• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ವೀರರನ್ನು ನೆನೆಯೋಣ

By Staff
|

ಸ್ವಾತಂತ್ರ್ಯ ಸಿಕ್ಕಿ 60 ವರುಷವಾದರೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯೆ? ಜಾಗತೀಕರಣದ ನೆಪದಲ್ಲಿ ಮಾಲ್‌ಗಳು, ಹಣಕಾಸು ಸಂಸ್ಥೆಗಳು ಭಾರತದ ಮೇಲೆ ದಾಳಿ ಮಾಡಲು ನಿಂತಿವೆ. ಕ್ಷುಲ್ಲಕ ವ್ಯಕ್ತಿತ್ವದ ವ್ಯಕ್ತಿಯೊಬ್ಬ ಪರದೇಶದಲ್ಲಿ ಬಂಧಿತನಾದ ಬಗ್ಗೆ ಹುಯಿಲಿಡುವ ನಾವು ಅಸಲಿ ದೇಶಕ್ಕಾಗಿ ಮಡಿಯುತ್ತಿರುವ ವೀರರನ್ನೇ ಮರೆಯುತ್ತೇವೆ. ಸ್ವಾತಂತ್ರೋತ್ಸವದ ನೆವದಲ್ಲಾದರೂ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ವೀರರನ್ನು ನೆನೆಯೋಣ, ಪ್ರಸ್ತುತ ಹೋರಾಡುತ್ತಿರುವ ವೀರರನ್ನು ನೆನೆಯುವ ಪರಿಪಾಠ ಬೆಳಿಸಿಕೊಳ್ಳೋಣ. ನಿಮಗಾಗಿ ಶ್ರೀನಾಥ ಭಲ್ಲೆಯವರ ಪದಬಂಧ.

Independence Day crossword

ಎಡದಿಂದ ಬಲಕ್ಕೆ :

01. ಕಾಳಿಕಾದೇವಿಯ ದರ್ಶನ ಮಾಡಿದ ಗದಾಧರನ ಹೆಸರಿನ ಒಂದು ಭಾಗ (5)

05. ಕಪ್ಪ ಕೊಡಬೇಕೇ ಕಪ್ಪ ಎಂದು ಆಂಗ್ಲರಿಗೆ ಸವಾಲು ಹಾಕಿದ ಕಿತ್ತೂರಿನ ಹೆಣ್ಣು ಹುಲಿ (ಬಲದಿಂದ ಎಡಕ್ಕೆ) (೫)

08. ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು ಎಂದ ಲೋಕಮಾನ್ಯ (3)

09. ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದ ಇವರಿಗೆ ಮಕ್ಕಳೆಂದರೆ ಅತೀವ ಪ್ರೀತಿ (3)

12. ನವಭಾರತದ ಶಿಲ್ಪಿ ಬ್ರಹ್ಮ ಸಮಾಜವನ್ನು ಹುಟ್ಟುಹಾಕಿದಾತ(9)

14. ನನಗೆ ರಕ್ತ ಕೊಡಿ. ನಿಮಗೆ ಸ್ವಾತಂತ್ರ ಕೊಡಿಸುತ್ತೇನೆ ಎಂದು ಕ್ರಾಂತಿ ಕಹಳೆಯೂದಿದ ನೇತಾಜಿ (7)

16. Home Rule Movement ನಲ್ಲಿ ಸಕ್ರಿಯ ಪಾತ್ರವಹಿಸಿದ್ದ ಈತ ಕೇರಳದವರು (5)

18. ಕ್ರಾಂತಿಕಾರಿ ರಾಜಗುರು ಅವರ ಹೆಸರಿನ ಮೊದಲರ್ಧ (4)

20. ಅಮೇರಿಕದವರನ್ನು ಅಣ್ಣ ತಮ್ಮಂದಿರೇ ಅಕ್ಕ ತಂಗಿಯರೇ ಎಂದು ಸಂಭೋದಿಸಿ ಪಾಶ್ಚಿಮಾತ್ಯ ದೇಶದಲ್ಲಿ ಭಾಷಣ ಮಾಡಿ ಹಿಂದೂ ಮತದ ಬಗ್ಗೆ ಆಸಕ್ತಿ ಹುಟ್ಟಿಸಿದ ಸ್ವಾಮೀಜಿ (5)

