• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೂಮಿಕಾದಲ್ಲಿ ‘ಭಾಷೆಗಳ ಹೋಲಿಕೆ, ತಿನ್ನಲು ಹೋಳಿಗೆ’!

By Staff
|

ಇಂತಹ ಅನ್ಯಭಾಷೀಯ ಪದಗಳು ಮತ್ತು ಕನ್ನಡದಲ್ಲಿ ಅವು ಹಾಸುಹೊಕ್ಕಾಗಿರುವ ವಿಷಯದ ಬಗ್ಗೆ ಚರ್ಚೆ ಈ ಸಲದ ಭೂಮಿಕಾ ಸಾಹಿತ್ಯ ಮಂಥನದಲ್ಲಿ ಮೇ 11ರ ಭಾನುವಾರದ ಕಾರ್ಯಕ್ರಮದಲ್ಲಿ ಮೂಡಿಬಂತು. ಸೋದಾಹರಣ ಚರ್ಚೆಯನ್ನು ‘ನಿಮಗೆ (ನಮಗೆ) ಭಾಷೆ ಇದೆಯೇ?’ ಎಂದೇ ಮುಂತಾದ ಹಾಸ್ಯಚಟಾಕಿಗಳೊಂದಿಗೆ ಮಜವಾಗಿ ನಡೆಸಿಕೊಟ್ಟವರು ಡಾ। ಕುಸುಮಾಧರ ಗೌಡ. 22 ನಿಮಿಷಗಳ ಭಾಷಣಕ್ಕಾಗುವಷ್ಟು ಸಾಮಗ್ರಿಯನ್ನು ಸುಂದರ ಕೈಬರಹದಲ್ಲಿ ಕನ್ನಡದಲ್ಲಿ ಬರೆದುಕೊಂಡು ಬಂದು ಭಾಷಣದ ಪ್ರತಿಗಳನ್ನು ಸಭಿಕರಿಗೆ ಹಂಚಿ ಭಾಷಣವನ್ನೊಮ್ಮೆ ರಸಾಳವಾಗಿ ಓದಿ ಮುಗಿಸಿ ಚರ್ಚೆಯ ಚೆಂಡನ್ನು ಸಭಿಕರ ಕೋರ್ಟಿಗೆ ಬಿಸಾಡಿದರು ಗೌಡರು. ಸಭೆಯಲ್ಲೂ ಡಾ। ಸಿದ್ದಲಿಂಗಯ್ಯ, ನರೇಂದ್ರಕುಮಾರ್‌, ನ್ಯೂಯಾರ್ಕ್‌ನಿಂದ ಬಂದಿದ್ದ ಹರೀಷ್‌ ಕಡ್ಲಬಾಳು, ರಿಚ್ಮಂಡ್‌ನಿಂದ ಬಂದಿದ್ದ ಈಶ್ವರರಾಜು, ಹೆನ್ರಿ ಡಾಂಟೆ (ಇವರು ಮೂಲತಃ ಉಡುಪಿಯವರು) ಇತ್ಯಾದಿ ಭಾಷಾಸಕ್ತರು ‘ತಮಗೆಲ್ಲ ಭಾಷೆ ಇದೆ’ ಎಂಬುದನ್ನು ಸಾಬೀತು ಪಡಿಸಿದರಷ್ಟೇ ಅಲ್ಲ, ಭಾಷೆಯ ಬಗ್ಗೆ ತಮ್ಮ ತಿಳುವಳಿಕೆ, ತಿಳಿಯಬೇಕೆಂಬ ಕುತೂಹಲ ಎರಡೂ ಸಾಕಷ್ಟಿವೆಯೆಂದು ಪ್ರಕಟಪಡಿಸಿದರು.

Dr. Kusumadhara Gowda delivering his speech on Linguisticsಈ ರೀತಿಯ ಚರ್ಚಾ ಕಾರ್ಯಕ್ರಮಗಳಿಂದ ಭಾಷಾಭ್ಯಾಸಿಗಳಿಗೆ ಬಹಳ ಉಪಯುಕ್ತತೆ ಇದೆ. ಡಾ। ಗೌಡರೇ ಹೇಳುವಂತೆ ಇಂದು ಪ್ರಪಂಚದಲ್ಲಿ ಯಾವುದೇ ಜನಾಂಗವು ಮಾತಾಡುವ ಮಾತು-ಭಾಷೆ ಕಲಸುಮೇಲೋಗರವಾಗಿಯೇ ಇರುತ್ತದೆ. ಕನ್ನಡವಾಗಲೀ ಇತರ ಭಾರತೀಯ ಭಾಷೆಗಳಾಗಲೀ ಇದಕ್ಕೆ ಅಪವಾದವಲ್ಲ. ಒಂಥರಾ ಡಾರ್ವಿನ್ನನ ಜೀವವಿಕಾಸವಾದವಿದ್ದಂತೆಯೇ ಭಾಷೆಯದೂ ವಿಕಸನವಾಗುತ್ತದೆ. ಮೊದಲು ‘ರಕ್ಷಣೆ’ಯ ದೃಷ್ಟಿಯಿಂದ ಆದ ಮಾರ್ಪಾಡುಗಳು ಕ್ರಮೇಣ ಅನುವಂಶಿಕವಾಗಿ ಮುಂದುವರಿಯುತ್ತವೆ. ಭಾರತವನ್ನು ಶತಮಾನಗಳ ಕಾಲ ಪರಕೀಯರು ಆಳಿದ್ದರಿಂದ ಮುಖ್ಯವಾಗಿ ಕೋರ್ಟು-ಕಚೇರಿ-ಭೂಮಾಪನ ಇತ್ಯಾದಿಯಲ್ಲಿ ಪಾರ್ಸಿ, ಅರಬಿ ಶಬ್ದಗಳು ಬಹಳವಾಗಿ ಚಾಲ್ತಿಯಲ್ಲಿವೆ. ಜಿಲ್ಲೆ, ತಾಲೂಕು, ತಹಸೀಲ್ದಾರ್‌, ರಶೀದಿ, ಹಾಜರು, ಗೈರುಹಾಜರು, ಸವಾಲು, ಜವಾಬು, ಕಿಲಾಡಿ, ದಲ್ಲಾಳಿ, ಹಜಾಮ, ಖರ್ಜೂರ, ಮೇಜು, ಕುರ್ಚಿ, ಚಾಕು, ಚೂರಿ, ಸಾಬೂನು... ಹೀಗೆ ನಮ್ಮ ದೈನಂದಿನ ಬಳಕೆಯ ಈ ಶಬ್ದಗಳಾವುವೂ ಕನ್ನಡದವಲ್ಲ ! ಅಷ್ಟೇ ಏಕೆ, ಹಕ್ಕು, ಹುಕುಂ, ಕಾಯಿದೆ ಇತ್ಯಾದಿ ಶಬ್ದಗಳ ಮೂಲವನ್ನು ನೋಡಿದರೆ ಕಾಯಿದೆಗೂ ಅಲ್‌-ಕಾಯಿದಾಗೂ ಸಂಬಂಧವಿರಬಹುದೇ? ಎಂದಾಗ ಗೌಡರಿಗೂ ನಗು, ಸಭೆಯಲ್ಲೂ ನಗು!

ಜಾಮೂನು, ಜಹಾಂಗೀರು, ಜಿಲೇಬಿ... ಕೂಡ ಪಾರ್ಸಿ ಮೂಲದ ಶಬ್ದಗಳೆಂದ ಡಾ। ಕುಸುಮಾಧರ ಗೌಡ ಸಭಿಕರ ಬಾಯಲ್ಲಿ ನೀರೂರುವಂತೆ ಮಾಡಿ ಅವರನ್ನು ನಿರಾಶರಾಗಿಸಬಾರದೆಂದು ಮನೆಯಿಂದ ತಾವೇ ಕೈಯಾರೆ ಹೋಳಿಗೆ ಮಾಡಿ ತಂದಿದ್ದರು! ಚರ್ಚಾಕಾರ್ಯಕ್ರಮದ ನಂತರ ಎಲ್ಲರೂ ಹೋಳಿಗೆ ತುಪ್ಪ ಸವಿದದ್ದೇ ಸವಿದದ್ದು.

ಇದ್ದರೆ ಇರಬೇಕು ಇಂತಹ ಡಾಕ್ಟರು - ಔಷಧಿ,ಇಂಜೆಕ್ಷನ್‌ ಕೊಡುವುದು ಮಾತ್ರ ತನಗೆ ಗೊತ್ತು ಎನ್ನದೆ, ಹಾಸ್ಯಚಟಾಕಿಗಳಿಂದ ಕೂಡಿದ ಕನ್ನಡ ಭಾಷಣ ಮಾಡುವವರು, ರಸಮಯ ಭಾಷಣ ಕೇಳಿದ ಮಂದಿಗೆ ತಾವೇ ಮಾಡಿದ ಹೋಳಿಗೆ ತುಪ್ಪ ಬಡಿಸುವವರು! ಇಂಥವರು ನಿಮಗಾರಾದರೂ ಗೊತ್ತೇ?

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more