ಪ್ರೇಕ್ಷಕರ ಮಂತ್ರಮುಗ್ಧರಾಗಿಸಿದ ಕೆಸಿಎ-‘ಗೋವಿನ ಕಥೆ’
*ಶಂಖಂ ಜಗನ್ನಾಥ್, ಇರ್ವೈನ್, ಕ್ಯಾಲಿಫೋರ್ನಿಯಾ
ಕರ್ನಾಟಕ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಹೈಲೈಟ್- ‘ಗೋವಿನ ಕಥೆ’ ನೃತ್ಯ ರೂಪಕ. ನವಂಬರ್ 9ರಂದು‘ಡೈಮಂಡ್ ಬಾರ್ ಕನ್ನಡ ಕಲಿ’ ಶಾಲೆಯ ಮಕ್ಕಳು ಈ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು.
ನನ್ನ ಮನಸ್ಸಿನಲ್ಲಿ ಚಿತ್ರವಾಗಿ ಮಾಸಿ ಹೋಗಿದ್ದ ಹಲವಾರು ಭಾವನೆಗಳು ಗೋವಿನ ಕಥೆ ನೃತ್ಯ ನಾಟಕವನ್ನು ನೋಡಿದಮೇಲೆ ಮರಕಳಿಸಿದವು. ಸಣ್ಣ ವಯಸ್ಸಿನಲ್ಲಿ (ಸುಮಾರು 30 ವರ್ಷದ ಹಿಂದೆ) ಬೆಂಗಳೂರಿನ ಬಾಲಭವನದಲ್ಲಿ ಇದೇ ನಾಟಕವನ್ನು ನೋಡಿದ್ದೆ, ಆ ನೆನಪು ಮತ್ತೆ ಕಣ್ಮುಂದೆ ಬಂತು.
ನಾಟಕದ ಕಥಾವಸ್ತು ಬಹಳ ಹಿಂದಿನದಾದರೂ ನೃತ್ಯ ರೂಪಕ ತನ್ನ ವೈಶಿಷ್ಟತೆಯಿಂದ ರಂಜಿಸಿತು. ಪಾತ್ರಧಾರಿಗಳ ಮುಖಗಳು ‘ಎಲೆಯ ಮರೆಯ ಕಾಯಂತೆ’ ಮುಖವಾಡದ ಹಿಂದೆ ಅಡಗಿದ್ದವು. ಕೇವಲ ಮೂರುವಾರದಲ್ಲೇ ಎಲ್ಲಾ ಮಕ್ಕಳೂ ತಮ್ಮತಮ್ಮ ಪಾತ್ರಗಳನ್ನು ಅಭ್ಯಾಸಮಾಡಿ, ಈ ನಾಟಕದಲ್ಲಿ ತಮ್ಮ ಅರಳು ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಸುಮಾರು 200ಕ್ಕೂ ಹೆಚ್ಚು ಪ್ರೇಕ್ಷಕರ ಮನ ತಣಿಸಿದರು.
ವಲ್ಲೀಶ ಶಾಸ್ತ್ರಿಯವರ ನಿರ್ವಹಣೆ ಮತ್ತು ನಿರ್ದೇಶನ, ಶೋಭಾ ಸಂಜಯರವರ ನೃತ್ಯ ಸಂಕಲನ, ಸುಮಾ ಭಟ್ ಮತ್ತು ಸಂಗಡಿಗರ ವೇಷ ವಿನ್ಯಾಸ, ಪ್ರವೀಣ್ ಡಿ ರಾವ್ CDಯ ಹಿನ್ನೆಲೆ ಗಾಯನ, ಹಾಗೂ ಕತ್ತಲೆ-ಬೆಳಕಿನ ಸಂಕಲನ, ಇವೆಲ್ಲವೂ ಮೇಳಯಿಸಿ ಪ್ರೇಕ್ಷಕರನ್ನೂ ವಿಸ್ಮಯದಲ್ಲಿ ಮುಳುಗಿಸಿದವು.