22. ಶಾಹೀದ್ ಎಂದೇ ಪ್ರಸಿದ್ದಿ ಹೊಂದಿದ್ದ ಕ್ರಾಂತಿಕಾರಿ ಚಿಕ್ಕ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ (ಬಲದಿಂದ ಎಡಕ್ಕೆ) (3)

23. ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಬಾಬು ಅವರ ಹೆಸರಿನ ಕೊನೆಯ ಭಾಗ (3)

24. ತಮ್ಮ ಲೇಖನಗಳ ಮೂಲಕ ಬ್ರಿಟಿಷರ ವಿರುದ್ದ ಹೋರಾಡಿದ ರಾಮಮನೋಹರ (ಬಲದಿಂದ ಎಡಕ್ಕೆ) (3)

27. ಝಾನ್ಸಿಯ ರಾಣಿ ಈ ವೀರ ವನಿತೆ (4)

30. ಏಷ್ಯಾದ ಮೊದಲ British MP ಎಂಬ ಹೆಗ್ಗಳಿಕೆಯ ದಾದಾಭಾಯಿ (4)

31. ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿಸಲು ಹೋರಾಡಿದ ಇವರು ಯಾವ ಪಂಥದವರು? (8)

32. ಭಾರತ ಬಿಟ್ಟು ತೊಲಗಿ ಚಳುವಳಿ ವಿರುದ್ದ ದನಿ ಎತ್ತಿದ ಕಾಂಗ್ರೆಸ್ ವಿರೋಧಿಯ ಹೆಸರಿನ ಹಿಂದೆ ವೀರ ಅಂಟಿದೆ (4)

33. ಕ್ರಾಂತಿಕಾರಿ ಚಟುವಟಿಕೆಗಳು ಹಾಗೂ ಬರವಣಿಗೆಯಿಂದಾಗಿ ಜೈಲುವಾಸಿಯಾದವರು ಬದಲಾಗಿ ಹೊರ ಬಂದು ಶ್ರೀ ಅರಬಿಂದೋ ಆದವರು (6)

34. ಕನ್ನಡ ಲಿಪಿಯನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆದ ಆಚಾರ್ಯ (5)

ಮೇಲಿಂದ-ಕೆಳಕ್ಕೆ :

01. ಗಾಂಧೀವಾದಿಯಾದ ಆಂಧ್ರದ ಸೀತಾರಾಮಯ್ಯನವರ ಹೆಸರಿನ ಒಂದು ಭಾಗ (3)

02. ಅಹಿಂಸಾ ಮಾರ್ಗ ಅನುಸರಿಸಿ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಪಿತಾಮಹ (5)

03. ಬ್ರಿಟಿಷರನ್ನೇ ಹೆಚ್ಚಾಗಿ ಎತ್ತಿ ಹಿಡಿದು ಗಾಂಧೀಜಿ ತತ್ವಗಳನ್ನು ಅಲ್ಲಗಳೆದ ತೇಜ ಬಹದೂರ್ (2)

04. ಲಾಲ್-ಬಾಲ್-ಪಾಲ್ ತ್ರಿಮೂರ್ತಿಗಳ ಈ ಲಾಲ್ ಬ್ರಿಟಿಷರ ಲಾಠಿ ಹೊಡೆತದಿಂದ ಅಸುನೀಗಿದ ಕ್ರಾಂತಿಕಾರಿ ನಾಯಕ (8)

06. CR ಎಂದೇ ಖ್ಯಾತರಾದ ಈ ಚಕ್ರವರ್ತಿ, ಭಾರತ ರತ್ನ ಪುರಸ್ಕೃತ (5)

07. ಹಿಂದೀ ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿಸಿದ ರಾಜರ್ಷಿ ಈ ದಾಸ (10)

10. ಜೈ ಜವಾನ್ ಜೈ ಕಿಸಾನ್ ಮಂತ್ರ ಘೋಷಿಸಿದ ಮಾಜಿ ಪ್ರಧಾನಿ (6)

