Get Updates
Get notified of breaking news, exclusive insights, and must-see stories!

ಬೇ ಏರಿಯಾದಲ್ಲಿ ನಾಗತಿಹಳ್ಳಿ, ಬೇಕಾಗಿದ್ದಾರೆ ನಾಯಕ/ನಾಯಕಿ

Nagathihalli is in Bay Area, wants Hero/Heroine ‘ಅಮೆರಿಕಾ ಅಮೆರಿಕಾ’ ಹಾಗೂ ‘ನನ್ನ ಪ್ರೀತಿಯ ಹುಡುಗಿ’ ಖ್ಯಾತಿಯ ನಾಗತಿಹಳ್ಳಿ ಚಂದ್ರಶೇಖರ್‌ ಮೇ 22ರ ವರೆಗೆ ಮಾತ್ರ ಬೇ ಏರಿಯಾ (ಉತ್ತರ ಕ್ಯಾಲಿಫೋರ್ನಿಯಾ) ದಲ್ಲಿರುತ್ತಾರೆ. ಹೀರೋ/ಹೀರೋಯಿನ್‌ ಆಗುವ ಕನಸು ನಿಮ್ಮದೂ ಆಗಿದ್ದಲ್ಲಿ, ಅದಕ್ಕೆ ಬೇಕಾದ ಅರ್ಹತೆ ಇದ್ದಲ್ಲಿ ನೀವೂ ಒಂದು ಕೈ ನೋಡೇಬಿಡಿ. ಯಾರಿಗೆ ಗೊತ್ತು, ಅದೃಷ್ಟ ನಿಮ್ಮ ಹಣೆಯ ಮೇಲೇ ಬರೆದಿರಬಹುದು.

ತಮ್ಮ ಹೊಸ ಚಿತ್ರಕ್ಕೆ ಹೊಸಮುಖಗಳೇ ಬೇಕೆಂಬ ಕಾರಣಕ್ಕೆ ನಾಗತಿಹಳ್ಳಿ ಈಗಾಗಲೇ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸಂದರ್ಶನ ನಡೆಸಿದ್ದಾರೆ. ಅದೇ ಹುಡುಕಾಟದಲ್ಲೀಗ ಅಮೆರಿಕಾ ಯಾತ್ರೆ.

ಈ ಬಾರಿ ವಾಕ್‌ ಇನ್‌ ಇಂಟರ್‌ವ್ಯೂ ಕೊಂಚ ಭಿನ್ನವಾಗಿದೆ. ಕೇವಲ ಬಯೋಡೇಟಾ, ರೂಪು ನೋಡಿ ಆಯ್ಕೆ ಸಾಧ್ಯವಿಲ್ಲ ಎಂಬುದು ನಾಗತಿ ನಂಬಿಕೆ. ಅದಕ್ಕೇ ಅವರನ್ನು ನೀವು ಒಂದು ವಿಡಿಯೋ ಕೆಸೆಟ್ಟಿನೊಟ್ಟಿಗೆಯೇ ಭೇಟಿಬೇಕು. ಅದರಲ್ಲಿ ನಿಮಗೆ ಇಷ್ಟವಾದ ಯಾವುದೋ ಸಿನಿಮಾದ ಸನ್ನಿವೇಶವನ್ನು ನೀವೇ ನಟಿಸಿ ತೋರಿಸಿದ್ದು ದಾಖಲಾಗಿರಬೇಕು. ನೃತ್ಯ ಇತರೆ ಪ್ರತಿಭೆ ಇದ್ದರೆ, ಅದನ್ನೂ ಕೆಸೆಟ್ಟಿಗೆ ತುಂಬಿಸಿರಬೇಕು.

ಮಾಡೆಲಿಂಗ್‌, ಡ್ಯಾನ್ಸ್‌ನಲ್ಲಿ ಪಳಗಿದವರು ನೀವಾದರೆ ಅದು ಪ್ಲಸ್‌ ಪಾಯಿಂಟು. ಕನ್ನಡ ಬಂದರೆ ಚೆನ್ನ. ಬರದಿದ್ದವರು ಬೇಡವೆಂದೇನೂ ಅಲ್ಲ. ನಟನೆಯ ಬಗ್ಗೆ ಸಾಕಷ್ಟು ತುಡಿತ ಇದೆ ಅನ್ನುವವರೂ ಹಿಂದೇಟು ಹಾಕುವ ಅಗತ್ಯವಿಲ್ಲ. ‘ನನ್ನ ಪ್ರೀತಿಯ ಹುಡುಗಿ’ಯಲ್ಲಿ ದೀಪಾಲಿಗೆ ಖುಲಾಯಿಸಿದ ಅದೃಷ್ಟ ಈ ಬಾರಿ ನಿಮ್ಮಲ್ಲೇ ಯಾರಿಗಾದರೂ ಸಿಕ್ಕರೂ ಸಿಗಬಹುದಲ್ಲವೇ?

ಉತ್ತರ ಕ್ಯಾಲಿಫೋರ್ನಿಯಾದ ಪ್ರತಿಭೆಗಳು ಮುಂದೆ ಬನ್ನಿ. ಅಂದಹಾಗೆ, ನಿಮ್ಮ ವಯಸ್ಸು 18ರಿಂದ 25ರೊಳಗಿರಬೇಕು. ಅಪ್ಪ- ಅಮ್ಮನ ಪೂರ್ಣ ಅನುಮತಿ ಪಡೆದ ನಂತರವೇ ನಿಮ್ಮ ವಿವರ ಹಾಗೂ ಕೆಸೆಟ್‌ ಕಳುಹಿಸಿಕೊಡಿ.

ನಿಮ್ಮ ವಿವರ ಹಾಗೂ ಕೆಸೆಟ್‌ ಅನ್ನು ಇವರಿಗೆ ಅಂಚೆ ಮೂಲಕ ಕಳುಹಿಸಿಕೊಡಿ-
Ram Prasad
President
Kannada Koota of Northern california
3322, Grand Lake Drive
Fremont, CA 94555.

ಆದಷ್ಟು ಓವರ್‌ನೈಟ್‌ ಮೇಲ್‌ ಮಾಡಿ. ಯಾಕೆಂದರೆ, ನಾಗತಿಹಳ್ಳಿ ಇಲ್ಲಿರುವುದು ಮೇ 22ರವರೆಗೆ ಮಾತ್ರ.
(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+