ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಪ್ರಪಂಚ ಸುತ್ತಿ ಬಂದೆ - ಪುಟ 4

By Staff
|
Google Oneindia Kannada News

*ವಿಜಯ ಗುಂ. ರುಈಕರ
ಅಂಟಿಯೋಕ್‌, ಕ್ಯಾಲಿಫೋರ್ನಿಯ, ಯುಎಸ್‌

ಸೌದಿ ಅರೇಬಿಯಾ ದೇಶದ ರಾಜಧಾನಿ ರಿಯಾಧ್‌ ಪಟ್ಟಣ ತುಂಬ ಆಧುನಿಕವಾಗಿದೆ. ಅಲ್ಲಿಂದ ಕೆಲವೇ ಮೈಲಿ ದೂರದಲ್ಲಿ ‘ ಅಲ್‌ ಖರ್ಜ’ ಎಂಬ ಚಿಕ್ಕ ಊರಿದೆ. ಅದರ ಔದ್ಯೋಗಿಕ ಸಭಾಂಗಣದಲ್ಲಿ ಒಮ್ಮೆ ನಾನು ಹೋಗಿದ್ದಾಗ ಆದ ಘಟನೆ ಇದು.

ಆಗ ಇನ್ನೂ ಜೂನ್‌ ತಿಂಗಳು. ಮಧ್ಯಾಹ್ನದಲ್ಲಿ ಉರಿಬಿಸಿಲು ಇದ್ದುದರಿಂದ ಕಾರ್ಖಾನೆಯ ಕೆಲಸಗಾರರು ಬೆಳಗ್ಗೆ 9ಕ್ಕೇ ಕೆಲಸ ಪ್ರಾರಂಭಿಸಿ, ಮಧ್ಯಾಹ್ನ 2 ಗಂಟೆಗೆ ಕೆಲಸದ ದಿನ ಮುಗಿಸುತ್ತಿದ್ದರು. ಅನೇಕರು ತಂತಮ್ಮ ಮನೆಗಳಿಗೆ ವಾಪಾಸ್ಸು ಹೋಗುತ್ತಿದ್ದರೂ, ಇತರೆ ಅನೇಕರಿಗೆ ಎಲ್ಲಾದರೂ ಹೊರಗೆಯೋ ಮನೋರಂಜನೆ, ಕಾಫಿ, ಹರಟೆ ಇತ್ಯಾದಿಗಳಲ್ಲಿ ಕಾಲ ಕಳೆಯುವ ಚಟ ಇತ್ತು.

ಅಲ್‌ ಖರ್ಜ ಊರಿನ ಅಕ್ಕಪಕ್ಕದಲ್ಲಿ ‘ಬೆದೂವಿನ್‌ ’ ವಸತಿ ಸಾಕಷ್ಟಿದೆ. ಸತತವಾಗಿ ವಲಸೆ ಹೋಗುತ್ತಾ , ಮರಳುಗಾಡಿನಲ್ಲಿ ಜೀವನ ಕಳೆಯುವ ತಂಡಗಳುಳ್ಳ ಜನಾಂಗವಿದು. ಅವರೆಲ್ಲರಿಗೆ ಒಂಟೆಯೇ ಜೀವನದ ಆಧಾರ, ಜೀವನದ ಸರ್ವಸ್ವ.

ಒಂದು ಕಾರ್ಖಾನೆಯ ಪರೀಕ್ಷಣೆ ಮುಗಿಸಿ ನಾನು ರಿಯಾಧ್‌ ಪಟ್ಟಣಕ್ಕೆ ಮಧ್ಯಾಹ್ನ 2 ಗಂಟೆಗೆ ಹೊರಡುವ ತಯಾರಿಯಲ್ಲಿದ್ದಾಗ ನನ್ನ ಅಲ್ಲಿನ ಸಹಕಾರಿ ‘ ಮೊಹಮ್ಮದ್‌ ಅಲ್‌ ಹಂತೀರಾ’ ಎಂಬಾತ ನನ್ನ ಬಳಿ ಬಂದ. ರಿಯಾಧ್‌ಗೆ ನಾನು ಕೂಡಲೇ ಹಿಂತಿರುಗಿ ಹೋಗುವುದು ಅಗತ್ಯವೇ ಎಂದು ಕೇಲಿದ. ನನ್ನ ಮರುದಿನದ ಕೆಲಸ ರಿಯಾಧ್‌ನಲ್ಲಿಯೇ ಇದ್ದುದರಿಂದ ಆ ದಿನದ ಸಂಜೆಯೆಲ್ಲ ಬಿಡುವೇ ಇತ್ತೆಂದು ನಾನವನಿಗೆ ಹೇಳಿದೆ. ನಿಮಗೆ ಇಷ್ಟವಿದ್ದರೆ, ‘ ಅಸಲಾಗಿ ಸೌದಿ ಅರೇಬಿಯಾ ಸಂಸ್ಕೃತಿಯನ್ನು ’ ನಿಮ್ಮ ಅತಿಥಿ ಸತ್ಕಾರವಾಗಿ ನಿಮಗೆ ತೋರಿಸುತ್ತೇನೆ, ಬನ್ನಿ’ ಎಂದ ಆತ. ಬೆದುವಿನ್‌ ತಂಡ ಒಂದರ ಒಂಟೆಗಳ ಹರಾಜನ್ನು ನೋಡಲು ನಾವಿಬ್ಬರೂ ಹೋದೆವು ! ‘ customer entertainment ‘ ಎಂದು, ಊಟ ಹಾಕುವುದು, ಬೇಸ್‌ ಬಾಲ್‌ ಮತ್ತಿತರ ಪಂದ್ಯಗಳ, ಅಪೆರಾ, ನಾಟಕಗಳ ಟಿಕೆಟುಗಳನ್ನು ತೆಗೆಸಿ ಗಿರಾಕಿಗಳನ್ನು ಮನೋರಂಜಿಸುವುದು, ಇದೇ ಸಾಮಾನ್ಯವಾಗಿ ತಿಳಿದಿದ್ದ ನನಗೆ ಒಂಟೆಗಳ ಹರಾಜು ನೋಡುವುದು ಒಂದು ತೀರಾ ಹೊಸ ಅನುಭವವಾಗಿತ್ತು. ಇಂದೊಂದು ಕೌಟುಂಬಿಕ ಪರಿಕ್ರಮ, ಗಂಡ ಹೆಂಡತಿ, ಮಕ್ಕಳು ಅಜ್ಜ ಅಜ್ಜಿ ಮೊಮ್ಮಕ್ಕಳೆಲ್ಲರೂ ಸೇರಿ ಒಂಟೆಗಳ ಹರಾಜಿಗೆ (ನಮ್ಮ ಹರಿಹರದ ಮಂಗಳವಾರದ ಸಂತೆಗೆ ಹೋದಂತೆ )ಹೋಗುವುದು ಇಲ್ಲಿ ಸಾಮಾನ್ಯ. ಅರಬ್‌ ಮತ್ತು ‘ ಬೆದುವಿನ್‌’ ಸಂಸ್ಕೃತಿಗಳ ಅದೊಂದು ವೈಶಿಷ್ಟ್ಯ. ಅಲ್ಲಿ ತಿಂಡಿಯೆಂದರೆ, ಖಜೂರಿಯ ಐಸ್‌ಕ್ರೀಂ(dates ice cream) , ಬಗೆಬಗೆಯ ಸಿಹಿ ತಿಂಡಿಗಳು (ಬಹುಶಃ ಅಕ್ಕಿ ಗೋಧಿಯ ಹಿಟ್ಟಿನಲ್ಲಿ ಸಕ್ಕರೆ ಸೇರಿಸಿ, ಕರಿದ ಉಂಡಿಗಳು) ಅವನ್ನು ಸಾಕಷ್ಟು ತಿಂದು, ಅರೇಬಿಕ್‌ ಕಾಫಿ ಕುಡಿದು ಪ್ರಚಂಡ ಪ್ರಮಾಣದಲ್ಲಿ ಜನಸಂದಣಿಯ ತಿಕ್ಕಾಟ, ಬೆಲೆಯನ್ನು ಕುರಿತು ವಾದ ವಿವಾದಗಳು, ನೋಡಿದಾಗ ಭಾರತಕ್ಕೆ ಬಂದಂತೆಯೇ ನನಗೆ ಅನ್ನಿಸಿತ್ತು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X