ಪಾತ್ರಧಾರಿಗಳ ತಾಳಕ್ಕೆ ತಕ್ಕ ನಟನೆ, ಹಾವ ಭಾವಗಳಿಂದ ಕೂಡಿದ ನೃತ್ಯ, ಈ ನಾಟಕವನ್ನು ನೋಡಿದ ಪ್ರೇಕ್ಷಕರನ್ನು ಮಾಯಾಲೋಕಕ್ಕೆ ಕೊಂಡೊಯ್ದಿತ್ತು. ಸೂತ್ರಧಾರರ ನಾಟಕದ ನಿರೂಪಣೆ ಬಹಳ ರಸವತ್ತಾಗಿತ್ತು. ಎಲ್ಲಾ ಹಸುಗಳೂ, ಕರುಗಳೂ ಮತ್ತು ಇತರ ಪಾತ್ರಧಾರಿಗಳೂ ನಾಟ್ಯದ ಛಂದಸ್ಸಿನಿಂದ ಕೂಡಿದ ನಟನೆಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು.
ನಾಟಕದ ಕೆಲವೊಂದು ದೃಶ್ಯದಲ್ಲಿ ಹಸು/ಕರುಗಳ ಆಗಮನ, ನಿರ್ಗಮನಗಳು ಸೂತ್ರಧಾರರ ತೆರೆಯ ಮೂಲಕ ಸುಸೂತ್ರವಾಗಿ ನಡೆಯಿತು (Entering and exiting of artists from the stage through narrator’s virtual backdrop). ಗೊಲ್ಲನ (ಚೈತ್ರ ಬೆಟಗೇರಿ ) ಗೋವುಗಳ ಕರೆ, ಅರ್ಬುದನ (ಅಂಜಲಿ ಹರಿ) ಆರ್ಭಟ ಮತ್ತು ಅಬ್ಬರದ ಕುಣಿತ, ಪುಣ್ಯಕೋಟಿ (ಶೀಲಾ ಭಟ್) ಹಾಗೂ ಕರುವಿನ (ಅರ್ಪಿತಾ ಬಣಜಿ) ಅಗಲಿಕೆ/ಆಲಿಂಗನ ಕಣ್ಣಿಗೆ ಒಂದು ಹಬ್ಬವಾಗಿತ್ತು. ಅರ್ಬುದ ಮತ್ತು ಪುಣ್ಯಕೋಟಿಯ ಸತ್ಯ ಮತ್ತು ವಾಚ್ಯಗಳ ‘ವಾಗ್ವಾದ’ ಪ್ರೇಕ್ಷಕ ಬಳಗದಲ್ಲಿದ್ದ ಎಲ್ಲಾ ಮಕ್ಕಳ ಮನವನ್ನೂ ಸೂರೆಗೊಂಡಿತ್ತು. ಪುಣ್ಯಕೋಟಿಯ ಕರುವಿನಿಂದ ಅಗಲಿಕೆ ಕೆಲವೊಂದು ಪ್ರೇಕ್ಷಕರ ಕಣ್ಣಿನಲ್ಲಿ ಹನಿ ತಂದಿತು.
ನಾಟಕದ ಮಧ್ಯೆ ನಿಶ್ಯಬ್ದವಾದ ಪ್ರೇಕ್ಷಕರನ್ನು ನೋಡಿದಾಗ ಅನ್ನಿಸಿದ್ದು: ಈ ನಾಟಕ ನನ್ನ ಮೂರು ವರ್ಷದ ಮಗ ಸುಹಾಸನಿಂದ ಹಿಡಿದು 75 ವಯಸ್ಸಿನ ತಾತ, ಅಜ್ಜಿಗಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿದೆ ಎಂದು.
ಅಮೇರಿಕಾದಲ್ಲಿ ಹುಟ್ಟಿದ ಕನ್ನಡದ ಮಕ್ಕಳೆಲ್ಲರೂ ಈ ನಾಟಕವನ್ನು ನೋಡಲೇಬೇಕು. ಸತ್ಯವೇ ನಮ್ಮ ತಾಯಿ ತಂದೆ ಎಂದ ಪುಣ್ಯಕೋಟಿ ಕಥೆಗಿಂತ ಮಕ್ಕಳಿಗೆ ದೊಡ್ಡ ನೀತಿಪಾಠ ಬೇರೆ ಯಾವುದಿದ್ದೀತು ?
ಮುಖಪುಟ / ಸಾಹಿತ್ಯ ಸೊಗಡು-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications