer pressureಊ ಸಹಿಸಬೇಕು ಗೊತ್ತೇನು?" ಗಣೇಶನ ಅಸಹನೆ ಎತ್ತಿ ಕಾಣಿಸುತ್ತಿತ್ತು.

"ಆಂ! ನೀನು ಸರ್ವ ಶಕ್ತನಾದ ಸ್ವಾಮಿ. ನಿನ್ನನ್ನು ಹಾಸ್ಯ ಮಾಡಿದವರು ಉಳಿಯುವರೇ? ನೀನು ಚಂದ್ರನಿಗೆ ಶಾಪ ಕೊಡಲಿಲ್ಲವೇ? ಹಾಗೆಯೇ ಬೇರೆಯವರಿಗೂ ಹೆದರಿಸಿದರೆ ಆಯ್ತು." ಅಂದೆ.

"ಅಯ್ಯೋ, ಎಂದೋ ಹುಡುಗುತನದಲ್ಲಿ ನಾನು ಕೊಟ್ಟ ಆ ಒಂದು ಶಾಪವನ್ನು ಈ ಭೂಲೋಕದ ಜನರು, ಪ್ರತಿ ಗಣಪತಿ ಹಬ್ಬದಲ್ಲೂ ಎಡೆಬಿಡದೆ ಪ್ರಚಾರ ಮಾಡಿ, ನಾನು ಅಪನಿಂದೆಗೆ ಗುರಿಯಾಗಿದ್ದೇನೆ. ದೇವಲೋಕದಲ್ಲಿ, ನನ್ನ ತಂದೆ ತಾಯಿ ಹೆದರಿ, ನನ್ನನ್ನು anger management courseಗೆ ಸೇರಿಸಿದರು ಗೊತ್ತಾ ನಿನಗೆ? ಅಲ್ಲಿ, ಅದೇನೋ ನಮ್ಮ ತಂದೆ ಈಶ್ವರ ಚಿಕ್ಕಂದಿನಲ್ಲಿ ನನ್ನನ್ನು reject ಮಾಡಿ ತಲೆ ಕಡಿದಿದ್ದರಿಂದ ನನಗೆ abandonment issues ಇದೆ. ಆದ್ದರಿಂದ ಕೋಪ ಮಾಡ್ಕೋತೇನೆ ಅಂತೆಲ್ಲ ತಲೆ ಕೊರೆದು ಕಳಿಸಿದ್ರು. ಸದ್ಯ, ಸಾಕಾಗಿಹೋಯಿತು. ನಾನು ಮತ್ಯಾವ ಶಾಪವೂ ಕೊಡೋದಿಲ್ಲಪ್ಪ" ಗಣೇಶ ನೊಂದುಕೊಂಡ.

ಛೇ, ಪಾಪ, ನನ್ನ ಇಷ್ಟ ದೈವ ಇಷ್ಟೆಲ್ಲಾ ಕಷ್ಟ ಅನುಭವಿಸುವುದು ಕೇಳಿ ಬಹಳ ಬೇಜಾರಾಯಿತು.

"ಗಣೇಶ, ನಾನು ನಮ್ಮ ಹುಲುಮನುಜರ ಪರವಾಗಿ sorry ಕೇಳುತ್ತೇನೆ. ಇನ್ಮೇಲೆ ನನ್ನ ಬೇಡಿಕೆಗಳನ್ನು ಖಂಡಿತ ಕಡಿಮೆ ಮಾಡುತ್ತೇನೆ. ಹಾಗೆಯೇ ಮಾಡಲು ನನ್ನ ಗೆಳತಿಯರಿಗೂ ತಿಳಿಸುತ್ತೇನೆ. ಕ್ಷಮಿಸಿಬಿಡಪ್ಪ" ಎಂದು ಜೋರಾಗಿ ಬೇಡಿಕೊಂಡೆ. ಮನಸ್ಸಿನಲ್ಲೇ, ಗಣೇಶನ ಹಬ್ಬದ ದಿನ ಹೆಚ್ಚಾಗಿ ಇಪ್ಪತ್ತೊಂದು ಕಡುಬು ನೇವೈದ್ಯ ಮಾಡ್ಬೇಕು ಅಂತ ಅಂದುಕೊಳ್ಳುವಷ್ಟರಲ್ಲಿ ಗಣೇಶ, ನನ್ನ ಮನಸ್ಸನ್ನು ಅರಿತವನಂತೆ, "ನೋಡಮ್ಮ, ನೀನು ಸ್ವಲ್ಪ ಕಡುಬು ಮಾಡುವುದನ್ನು ಸರಿಯಾಗಿ ಕಲಿತುಕೋ ತಾಯಿ. ಹಿಂದಿನ ವರ್ಷ ನೀನು ಕೊಟ್ಟ ಕಡುಬು ತಿಂದು, ನನ್ನ ಒಂದೂವರೆ ಹಲ್ಲೂ ಜಖಂ ಆಗಿ, ದಂತ ವೈದ್ಯರನ್ನು ಹುಡುಕಿಕೊಂಡು ಅಲೆದಾಡಬೇಕಾಯಿತು" ಎಂದು ಇನ್ನೊಂದು ಆಪಾದನೆ ಸೇರಿಸಿದ.

