• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ತೂಕ ಇಳಿಸೋ ಡೊಳ್ಳು ಹೊಟ್ಟೆಯ ಗಣಪ

By Staff
|

ಬೊಜ್ಜು ಇಳಿಸಲು ನರಮಾನವರು ಪರದಾಡುವುದು ಸಾಮಾನ್ಯ. ಅದರಲ್ಲೂ ಸಿನಿಮಾ ನಟಿಯರಂತೂ ಬಳ್ಳಿಯಂತೆ ಬಳುಕಲು ಸದಾ ಏನೇನನ್ನೋ ಮಾಡುತ್ತಿರುತ್ತಾರೆ. ಈ ಬೊಜ್ಜು ಇಳಿಸೋ ಕಷ್ಟ ಗಣಪತಿಗೂ ತಪ್ಪಿಲ್ವಂತೆ. ನಂಬಿಕೆ ಬರದಿದ್ದರೆ, ಈ 24 ಕ್ಯಾರೆಟ್ ಹಾಸ್ಯ ಲೇಖನ ಓದಿ. ಓದುತ್ತಾ ಓದುತ್ತಾ, ನಕ್ಕುನಕ್ಕು ಸುಸ್ತಾದರೆ ನಾವು ಜವಾಬ್ದಾರರಲ್ಲ!

ಜ್ಯೋತಿ ಶೇಖರ್‌, ಉತ್ತರ ಕ್ಯಾಲಿಫೋರ್ನಿಯ

ಹಲವಾರು ಮಹಿಳೆಯರಂತೆ, ತಾರುಣ್ಯಕ್ಕೆ ಕಾಲಿಟ್ಟಾಗಿನಿಂದ ನನ್ನ ತೂಕದ ಜೊತೆ ನನಗೊಂಥರ love-hate relationship ಇದೆ. ಹೀಗಾಗಿ, ಮೈ ತೂಕ ಸರಿದೂಗಿಸಲು ನಾನು ಪಾಲಿಸದ dietಗಳಿಲ್ಲ, try ಮಾಡದ exerciseಯೇ ಇಲ್ಲ ಅಂತಲೇ ಹೇಳಬಹುದು. Atkins, South beach ಇತ್ಯಾದಿ ಡಯಟ್ಟುಗಳು ನೀರು ಕುಡಿದಂತೆ ಗೊತ್ತು. ಇನ್ನು, ಯೋಗ, pilates, bollywood aerobics ಇವುಗಳನ್ನೂ ಮಾಡಿ ಕತ್ತು ಉಳುಕಿಸಿಕೊಂಡಿದ್ದಾಗಿದೆ. ಹೀಗಿರುವಾಗ, ಹೊಸದಾಗಿ ನಮ್ಮ ಮನೆಯ ಹತ್ತಿರ ಒಂದು fitness center ಶುರುವಾಗಿದೆ, ಅದರ ಉದ್ಘಾಟನೆ ಮಾಡೋಣ ಬರ್ತೀಯಾ? ಎಂದು ಗೆಳತಿ ಮಾಲಾ ಕೇಳ್ದಾಗ ಇಲ್ಲ ಅಂತೀನ್ಯೇ? ಸರಿ, ಒಳ್ಳೆಯ ಮುಹೂರ್ತ ನೋಡಿ, ಇಬ್ಬರೂ ಅಲ್ಲಿಗೆ ಕಾಲಿಟ್ಟೆವು.

ಮೇಲಿಂದ ಕೆಳಗೆ ಕನ್ನಡಿಗಳುಳ್ಳ ಝಗ ಝಗಿಸುವ ದೊಡ್ಡ ಹಾಲಿನಲ್ಲಿ ವ್ಯಾಯಾಮ ಉಪಕರಣಗಳನ್ನು ನೀಟಾಗಿ ಜೋಡಿಸಿದ್ದರು. ಸಲ್ಮಾನ್ ಖಾನನ್ನು ನಾಚಿಸುವಂತಹ ಮೈಕಟ್ಟಿದ್ದ ಅಲ್ಲಿನ personal trainer ನಮಗೆ ಒಂದು ಗಂಟೆಯ ಬಿಟ್ಟಿ ಉಪದೇಶ ಕೊಟ್ಟ. ಅವನು ಹೇಳಿಕೊಟ್ಟ ಎಲ್ಲ exercisesಊ ನಮಗೆ ಗೊತ್ತಿದ್ದರೂ, ಬಿಟ್ಟಿ ಎಂದ ಮೇಲೆ ಭಾರತೀಯರಾದ ನಾವು ಅದನ್ನು ಉಪಯೋಗಿಸದೆ ಬಿಡಲು ಸಾಧ್ಯವೇ ? ಸರಿ, ನಾನೂ ಮಾಲಾ ಒಂದೊಂದೇ ಉಪಕರಣಗಳನ್ನು ಬಳಸುತ್ತಾ ಬಂದೆವು.

ಅಲ್ಲೇ ಇದ್ದ ದುಂಡನೆಯ ದೊಡ್ಡ ಚೆಂಡಿನ ಮೇಲೆ ಕೂತು ಕಾಲಿನ ಸ್ನಾಯುಗಳನ್ನು ಬಿಗಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಫಳಕ್ಕೆಂದು ಪೂರಾ gymnasium ಬೆಳಕಿನಿಂದ ಕೋರೈಸತೊಡಗಿತು. ಹಾಂ! ಇದೇನು ಎಂದು ಕಣ್ಣು ಕಿರಿದುಗೊಳಿಸಿ ನೋಡಿದರೆ, ಊಹೆಗೂ ನಿಲುಕದ ವಿಷಯ. ನನ್ನ ಪ್ರೀತಿಯ ಪರಮಾತ್ಮ ಗಣೇಶ treadmill ಮೇಲೆ ಬೆವರು ಸುರಿಸುತ್ತಿದ್ದಾನೆ! ಅಯ್ಯೋ ಕಲಿಗಾಲವೇ, ನನ್ನ ಗಣೇಶನಿಗೂ ನನಗೆ ಬಂದ ಗತಿಯೇ ಬಂದಿತೇ ಎಂದು ಹತ್ತಿರ ಹೋಗಿ ವಿಚಾರಿಸಿದೆ.

"ಅಪ್ಪಾ, ತಂದೆ ಗಣೇಶ, ಶರಣು, ಶರಣು! ನಿನ್ನನ್ನು ಇಲ್ಲಿ ನೋಡುತ್ತಿರುವುದು ಪರಮಾಶ್ಚರ್ಯವೇ ಸರಿ. ನಮ್ಮಂತಹ ಪಾಮರರ ಜೊತೆಯಲ್ಲಿ ನೀನೂ ಸಹ ಇಲ್ಲಿ ಬೊಜ್ಜು ಇಳಿಸಲು ಬಂದಿರುವ ಗುಟ್ಟು ನನಗೆ ನಿಜಕ್ಕೂ ಅರ್ಥವಾಗುತ್ತಿಲ್ಲ. ಇದೇನು ಲೀಲೆ, ಸ್ವಲ್ಪ ಬಿಡಿಸಿ ಹೇಳಪ್ಪ?" ಎಂದೆ.

ಬೆವರು ಒರೆಸಿಕೊಳ್ಳುತ್ತ, treadmillನ cooldown button ಒತ್ತಿ ಗಣಪತಿ ನುಡಿದ, "ಲೀಲೆ ಗೀಲೆ ಎಂತಾದ್ದೂ ಇಲ್ಲಮ್ಮ. ಇದೆಲ್ಲಾ ನಿನ್ನಂತಹ ಭಕ್ತಾದಿಗಳ ಅತಿಯಾದ ಭಕ್ತಿಯ ಕೃಪೆ, ಅಷ್ಟೇ".

ಇದನ್ನು ಕೇಳಿ ನಾನು ಹೌಹಾರಿದೆ. ನನ್ನ ಮೈಯಲ್ಲಿ ಕೊಬ್ಬನ್ನು ಇಳಿಸು ಗಣೇಶ ಅಂತ ಬೇಡಿದ್ದೇನೋ ನಿಜ. ಆದರೆ, ಇದು ಗಣೇಶನನ್ನು gymಗೇ ಕರೆತಂತೆ?

ನನ್ನ ಗೊಂದಲ ನೋಡಿ ಗಣೇಶನೇ ಹೇಳಿದ, "ಅರ್ಥವಾಗಲಿಲ್ವೇ? ನೋಡಮ್ಮ, ನೀನು ಯಾವತ್ತಾದರೂ ಯಾವುದೂ ಬೇಡಿಕೆಯಿಲ್ಲದೆ ನನಗೆ ನಮಿಸಿದ್ದೀಯ, ಹೇಳು? ಏನೋ ಒಂದು ಕೇಳುತ್ತಲೇ ಇರ್ತೀಯಾ ಅಲ್ವ? ಅಮೇರಿಕೆಗೆ ಬಂದಾಗ green card ಬೇಕೆಂದೆ. ಅದು ಕೊಡಿಸಿದರೆ, ಒಳ್ಳೆ ಕೆಲಸ, ಮನೆ, ಮಕ್ಕಳು ಎಲ್ಲಾ ಬೇಕೆಂದೆ. ಹೂಂ, ಅದೂ ಆಗಲಿ ಎಂದು ತಥಾಸ್ತು ಎಂದೆ. ಸರಿ, ಈಗಲಾದರೂ ನಿನಗೆ ನೆಮ್ಮದಿ ಇದೆಯೋ? ಇಲ್ಲ, ಇಷ್ಟೆಲ್ಲಾ ದೊರಕಿದ ಮೇಲೆ ಈಗ ಭಾರತಕ್ಕೆ ಹಿಂತಿರುಗುವ ಹವಣಿಕೆ ಶುರುವಾಗಿದೆ. ಅದಕ್ಕೆ ಈಗಾಗಲೇ ನನ್ನ ಹತ್ತಿರ application ಹಾಕಿದ್ದೀಯಲ್ವ?" ಎಂದ.

ಇದು ಕೇಳಿ ನನಗೆ ಒಂಥರ ಅವಮಾನನೇ ಆಯ್ತೂನ್ನಿ. ಯಾಕೆಂದರೆ, ದೇವರ ಮುಂದೆ ನಿಂತಾಗ ಚೌಕಾಸಿಯೇನು ಅಂತ, ಮನಸ್ಸಿಗೆ ಬಂದ ಸಾವಿರ ಬೇಡಿಕೆಗಳನ್ನೂ ಹೊರಚೆಲ್ಲಿರುತ್ತೀವಿ. ಒಂದಲ್ಲದಿದ್ದರೆ ಇನ್ನೊಂದನ್ನು ದಯಪಾಲಿಸಬಹುದು ಎಂಬ ದೂರಾಲೋಚನೆಯಿಂದ. ಹಾಗಂತ, ಆ ದೇವರು ನಿಜಕ್ಕೂ ಪ್ರತ್ಯಕ್ಷವಾಗಿ ನಮ್ಮನ್ನು ದಬಾಯಿಸಿದರೆ ಹೇಗೆ ? ಆದರೂ ಸಾವರಿಸಿಕೊಂಡು ಸವಾಲೆಸೆದೆ, "ಅಲ್ಲಪ್ಪ, ಗಣೇಶ, ಭಾರತಕ್ಕೆ ಹಿಂತಿರುಗಿ ನನ್ನ ತಾಯ್ನಾಡಿಗೆ ಸೇವೆ ಸಲ್ಲಿಸಿದರೆ ಏನು ತಪ್ಪು?"

ಗಜಮುಖ ನನ್ನೆಡೆಗೆ ಅಯ್ಯೋ ಪೆದ್ದಿ! ಎನ್ನುವ ಅನುಕಂಪದ ದೃಷ್ಟಿ ಬೀರಿ ನುಡಿದ, "ತಾಯಿ, ನೀನು ಹಿಂತಿರುಗೋದು ತಪ್ಪಲ್ಲ. ಆದರೆ, ನನಗೆ ಗೊತ್ತು, ನೀನು ಅಲ್ಲಿ ಹೋದ ಮೇಲೂ ತೃಪ್ತಿಯಾಗಿ ಕೂತಿರಲ್ಲ. ಎರಡು ದಿವಸವಾದ ಕೂಡಲೇ, ಅಲ್ಲಿನ pollution, corruption, ಅದೂ, ಇದೂ, ಅಂತ ಎಲ್ಲವನ್ನೂ ಅಮೆರಿಕೆಗೆ ಹೋಲಿಸಿ ಬದಲಿಸಲು ಶುರು ಮಾಡುತ್ತೀಯ. ಸರಿ, ಮಕ್ಕಳಿಗೆ ಸ್ಕೂಲಲ್ಲಿ ಸೀಟ್ ಕೊಡಿಸಪ್ಪ, ಒಳ್ಳೇಯ ಮನೆ, ಸೈಟು cheap rateನಲ್ಲಿ ಸುಸೂತ್ರವಾಗಿ ಕೊಡಿಸಪ್ಪ ಎಂಬ ಮೊರೆಗಳು ದಿನಕ್ಕೊಂದರಂತೆ ಶುರು. ನೀವು NRIಗಳು ಒಂದು ಕಡೆ ಸುಮ್ನೆ ಇರೊಲ್ಲ. ಅಮೇರಿಕೆಯಲ್ಲಿ ಭಾರತ ಸ್ಥಾಪಿಸಲು ನೋಡುತ್ತೀರ, ಭಾರತವನ್ನು ಅಮೇರಿಕೆಯಾಗಿ ಪರಿವರ್ತಿಸಲು ಹವಣಿಸುತ್ತೀರ. ಹೀಗಾಗಿ, ನಿಮ್ಮ ಬೇಡಿಕೆಗಳ ಪಟ್ಟಿ ನನ್ನ ಗೆಳೆಯ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಅವುಗಳನ್ನು ಪೂರೈಸಲು ಹೆಣಗಾಡುತ್ತಾ ನನ್ನ stress level ಏರುತ್ತಲೇ ಹೋಗುತ್ತದೆ. ಈ ಹಾಳು stressನಿಂದಲೇ ನಿನ್ನ ಮೈ ತೂಕ ಹೆಚ್ಚುತ್ತಿರುವುದು, ತೂಕ ಇಳಿಸದಿದ್ದರೆ ಖಾಯಿಲೆಗಳು ಖಂಡಿತ ಎಂದು ನನ್ನ ವೈದ್ಯರು ಮೊನ್ನೆ ತಾನೇ ಎಚ್ಚರಿಸಿದ್ದಾರೆ. ಆದ್ದರಿಂದಲೇ ನಾನು ಇಷ್ಟೆಲ್ಲಾ ಕಷ್ಟ ಪಡುತ್ತಿರುವುದು". ಗಣೇಶನ ಮಾತುಗಳು ಯಾಕೋ ಕೋಪದ ಗುಡುಗಿನಂತೆ ನನಗೆ ಕೇಳಿಸಿತು.

"ಇರಲಿ ಬಿಡು, ಗಣೇಶ," ನಾನು ಸಂತೈಸುವಂತೆ ಹೇಳಿದೆ, "ನೀನು ಹೇಗಿದ್ದರೂ ನಮಗೆ ಚೆನ್ನ. In fact, ನಮಗೆಲ್ಲ ನಿನ್ನ ಡುಮ್ಮಗಿರುವ figureಏ ಮನಸ್ಸಿನಲ್ಲಿ ಬೇರೂರಿದೆ. ಪ್ರಪಂಚದ ಸಮಸ್ತ ಭಾರ ಹೊತ್ತಿರುವ ನೀನು ದಪ್ಪಕ್ಕಿಲ್ಲದೆ ಬಡಕಲಾಗಿರಲು ಸಾಧ್ಯವೇ?"

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X