ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕರ್ಣದಲ್ಲಿ ಏ.27-28ರಂದು ಹವ್ಯಕ ಜನಜಾಗೃತಿ ವಿಶ್ವ ಸಮ್ಮೇಳನ

By Oneindia Staff
|
Google Oneindia Kannada News

ಕಡಲ ತಡಿಗೊರಗಿರುವ ಗೋಕರ್ಣ. ಮಹಾಲಿಂಗೇಶ್ವರ ದೇವರ ಸನ್ನಿಧಿ. ತೆಂಗು ಕಂಗುಗಳ ಸಾಲು ಸಾಲು ಮೆರವಣಿಗೆ. ಅಪ್ಪಳಿಸುವ ತೆರೆಗಳ ಸದ್ದಿನೆಡೆಯಲ್ಲಿ ಸುದ್ದಿಯಾಂದು ಬಂದಿದೆ. ವಿಶ್ವದಾದ್ಯಂತ ಇರುವ ಹವ್ಯಕ ಬ್ರಾಹ್ಮಣರು ಒಂದೆಡೆ ಸೇರಲು ನಿಶ್ಚಯಿಸಿದ್ದಾರೆ. ಇದು ಹವ್ಯಕ ಜನಜಾಗೃತಿಯ ವಿಶ್ವ ಸಮ್ಮೇಳನ.

ಏಪ್ರಿಲ್‌ 27 ಮತ್ತು 28ರಂದು ಎರಡು ದಿನಗಳ ಹವ್ಯಕ ಜನ ಜಾಗೃತಿ ವಿಶ್ವ ಸಮ್ಮೇಳನವನ್ನು ಅಗ್ನಿ ಸೇವಾ ಟ್ರಸ್ಟ್‌ ಆಯೋಜಿಸಿದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿಯಿರುವ ಭಧ್ರಕಾಳೀ ಪ್ರೌಢ ಶಾಲಾ ಆವರಣ ಸಮ್ಮೇಳನಕ್ಕಾಗಿ ಸಜ್ಜುಗೊಳ್ಳುತ್ತಿದೆ.

10 ಸಾವಿರಕ್ಕೂ ಹೆಚ್ಚು ಹವ್ಯಕ ಪ್ರತಿನಿಧಿಗಳು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂಬುದು ಆಯೋಜಕರ ಅಂದಾಜು. ಸಮ್ಮೇಳನದಲ್ಲಿ ಹವ್ಯಕ ಬ್ರಾಹ್ಮಣರ ಏಳಿಗೆಗೆ ಸಂಬಂಧಿಸಿದ ಗೋಷ್ಠಿಗಳು, ಸಾಧಕರಿಗೆ ಸನ್ಮಾನ, ಸ್ಮರಣ ಸಂಚಿಕೆ ಬಿಡುಗಡೆ, ವಸ್ತುಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಹವ್ಯಕ ಸಮುದಾಯದಲ್ಲಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾನಿಧಿ ಎಂಬ ನಿಧಿಯಾಂದನ್ನು ಈ ಸಂದರ್ಭದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸಮ್ಮೇಳನಕ್ಕೆ ದಶಲಕ್ಷ ರೂಪಾಯಿಗಳಿಗೂ ಹೆಚ್ಚು ವೆಚ್ಚವಾಗುವ ನಿರೀಕ್ಷೆಯಿದೆ. ಆದ್ದರಿಂದ ಅಭಿಮಾನಿಗಳು ಹಾಗೂ ಹವ್ಯಕ ಸಮುದಾಯದವರು ಧನ ಸಹಾಯ ನೀಡಬೇಕೆಂದು ಆಯೋಜಕರು ಮನವಿ ಮಾಡಿಕೊಂಡಿದ್ದಾರೆ. ಸ್ಮರಣ ಸಂಚಿಕೆಗೆ ಜಾಹೀರಾತು ನೀಡುವವರು, ಸಮ್ಮೇಳನವನ್ನು ಪ್ರಾಯೋಜಿಸಲು ಇಚ್ಛಿಸುವವರು ಧನ ಸಹಾಯ ಮಾಡುವ ಮೂಲಕ ಈ ಐತಿಹಾಸಿಕ ಸಮ್ಮೇಳನವನ್ನು ಪ್ರೋತ್ಸಾಹಿಸಬೇಕೆಂದು ಅಗ್ನಿ ಸೇವಾ ಟ್ರಸ್ಟ್‌ ಕೋರಿದೆ.

