• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುವೆಂಪು ಸ್ಮರಣಗ್ರಂಥಕ್ಕೆಲೇಖನ ಆಹ್ವಾನ

By Super
|

ನಮಸ್ಕಾರ.

ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಕನ್ನಡ ವಸಂತ ಸಾಹಿತ್ಯೋತ್ಸವದಲ್ಲಿ ಕುವೆಂಪುರವರ ಜನ್ಮಶತಾಬ್ದಿಯ ಅಂಗವಾಗಿ ಕೆಲವು ವಿಶಿಷ್ಟ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆಂದು ನಿಮಗೆ ಈಗ್ಗೆ ಕೆಲವು ದಿನದ ಹಿಂದೆ ತಿಳಿಸಿದ್ದೆವಷ್ಟೆ. ಆ ಕಾರ್ಯಕ್ರಮಗಳ ಒಂದು ಮುಖ್ಯ ಭಾಗವಾಗಿ ಅವರ ಬಗ್ಗೆ ಒಂದು ಸ್ಮರಣಗ್ರಂಥವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅದಕ್ಕಾಗಿ ಈ ಕೆಳಕಂಡ ಸಂಪಾದಕ ಮಂಡಲಿಯನ್ನು ರಚಿಸಿದ್ದೇವೆ:

ನಾಗ ಐತಾಳ (ಪ್ರಧಾನ ಸಂಪಾದಕ), ನಳಿನಿ ಮೈಯ, ಎಚ್‌. ಕೆ. ಚಂದ್ರಶೇಖರ್‌, ಎಂ.ಎಸ್‌. ನಟರಾಜ್‌, ಮತ್ತು ಎಚ್‌. ವೈ. ರಾಜಗೋಪಾಲ್‌ (ಸಹಾಯ ಸಂಪಾದಕರು).

ಈ ಗ್ರಂಥದ ಬಿಡುಗಡೆಯನ್ನು ವಸಂತೋತ್ಸವ ಸಮಾರಂಭದಲ್ಲಿ ನೆರೆವೇರಿಸುತ್ತೇವೆ. ಈ ಯೋಜನೆ ಸಾರ್ಥಕವಾಗಲು ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಹಾಯ, ಸಹಕಾರ ಅತ್ಯವಶ್ಯಕ. ಅದಕ್ಕಾಗಿ ಅಮೆರಿಕದಾದ್ಯಂತ ನೆಲಸಿರುವ ಕನ್ನಡ ಲೇಖಕ ಲೇಖಕಿಯರನ್ನು ಈ ಗ್ರಂಥಕ್ಕೆ ತಮ್ಮ ಲೇಖನಗಳನ್ನು ಕಳಿಸಬೇಕೆಂದು ಈ ಮನವಿ ಸಲ್ಲಿಸುತ್ತಿದ್ದೇವೆ.

ಗ್ರಂಥಕ್ಕೆ ಲೇಖನ ಬರೆಯುವವರು ಈ ಕೆಳಗಿನ ಶೀರ್ಷಿಕೆಗಳಿಗೆ ಸಂಬಂಧ ಪಟ್ಟ ಹಾಗೆ ತಮ್ಮ ಲೇಖನಗಳನ್ನು ಬರೆಯಬೇಕೆಂದು ಕೋರುತ್ತೇವೆ:

ಅ) ಕುವೆಂಪು ಕವನಗಳು (ಭಾವಗೀತೆಗಳು, ಕಥನ ಕವನಗಳು)

ಆ) ಕುವೆಂಪು ಕಾದಂಬರಿಗಳು (ಕಾನೂರು ಹೆಗ್ಗಡತಿ, ಮಲೆಯಲ್ಲಿ ಮದುಮಗಳು)

ಇ) ಕುವೆಂಪು ನಾಟಕಗಳು (ಬೆರಳ್ಗೆ ಕೊರಳ್‌, ಮಹಾರಾತ್ರಿ, ಬಿರುಗಾಳಿ, ರಕ್ತಾಕ್ಷಿ, ಸ್ಮಶಾನ ಕುರುಕ್ಷೇತ್ರ, ಜಲಗಾರ ಇತ್ಯಾದಿ.

