ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ಕರ್ನಲ್ ವಸಂತ್ ಅಂತ್ಯಕ್ರಿಯೆ

By Staff
|
Google Oneindia Kannada News

Col Vasanth cremated with military honoursಬೆಂಗಳೂರು, ಆಗಸ್ಟ್ 02 : ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾಕರನ್ನು ನಿಗ್ರಹಿಸುವಾಗ ಪ್ರಾಣತ್ಯಾಗ ಮಾಡಿದ ಕನ್ನಡಿಗ ವಿ.ವಸಂತ್ ಅವರ ಅಂತ್ಯಕ್ರಿಯೆ ಸರ್ವ ಮಿಲಿಟರಿ ಗೌರವಗಳೊಂದಿಗೆ ಬುಧವಾರ ನೆರವೇರಿತು.

ಸೇನೆಯಲ್ಲಿ ತಮ್ಮ ಸೇವೆಗಾಗಿ ವಿಶಿಷ್ಟ ಸೇವಾ ಮೆಡಲ್ ಪಡೆದಿದ್ದ ಮರಾಠ ಪಧಾತಿ ದಳಕ್ಕೆ ಸೇರಿದ 40 ವರ್ಷದ ಕರ್ನಲ್ ಕಂದಾನರ್ ಪ್ರದೇಶದಲ್ಲಿ ಒಳನುಗ್ಗುತ್ತಿದ್ದ ಉಗ್ರರ ಗುಂಡಿಗೆ ಮಂಗಳವಾರ ಬಲಿಯಾಗಿದ್ದರು.

ಬುಧವಾರ ನಗರಕ್ಕೆ ಬಂದ ಅವರ ಶರೀರವನ್ನು ಅಂತಿಮ ಗೌರವ ಸಲ್ಲಿಸಲು ಅವರ ಸ್ವಗೃಹದಲ್ಲಿ ಇಡಲಾಗಿತ್ತು. ನಂತರ ಮೆರವಣಿಗೆಯಲ್ಲಿ ಅವರ ದೇಹವನ್ನು ತೆಗೆದುಕೊಂಡು ಹೋಗಿ ವಿದ್ಯುತ್ ಚಿತಾಗಾರದಲ್ಲಿ ಅಗ್ನಿ ಸ್ಪರ್ಷ ಮಾಡಲಾಯಿತು.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಸಚಿವ ಎ.ಅಶೋಕ, ಸಂಸದೆ ತೇಜಸ್ವಿನಿ ರಮೇಶ್ ಅವರು ಹುತಾತ್ಮರಿಗೆ ಅಂತಿಮ ನಮನ ಸಲ್ಲಿಸಿದರು. ಕರ್ನಾಟಕ ಮತ್ತು ಕೇರಳ ಉಪವಿಭಾಗದ ಕಮಾಂಡರ್ ಬ್ರಿಗೇಡಿಯರ್ ಕ್ಲಿಮೆಂಟ್ ಸ್ಯಾಮ್ಯುಯೆಲ್, ಇತರ ಹಿರಿಯ ಸೇನಾಧಿಕಾರಿಗಳು, ಪೊಲೀಸರು ಮತ್ತು ನಿವೃತ್ತ ಸೇನಾಧಿಕಾರಿಗಳು, ಡೆಕ್ಕನ್ ಏರ್‌ವೇಸ್‌ನ ನಿರ್ವಾಹಕ ನಿರ್ದೇಶಕ ಕ್ಯಾಪ್ಟನ್ ಗೋಪಿನಾಥ್ ಸೇರಿದಂತೆ ಹಲವರು ಗೌರವ ಸಲ್ಲಿಸಿದರು.

ಮರಾಠಾ ಲೈಟ್ ಇನ್‌ಫಂಟ್ರಿ ರೆಜಿಮೆಂಟ್‌ನ ಸೈನಿಕರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು.

ವಸಂತ್ ಅವರು ಪತ್ನಿ ಸುಶಾಷಿಣಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X