ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಠ್ಠಲ ನಾಮತುಪ್ಪವ ಬೆರಸಿ...ನಾರ್ವಾಕ್‌ನಲ್ಲಿ ಪುರಂದರದಾಸರ ಸ್ಮರಿಸಿ!

By Staff
|
Google Oneindia Kannada News

ದಾಸ ಶ್ರೇಷ್ಠ ಪುರಂದರ ದಾಸರನ್ನು ನೆನೆವುದಕ್ಕೊಂದು ಕಾರಣ ಬೇಕೆ ?
ಬ್ಯಾಂಕ್‌ ಬ್ಯಾಲೆನ್ಸ್‌ ಸೊನ್ನೆಯಾದಾಗ, ಮನೆಯಲ್ಲಿ ಜಗಳ ಕಾದಾಗ ‘ಕಲ್ಲಾಗಿ ಇರಬೇಕು ಕಠಿನ ಭವ ತೊರೆಯಾಳಗೆ.. ’ ಎಂದು ಗುನುಗಿಕೊಳ್ಳುವುದಿಲ್ಲವೇ ? ಶುಕ್ರವಾರದ ಪೂಜೆಗೆ ಮನೆಯವರೆಲ್ಲ ಸೇರಿ ‘ಭಾಗ್ಯದಾ ಲಕ್ಷ್ಮಿ ಬಾರಮ್ಮ ’ ಎಂದು ಕರೆಯುವುದಿಲ್ಲವೇ? ಮತ್ತೆ ‘ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ, ವಿಠ್ಠಲ ನಾಮ ತುಪ್ಪವ ಬೆರಸಿ ಬಾಯ ಚಪ್ಪರಿಸಿರೋ...’ ಎಂದು ಮನೆ ಮಕ್ಕಳೊಂದಿಗೆ ಖುಷಿಯಿಂದ ಹಾಡಿ ಕೃತಾರ್ಥರಾಗುವುದಿಲ್ಲವೇ! ಎಲ್ಲವೂ ಸರಿ. ಆದರೇ ಪುರಂದರ ಜಯಂತಿಯಂದು ವಿಶೇಷ ಬೇಡವಾ? ಇದೆ- ಓದಿ.

ಈ ಪರಿಯ ಜೀವನದ ಕಲ್ಲುಮುಳ್ಳುಗಳನ್ನು ಹಾಡುಗಳಲ್ಲಿ ನೇಯ್ದ ಪುರಂದರ ದಾಸರ ದಿನಾಚರಣೆ ಕಾರ್ಯಕ್ರಮ ನಾರ್ವಾಕ್‌ನ ಸನಾತನ ಧರ್ಮ ದೇವಸ್ಥಾನದಲ್ಲಿ ನಡೆಯಲಿದೆ. ಫೆಬ್ರವರಿ 2ರ ಶನಿವಾರ ಬೆಳಗ್ಗೆ 8.30ರಿಂದ ಸಂಜೆ 5ರವರೆಗೆ ಪುರಂದರ ದಾಸರ ಸಾಲು ಹಾಡುಗಳ ಗಾಯನ. ಹಾಗೆ ನೋಡಿದರೆ ಅಂದು ತ್ಯಾಗರಾಜರ ಪುಣ್ಯ ತಿಥಿಯೂ ಹೌದು.

ಪುರಂದರ ದಾಸರ ಹಾಡುಗಳ ಕೇಳುವ ಈ ಅಪೂರ್ವ ಕಾರ್ಯಕ್ರಮ ನಡೆಯುವ ಸ್ಥಳ ಗುರುತು ಹಾಕಿಕೊಳ್ಳಿ-
sanatan dharma temple,
15311 pioneer Boulevard, norwalk, ca 9070.

ಕಾರ್ಯಕ್ರಮದಲ್ಲಿ ನೀವು ಹಾಡಬಹುದು. ವೈಯಕ್ತಿಕ ಅಥವಾ ತಂಡದೊಂದಿಗೆ ಹಾಡಲು ಇಚ್ಛಿಸುವವರು ಸಂಘಟಕರನ್ನು ಸಂಪರ್ಕಿಸಿ. ಸ್ವಯಂಸೇವಕರಾಗ ಬಯಸುವವರಿಗೆ ಸ್ವಾಗತವಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವಿಳಾಸ:

Rama & Surya Prakash: 6263333734 Email: [email protected]Usha Nath: 5624214655 Email: [email protected]
Amrutha & Ramesh Basavapatna: 5629240406 Email: [email protected]
Prema & B.N. Nagaraj: 7144411420 Email : [email protected]
Srinivas & Suma Bhat: 9096233185 Email: [email protected]
Sheela Prabhakar: 8055843479 Email: [email protected]

Directions:
91West / Pioneer Blvd exit / Right onto Pioneer Blvd. (going towards North) / after Alondra Blvd, look for the Temple on your left side.

91East / Pioneer Blvd exit / Left onto Pioneer Blvd. (going towards North) / after Alondra Blvd, look for the Temple on your left side.

ದಾಸರೆಂದರೆ ಪುರಂದರ ದಾಸರಯ್ಯ ಎಂದು ಸಮಕಾಲೀನ ಸಹವರ್ತಿ ದಾಸರಿಂದಲೇ ಹೊಗಳಿಸಿಕೊಂಡ ಅಗ್ಗಳಿಕೆ ಪುರಂದರ ದಾಸರದು. ಭವ ಸಾಗರದ ಏಳು ಬೀಳುಗಳನ್ನು, ಇಷ್ಟ ಕಷ್ಟಗಳನ್ನು , ಚಿತ್ತ ವಿಕಾರಗಳನ್ನು ಸರಳಗನ್ನಡದಲ್ಲಿ ಹಿಡಿದಿಡುವುದರಲ್ಲಿ ಪುರಂದರರು ಅದ್ವಿತೀಯರು. ಕಾರ್ಯಕ್ರಮದಲ್ಲಿ ಅವರ ಕೀರ್ತನ ರಸಾಯನಕ್ಕೆ ಕಿವಿಯಾಡ್ಡುವ ಮುನ್ನ ಅವರ ಒಂದು ಕೀರ್ತನೆ ಓದಬೇಕೆ? ಕ್ಲಿಕ್ಕಿಸಿ...

(ಇನ್ಫೋ ವಾರ್ತೆ)

ಪೂರಕ ಓದಿಗೆ..

ಪುರಂದರದಾಸರ ನೆನೆನೆನೆ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X