11. ಭಾರತ-ಪಾಕಿಸ್ತಾನ್ ಎರಡೂ ದೇಶಗಳ ನಾಗರೀಕ ಪ್ರಶಸ್ತಿ ಪಡೆದಿರುವ ಏಕೈಕ ಭಾರತೀಯ ಈ ಮಾಜೀ ಪ್ರಧಾನಿ (6)

13. ಖ್ಯಾತ ಶಿಕ್ಷಕರಾದ ಇವರ ಜನ್ಮ ದಿನವನ್ನು ಶಿಕ್ಷಕರ ದಿನ ಎಂದೇ ಆಚರಿಸಲಾಗುತ್ತದೆ (5)

14. ಮಹಾಕವಿ ಭಾರತಿಯಾರ್ ಎಂದೇ ಖ್ಯಾತಿ ಹೊಂದಿದ್ದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಪ್ರಸಿದ್ದ ಕವಿ (7)

15. ಕ್ರಾಂತಿಕಾರಿಯಾದ ಈತನ ಹೆಸರಿಗೇ ಹಿಂದಿಯ ಸ್ವಾತಂತ್ರ್ಯ ಅಂಟಿದೆ (8)

16. ಗಾಂಧೀವಾದಿ ಈ ಆಚಾರ್ಯ. ಇವರ ಪತ್ನಿ ಸುಚೇತ, ಉತ್ತರಪ್ರದೇಶದ ಮೊದಲ ಮಹಿಳಾ ಮುಖ್ಯಮಂತ್ರಿ (4)

17. ವಂದೇ ಮಾತರಂ ರಚಿಸಿದ ಖ್ಯಾತ ಕವಿ ಹಾಗೂ ಕಥೆಗಾರ (8)

19. ಸ್ವತಂತ್ರ ಭಾರತದ ಮೊದಲ ಗೃಹ ಮಂತ್ರಿ ಈ ಉಕ್ಕಿನ ಮನುಷ್ಯ (5)

20. ಹಲವಾರು ದೇಶಗಳಿಗೆ ಭಾರತೀಯ ರಾಯಭಾರಿಯಾಗಿದ್ದ ನೆಹರೂ ಸಹೋದರಿಯ ಹೆಸರಿನ ಒಂದು ಭಾಗ (5)

21. ಪಹಾರಿ ಗಾಂಧಿ ಎಂಬ ಹೆಸರು ಪಡೆದಿದ್ದ ಕ್ರಾಂತಿಕಾರಿ ಕವಿ ಈ ರಾಮ್ (3)

24. ಮೂರ್ತಿ ಪೂಜೆ ತಕ್ಕುದಲ್ಲ ಎಂದು ವಾದಿಸಿದ ಆರ್ಯ ಸಮಾಜದ ಸ್ಥಾಪಕ ಈ ಸ್ವಾಮೀಜಿ (8)

26. Nightingale of India ಎನಿಸಿಕೊಂಡಿದ್ದ ಈಕೆ ಸ್ವಾತಂತ್ರ್ಯ ಹೋರಾಟಗಾರ್ತಿ, ಕವಿಯಿತ್ರಿ ಇತ್ಯಾದಿ (6)

28. ಅಸ್ಪೃಶ್ಯತೆ ವಿರುದ್ದ ಹೋರಾಡಿದ ನವ ಭಾರತ ಸಂವಿಧಾನದ ಶಿಲ್ಪಿಯ ಹೆಸರಿನ ಮೊದಲರ್ಧ (5)

29. ಭಾರತದ ರಾಷ್ಟ್ರಗೀತೆ ರಚನೆ ಮಾಡಿದ ಶಾಂತಿನಿಕೇತನದ ನೋಬೆಲ್ ಪ್ರಶಸ್ತಿ ವಿಜೇತ (3)

30. ಮೈಸೂರು ಹುಲಿ ಎಂದೇ ಖ್ಯಾತನಾಗಿದ್ದ ಹೈದರಾಲಿಯ ಪುತ್ರ (ಕೆಳಗಿಂದ ಮೇಲಕ್ಕೆ)(5)

ಪದಬಂಧದ ಉತ್ತರಗಳು ಇಲ್ಲಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X