ಸಮ್ಮೇಳನದ ಪ್ರತಿನಿಧಿ ಶುಲ್ಕ : 50 ರೂಪಾಯಿಗೆ ಕಡಿಮೆ ಇಲ್ಲದಂತೆ.
ಸ್ವಾಗತ ಸಮಿತಿಯ ಸದಸ್ಯತ್ವ : 250 ರೂಪಾಯಿ ಮತ್ತು ಅದಕ್ಕೂ ಮೇಲ್ಪಟ್ಟು

ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಸಮ್ಮೇಳನ ಆರಂಭವಾಗುತ್ತದೆ. 101 ರೂಪಾಯಿ ಕಾಣಿಕೆ ನೀಡುವುದರೊಂದಿಗೆ ದೇವರ ಕೃಪೆಗೆ ಪಾತ್ರರಾಗಬಹುದು.

ಎಂ.ಓ, ಚೆಕ್‌ ಅಥವಾ ಡಿಡಿಯನ್ನು ಬೆಂಗಳೂರಿನಲ್ಲಿ ನಗದೀಕರಿಸಲು ಅನುಕೂಲವಾಗುವಂತೆ ಕಳುಹಿಸಬೇಕು. ಪ್ರತಿನಿಧಿಗಳಿಗೆ ಮತ್ತು ಸ್ವಾಗತ ಸಮಿತಿಯ ಸದಸ್ಯರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಇರುತ್ತದೆ. ಸ್ವಂತ ಖರ್ಚಿನಲ್ಲಿಯೇ ವಸತಿ ವ್ಯವಸ್ಥೆ ಕಾದಿರಿಸಬೇಕಾದಲ್ಲಿ ಮುಂಚಿತವಾಗಿ ತಿಳಿಸಬೇಕು. ವಿಳಾಸ- ಅಗ್ನಿ ಸೇವಾ ಟ್ರಸ್ಟ್‌, ದೇವಕಿ, ಸರ್ಪೆಂಟೈನ್‌ ರಸ್ತೆ, 11/1 ಕುಮಾರ ಪಾರ್ಕ್‌ ವೆಸ್ಟ್‌ , ಬೆಂಗಳೂರು- 560 020. ಫೋನ್‌ : 080-3440928, ಫ್ಯಾಕ್ಸ್‌ : 080- 3367204

ವಿದ್ಯಾನಿಧಿ: ಹವ್ಯಕ ಸಮುದಾಯದವರು ದೇಶದ ವಿವಿಧೆಡೆಗಳಲ್ಲಿ ಉದ್ಯೋಗ ಸಂಪಾದಿಸಿಕೊಂಡು ಮೇಲೆ ಬಂದಿದ್ದರೂ, ಹಳ್ಳಿಗಳಲ್ಲಿ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಆರ್ಥಿಕ ಬೆಂಬಲ ಸಿಗುತ್ತಿಲ್ಲ . ಆದ್ದರಿಂದ ವಿದ್ಯಾ ನಿಧಿಯೆಂಬ ನಿಧಿಯಾಂದನ್ನು ಸ್ಥಾಪಿಸಿ ಹವ್ಯಕ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ಒದಗಿಸಲು ಉದ್ದೇಶಿಸಲಾಗಿದೆ. ಈ ನಿಧಿಗೆ ಹವ್ಯಕ ಬಾಂಧವರು ನೆರವಾಗಬೇಕೆಂದು ನಿಧಿ ಸಮಿತಿಯಲ್ಲಿರುವ ವಿದ್ವಾನ್‌ ಗಜಾನನ ಜೋಷಿ ಅವರು ಮನವಿ ಮಾಡಿಕೊಂಡಿದ್ದಾರೆ.

ಗೋಕರ್ಣದ ಸುತ್ತ ಮುತ್ತ...
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X