ಈ) ಮಕ್ಕಳ ಸಾಹಿತ್ಯಕ್ಕೆ ಕುವೆಂಪು ಕೊಡುಗೆ

ಉ) ನಿಸರ್ಗ ಮತ್ತು ಕುವೆಂಪು

ಊ) ಕುವೆಂಪು ಮೇಲೆ ಪಾಶ್ಚಾತ್ಯ ಸಾಹಿತಿಗಳ ಪ್ರಭಾವ

ಎ) ಕುವೆಂಪು ಬರಹದಲ್ಲಿ ವಿಶ್ವೈಕ್ಯವಾದ (universality)

ಏ) ಕುವೆಂಪು ಪರಂಪರೆ

ಐ) ಕುವೆಂಪು ಭಾಷೆ ಮತ್ತು ಶೈಲಿ

ಒ) ಕುವೆಂಪು ಸಣ್ಣಕತೆಗಳು, ಬಿಡಿ ಬರಹಗಳು

ಓ) ಕುವೆಂಪು ಜೀವನ ದರ್ಶನ (ಅಧ್ಯಾತ್ಮ ಅವರ ಮೇಲೆ ಮಾಡಿದ ಪ್ರಭಾವ)

ಔ) ಕುವೆಂಪು ಮಹಾಕಾವ್ಯ, ‘ಶ್ರೀ ರಾಮಾಯಣ ದರ್ಶನಂ'

ಮೇಲೆ ಕಾಣಿಸಿದ ಶೀರ್ಷಿಕೆಗಳಲ್ಲದೆ, ಕುವೆಂಪುರವರಿಗೆ ಸಂಬಂಧ ಪಟ್ಟಂತೆ, ಸೂಕ್ತವಾಗಿ ಕಂಡು ಬರುವ ಬೇರೆ ವಿಷಯಗಳ ಮೇಲೂ ಲೇಖನ ಬರೆಯಬಹುದು.

ಲೇಖಕರಿಗೆ ಕೆಲವು ಸೂಚನೆಗಳು:

ಲೇಖನಗಳು ಹೆಚ್ಚೆಂದರೆ, 10 - 15 ಪುಟಗಳಿಗೆ ಮೀರದಿರಲಿ.

ಲೇಖನಗಳು ಜನವರಿ 15, 2004ರ ಒಳಗೆ ನಮಗೆ ತಲುಪಬೇಕು.

ಲೇಖನಗಳನ್ನು ಸ್ವೀಕರಿಸುವ, ಸ್ವೀಕೃತ ಲೇಖನಗಳನ್ನು ಅಲ್ಲಲ್ಲಿ ಸೂಕ್ತವಾಗಿ ಮಾರ್ಪಡಿಸುವ ಬಗ್ಗೆ ಅಂತಿಮ ನಿರ್ಧಾರ ಸಂಪಾದಕ ಮಂಡಲಿಯದು. ಅಸ್ವೀಕೃತ ಲೇಖನಗಳ ಬಗ್ಗೆ ಲೇಖಕರಿಗೆ ಸೂಚನೆ ಕೊಡಲಾಗುವುದು.

ಲೇಖನದಲ್ಲಿ ಲೇಖಕರ ಸಂಪೂರ್ಣ ಹೆಸರು ಮತ್ತು ವಿಳಾಸ ಕಾಣಿಸಬೇಕು.

ಲೇಖನದ ಜೊತೆ, ಲೇಖಕರ ಕಿರು ಪರಿಚಯ ಕೊಡುವ ಚಿಕ್ಕ ಟಿಪ್ಪಣಿ ಇರಬೇಕು.

ಲೇಖನಗಳು ಮತ್ತು ಅವಕ್ಕೆ ಸಂಬಂಧಿಸಿದ ವಿವರಗಳು, ಬರಹ 5.0 ನಲ್ಲಿರಬೇಕು.

ಲೇಖನಗಳನ್ನು ವಿವರಗಳೊಂದಿಗೆ ಪ್ರಧಾನ ಸಂಪಾದಕ ನಾಗ ಐತಾಳರಿಗೆ sahityotsava@yahoo.com ವಿಳಾಸಕ್ಕೆ ಜನವರಿ 15, 2004ರ ಒಳಗೆ ತಲಪುವಂತೆ ಕಳಿಸಬೇಕು.

ಈ ಗ್ರಂಥ ಕುವೆಂಪು ಸ್ಮರಣೆಗೆ ನಾವು ತೋರುವ ಗೌರವ. ಆದ್ದರಿಂದ, ಲೇಖನಗಳ ಯೋಗ್ಯತೆಯ ಬಗ್ಗೆ ಸಂಪಾದಕ ಮಂಡಲಿ ತುಂಬ ಮುತುವರ್ಜಿ ವಹಿಸುತ್ತದೆ. ಇನ್ನೊಂದು ವಿಚಾರ: ಇದು ಸ್ಮರಣಗ್ರಂಥವಾದರೂ, ಕೇವಲ ಭಕ್ತಿಯ, ಹೊಗಳಿಕೆಯ ಗ್ರಂಥವಲ್ಲ. ಅಂಥ ಗ್ರಂಥ ಕುವೆಂಪುರವರಿಗೆ ಮೆಚ್ಚಿಕೆಯಾಗುತ್ತಿರಲಿಲ್ಲವೆಂದು ನಮ್ಮ ಅನಿಸಿಕೆ. ಆದ್ದರಿಂದ, ಲೇಖನಗಳು ವಿಚಾರಾತ್ಮಕವಾಗಿರಲಿ, ವಿಮರ್ಶಾತ್ಮಕವಾಗಿರಲಿ. ಹೊಗಳಿಕೆಯಾಗಲೀ, ಟೀಕೆಯಾಗಲೀ ವಿವೇಚನಾತ್ಮಕವಾಗಿರಲಿ, ನಿಷ್ಪಕ್ಷಪಾತವಾಗಿರಲಿ.

ಮೇಲಿನ ವಿಷಯಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಯಸುವವರು, ದಯವಿಟ್ಟು ಈ ಗ್ರಂಥದ ಪ್ರಧಾನ ಸಂಪಾದಕ ನಾಗ ಐತಾಳರನ್ನು nagaaithal@yahoo.com ವಿಳಾಸದಲ್ಲಿ ಸಂಪರ್ಕಿಸಿ.

ಈ ಗ್ರಂಥ ಇಲ್ಲಿ ನೆಲಸಿರುವ ಕನ್ನಡಿಗರ ಸಾಹಿತ್ಯಾಭಿಮಾನಕ್ಕೆ, ವಿಚಾರಶೀಲತೆಗೆ, ಅಭಿರುಚಿಗೆ ಕನ್ನಡಿಯಾಗುವುದೆಂದು ಆಶಿಸುತ್ತೇವೆ.

ನಿಮ್ಮ ವಿಶ್ವಾಸಿ,

ಎಚ್‌.ವೈ. ರಾಜಗೋಪಾಲ್‌

HYR1195@aol.com

(ಕಾರ್ಯನಿರ್ವಾಹಕ ಸಮಿತಿಯ ಪರವಾಗಿ)

English summary
Dr. H.Y.Rajgopal invites articles on KuVemPu books. Rajgopal and friends have decided to bring out a co memorial book on KuVemPu during the Vasantha Sahithyothsava Celebrations to be held at Philadelphia on May, 2004
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X