ಈಗಂತೂ ನನಗೆ ನಿಜಕ್ಕೂ ಅಳು ಬಂತು. ಹಿಂದಿನ ವರ್ಷ, ನಾನು ಯಾವುದೋ fat free recipe ತೊಗೊಂಡು ಕಡುಬನ್ನು ಎಣ್ಣೆಯಲ್ಲಿ ಕರಿಯದೆ ovenನಲ್ಲಿ bake ಮಾಡಿ, ಅದು ಕಲ್ಲಿನಂತೆ ಗಟ್ಟಿಯಾಗಿದ್ದು ಮನೆ ಮಂದಿಯಲ್ಲ ಹಲ್ಲು ನೋವೆಂದು ಅತ್ತಿದ್ದೇನೋ ನಿಜ. ಆದರೆ ಗಣೇಶ ಸಹ ನನ್ನ ಕಡುಬು ತಿನ್ನುತ್ತಾನೆಂದು ನನಗೆ ಗೊತ್ತಿರಲೇ ಇಲ್ಲ. ಛೇ! ಛೇ! ಎಂತಹ ಪಾಪದ ಕೆಲಸ ಮಾಡಿದೆ. "ಅಯ್ಯೋ ದೇವರೇ! ನಿನಗೆ ಉದ್ಧಂಡ ನಮಸ್ಕಾರಗಳು. ಈ ಸರ್ತಿ ಖಂಡಿತ ಕಡುಬನ್ನು ಎಣ್ಣೆಯಲ್ಲಿ ಕರಿಯುತ್ತೇನೆ. ತಿಳಿಯದೇ ಮಾಡಿದ ತಪ್ಪನ್ನು ಮನ್ನಿಸು ದೇವ" ಎಂದೆಲ್ಲ ಬಡಬಡಿಸಿದೆ.

ಗಜಪತಿಯು ಕೊನೆಗೂ ಸೌಮ್ಯವದನನಾಗಿ, "ಏಳು ಬಾಲೆ, ನಾನು ಪ್ರಸನ್ನನಾದೆ. ಯಾವುದಾದರೂ ಒಂದು ವರವನ್ನು ಬೇಗ ಕೇಳು" ಅನ್ನುತ್ತಲೇ ನನಗೆ ಎಲ್ಲಿಲ್ಲದ ಆನಂದವಾಯಿತು. ವರ ಕೊಡುವ ವಿಚಾರ ಬಿಡಿ, ಆದರೆ, ಎರಡು ಮಕ್ಕಳ ತಾಯಿಯಾದ ನಾನು ಗಣೇಶನ ಕಣ್ಣಿಗೆ ಬಾಲೆಯ ಹಾಗೆ ಕಂಡಿದ್ದು ಹೆಮ್ಮೆಯ ವಿಷಯವೇ ಸರಿ. ಸಕತ್ತು ಖುಷಿಯಲ್ಲಿ ಕೇಳಿದೆ, "ಜೀವನದಲ್ಲಿ ಒಂದೇ ಒಂದು ವರ ದಯಪಾಲಿಸು ಸಾಕು ಬೆನಕ. ನಾನೆಷ್ಟು ಎಣ್ಣೆ ಪದಾರ್ಥ ತಿಂದರೂ ಒಂದು ಪೌಂಡೂ ಸಹ ದಪ್ಪಗಾಗದಿರುವಂತೆ ಹರಸು, ಇನ್ನೇನೂ ಬೇಡ".

