• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಗೋರಿ, ಹಲ್ಗುಣಿ ಮಣೆ, ಚೌಕಾಭಾರ...ಕ್ಯಾಲಿಫ್‌ ಕನ್ನಡಿಗರ ಖೇಲ್‌ ಖಿಲಾಡಿಕಾ!

By Staff
|

Volleyball Gameಆಟೋಟಗಳಿಗೆ ಬೇಸಿಗೆಯ ದಿನಗಳು ಹೇಳಿ ಮಾಡಿಸಿದ ಕಾಲ. ಮಳೆಗಾಲದ ಜಿಟಿಪಿಟಿ, ಚಳಿಯ ನಡುಕ ಹಾಗೂ ಸೆಳೆತದ ಭಯಗಳು ಬಿಸಿಲಿನ ದಿನಗಳಲ್ಲಿಲ್ಲ . ಒಂದಿಷ್ಟು ಬೆವರು ಹರಿಯಬಹುದು, ಸುಸ್ತು ಅನ್ನಿಸಬಹುದಾದರೂ ಆಟೋಟಗಳಿಗೆ ಬೇಸಿಗೆಯೇ ಸೂಕ್ತ . ಈ ಕಾರಣಕ್ಕಾಗಿಯೇ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಸಮ್ಮರ್‌-2003 ಎನ್ನುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಮ್ಮರ್‌-2003 ಹೊರಾಂಗಣ ಚಟುವಟಿಕೆ. ಇನ್ನೂ ಬಿಡಿಸಿ ಹೇಳಬೇಕೆಂದರೆ ಈ ಕಾರ್ಯಕ್ರಮ ಕನ್ನಡ ಸಂಘದ ಕ್ರೀಡಾದಿನ. ವಿವಿಧ ಆಟಗಳು, ಪ್ರದರ್ಶನಗಳು, ರುಚಿಕರ ಊಟ ಎಲ್ಲವೂ ಈ ದಿನದ ಕಾರ್ಯಕ್ರಮದಲ್ಲುಂಟು. ಎಲ್ಲಕ್ಕೂ ಮಿಗಿಲಾಗಿ ಕನ್ನಡಿಗರೆಲ್ಲಾ ಒಟ್ಟಾಗಿ ಸೇರಲೊಂದು ಅವಕಾಶ. ಬೇಕಾದರೆ ಸುವರ್ಣಾವಕಾಶ ಅನ್ನಿ.

ಅಂದಹಾಗೆ, ಕೆಕೆಎನ್‌ಸಿ ಸಮ್ಮರ್‌-2003 ಕಾರ್ಯಕ್ರಮ ನಡೆಯುವ ದಿನಾಂಕ- ಜೂನ್‌ 7ರ ಶನಿವಾರ. ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ ಆಟ ಊಟ ಹಾಗೂ ಮನರಂಜನೆ. ಕಾರ್ಯಕ್ರಮ ನಡೆಯುವ ಸ್ಥಳ : Murdock Park, West San Jose, CA (Wunderlich & Castle Glen). ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗುತ್ತದೆ. ಹೊತ್ತಿಗೆ ಸರಿಯಾಗಿ ಬಂದವರಿಗೊಂದು ಅಚ್ಚರಿಯೂ ಉಂಟು !

ಕ್ರೀಡಾದಿನದ ಸಮಗ್ರ ಸಾಹಿತಿ ಕೆಕೆಎನ್‌ಸಿ ವೆಬ್‌ಸೈಟ್‌ನಲ್ಲುಂಟು. ವಿವರಗಳಿಗೆ ಕ್ಲಿಕ್ಕಿಸಿ-

http://www.kknc.org/events.htm

ಆಟೋಟಗಳಲ್ಲಿ ಭಾಗವಹಿಸಲು ಬಯಸುವವರು ನೋಂದಣೆ ಮಾಡುವುದು ಕಡ್ಡಾಯ. ನೋಂದಾವಣೆ ಈಗಾಗಲೇ ಪ್ರಾರಂಭವಾಗಿದೆ. ಹೆಸರು ರಿಜಿಸ್ಟರ್‌ ಮಾಡಿಸಲು ಸಂಪರ್ಕಿಸಬೇಕಾದ ವೆಬ್‌ಪುಟ-

http://www.kknc.org/sports_registration.htm

ಕೆಕೆಎನ್‌ಸಿ ಸದಸ್ಯರಲ್ಲದವರೂ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆದರೆ, ಸದಸ್ಯರಿಗೆ ಮಾತ್ರ ಟ್ರೋಫಿಗಳನ್ನು ನೀಡಲಾಗುವುದು. ವಯಸ್ಕರ ವಿಭಾಗದಲ್ಲಿ ವಾಲಿಬಾಲ್‌, ಕಬಡ್ಡಿ , ಥ್ರೋಬಾಲ್‌, ಖೋ ಖೋ ಹಾಗೂ ಟಗ್‌ ಆಫ್‌ ವಾರ್‌ ಆಟಗಳಿವೆ. ಮಕ್ಕಳ ವಿಭಾಗದಲ್ಲಿ- ಮೂರು ಕಾಲಿನ ಓಟ, ಚಮಚೆಯಲ್ಲಿ ನಿಂಬೆ, ರನ್ನಿಂಗ್‌ ರೇಸ್‌, ಸ್ಯಾಕ್‌ ರೇಸ್‌, ಸಂಗೀತ ಕುರ್ಚಿ ಆಟಗಳಿವೆ. ವಿಶೇಷ ಆಟಗಳ ಪಟ್ಟಿಯಲ್ಲಿ ಚೌಕಾಭಾರ, ಲಗೋರಿ ಹಾಗೂ ಹಲ್ಗುಣಿ ಮಣೆ ಆಟಗಳಿವೆ. ಹಿರಿಯರಿಗೂ ಆಡಲಿಕ್ಕೆ ಅವಕಾಶವುಂಟು. ಅವರು ನಡಿಗೆಯ ಸ್ಪರ್ಧೆ ಹಾಗೂ ಸಂಗೀತ ಕುರ್ಚಿ ಆಟಗಳಲ್ಲಿ ಪಾಲ್ಗೊಳ್ಳಬಹುದು.

ಸ್ವಯಂ ಸೇವಕರಿಗೆ ಆಹ್ವಾನ

ಕ್ರೀಡಾದಿನದ ಕಾರ್ಯಕ್ರಮಗಳ ಸಂಘಟನೆಗಾಗಿ ಕೆಕೆಎನ್‌ಸಿ ಸ್ವಯಂ ಸೇವಕರ ನಿರೀಕ್ಷೆಯಲ್ಲಿದೆ. ಆಸಕ್ತರು ವಿವರಗಳಿಗಾಗಿ ವೆಬ್‌ಸೈಟ್‌ ಸಂಪರ್ಕಿಸಬಹುದು- http://www.kknc.org/committe.htm

(ಇನ್ಫೋ ವಾರ್ತೆ)

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more