ಗಣೇಶ ತಲೆಯಲ್ಲಾಡಿಸುತ್ತಾ, "ನೋಡಮ್ಮ, ಆ ಒಂದು ವರ ಮಾತ್ರ ನನ್ನನ್ನು ಕೇಳ್ಬೇಡ. ಹಲವಾರು ಯುಗಗಳು ತಪಸ್ಸು ಮಾಡಿದರೂ ಸಿಗದಂತಹ ವರ ಅದು. ಜೊತೆಗೆ ಯಾರಿಗೆ ಬೇಡವೋ ಅವರಿಗೆ ಮಾತ್ರ ಸಿಗುವ ವರ ಅದು. ಈ ವರವನ್ನು ನಿತ್ಯ ಬೇಡುವ ಬಾಲಿವುಡ್, ಹಾಲಿವುಡ್ ನಟಿಯರ ಉದ್ದ ಪಟ್ಟಿಯೇ ನನ್ನ ಬಳಿ ಇದೆ. ಸರಿ, ಸರಿ, ನನಗೆ ಬೇರೆ ಕೆಲಸವಿದೆ. ನೀವುಗಳು ಹಬ್ಬದಲ್ಲಿ ನನ್ನ ಬಾಯಿಗೆ ತುರುಕುವ ಕಡುಬು, ಮೋದಕ, ಇವುಗಳನ್ನು ಜೀರ್ಣಿಸಿಕೊಳ್ಳುವುದಕ್ಕೆ ನಾನೊಂದಿಷ್ಟು bench pressಮಾಡ್ಬೇಕು. ನನ್ನ ತೂಕ maintain ಮಾಡುವುದರಲ್ಲೇ ನನಗೆ ಸಾಕಾಗುತ್ತದೆ. ಇನ್ನು ನಿನ್ನ ಬಗ್ಗೆ ಎಲ್ಲಿಂದ ಯೋಚಿಸಲಿ?" ಎಂದು weights ಎತ್ತತೊಡಗಿದ.

ನನ್ನ ಪ್ರೀತಿಯ ಗಣೇಶನೂ ನನ್ನ ಕೈ ಬಿಟ್ಟ ಮೇಲೆ ನಾನು ಬೇರಾವ ದೇವರಲ್ಲಿ ಮೊರೆಯಿಡಲಿ ಎಂದು ಹತಾಶಳಾಗಿ ಗಣೇಶ! ಗಣೇಶ! ಎಂದು ಕೂಗುತ್ತಿರುವಂತೆ, ನನ್ನ ಗೆಳತಿ ಮಾಲಾಳ ಧ್ವನಿ ಕೇಳಿಸಿತು, "ಏನೇ ಮಾರಾಯ್ತಿ, ಮುಂಗಾರು ಮಳೆ ಹೀರೋ ಹೆಸರು ಹೀಗ್ಯಾಕೆ ಕನವರಿಸುಕೊಳ್ಳುತ್ತಿದ್ದೀಯಾ? ಏಳೇ ಮೇಲೆ, ತಲೆ ಗಿಲೆ ಪೆಟ್ಟಾಯಿತೋ ಹೇಗೆ?".

ಕಣ್ಣು ಬಿಟ್ಟರೆ ತಿಳಿಯಿತು. ಕುಳಿತಿದ್ದ ದೊಡ್ಡ ಚೆಂಡಿನ ಮೇಲಿಂದ balance ತಪ್ಪಿ ಹಿಂದಕ್ಕೆ ಬಿದ್ದಿದ್ದೆ. ಇಷ್ಟು ಹೊತ್ತು ನಡೆದದ್ದು ನಿಜವೋ ಸುಳ್ಳೋ ತಿಳಿಯಲಿಲ್ಲ. ಬಹುಶಃ ಗಣೇಶನೂ ಬಗೆಹರಿಸಲಾರದಂತಹ ನನ್ನ ತೂಕ ಇಳಿಸುವ ಪ್ರಶ್ನೆ, ನನ್ನ ಲೈಫ್‌ ಪೂರ್ತಿ ತೂಕದ ಪ್ರಶ್ನೆಯಾಗಿಯೇ ಉಳಿಯುತ್ತೆ ಅಂದುಕೊಳ್ಳುತ್ತ ತೆಪ್ಪಗೆ ಮನೆಯತ್ತ ತೆರಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X